ಶಿವಮೊಗ್ಗ

ಲಡಾಕ್‌ಗೆ ಬುಲೆಟ್‌ನಲ್ಲಿ ಪ್ರಯಾಣ

Published On :

ಶಿವಮೊಗ್ಗ: ಶಿವಮೊಗ್ಗದ 15 ಮಂದಿ ಸಾಹಸಿಗಳು ಜು.16ರಂದು ದೇಶದ ಶಿಖರ ಲಡಾಕ್‌ನಲ್ಲಿ ಬುಲೆಟ್ ಟೆಂಪಲ್ ಸಂಸ್ಥೆ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಬುಲ್ಸ್ ಆಫ್ ಶಿವಮೊಗ್ಗ ತಂಡದ ಇಬ್ಬರು ಸದಸ್ಯರು ಶನಿವಾರ ಮುಂಜಾನೆ ಶಿವಮೊಗ್ಗದಿಂದ ತಮ್ಮ ಬುಲೆಟ್ ದ್ವಿಚಕ್ರ ವಾಹನದಲ್ಲಿ ಲಡಾಕ್‌ನತ್ತ ಹೊರಟರು. ಈ ಸಾಹಸಿಗಳನ್ನು ಅಭಿಮಾನಿಗಳು, ಕುಟುಂಬದವರು ಆತ್ಮೀಯವಾಗಿ ಬೀಳ್ಕೊಟ್ಟರು. ಒಟ್ಟು 35 ದಿನಗಳ ಬುಲೆಟ್ ಪ್ರವಾಸ ಶನಿವಾರದಿಂದ ವಿದ್ಯುಕ್ತವಾಗಿ ಆರಂಭವಾಗಿದೆ.
ಈಗಾಗಲೇ ನಾಲ್ವರು ಸದಸ್ಯರು ಪೂನಾ ತಲುಪಿದ್ದು, ಅಲ್ಲಿಂದ 6 ಮಂದಿ ಚಂಡಿಘಡಕ್ಕೆ ತೆರಳುವರು. ಚಂಡಿಗಡದಿಂದ ಬುಲ್ಸ್ ಆಫ್ ಶಿವಮೊಗ್ಗ ತಂಡದ 15 ಸದಸ್ಯರು ಬುಲೆಟ್‌ನಲ್ಲಿ ಲಡಾಕ್‌ನತ್ತ ಹೊರಡಲಿದ್ದಾರೆ.
ಲಡಾಕ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಯಿಂದ ಬುಲೆಟ್‌ನ ಮೂಲಕವೇ ಆಗಮಿಸುತ್ತಿದ್ದಾರೆ. ವಿದೇಶೀಯರೂ ಸಹ ಪಾಲ್ಗೊಳ್ಳುವುದು ವಿಶೇಷ.
ಶಿವಮೊಗ್ಗ ಸಾಹಸಿಗಳ ಒಟ್ಟು ಪ್ರಯಾಣ 10 ಸಾವಿರ ಕಿಲೋಮಿಟರ್‌ನಷ್ಟಾಗಲಿದ್ದು, ಶನಿವಾರ ಶೇಖರ್ ಹಾಗೂ ಕೆನಿತ್ ಹರ್ಷ ಲಡಾಕ್‌ನತ್ತ ಹೊರಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.