ಕೊಡಚಾದ್ರಿಯಲ್ಲಿ ಭೂ ಕುಸಿತ: ಸಂಚಾರಕ್ಕೆ ತೊಂದರೆ
ಕ.ಪ್ರ.ವಾರ್ತೆ, ಹೊಸನಗರ, ಜು.7
ಕಳೆದ ಎರಡುವಾರದಿಂದ ಸುರಿದ ಮಳೆಗೆ ತಾಲೂಕಿನ ಹುಂಚಾ ಹೋಬಳಿ ಮತ್ತು ನಗರ ಹೋಬಳಿಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.
ಕೊಡಚಾದ್ರಿ ಗಿರಿಗೆ ಸಾಗುವ ರಸ್ತೆ ಪಕ್ಕದ ಧರೆ ಕುಸಿದು ಸಂಪರ್ಕಕ್ಕೆ ಅಡ್ಡಿಯಾಗಿದೆ. ಕಣ್ಕಿ ಬೇಳೂರು ಮಾರ್ಗದ ಸೇತುವೆ ಮತ್ತು ಅಡಗೋಡಿ ಗ್ರಾಮ ಲಕ್ಷ್ಮೀಪುರ ರಸ್ತೆಯ ಮೋರಿಯ ಕಲ್ಲುಗಳು ಚದುರಿದ್ದು ಸಂಪರ್ಕಕ್ಕೆ ಸಂಚಕಾರ ಎದುರಾಗುವ ಆತಂಕ ಎದುರಾಗಿದೆ. ಸಂಪೇಕಟ್ಟೆ ಸರ್ಕಾರಿ ಶಾಲೆಯ ಪಕ್ಕದ ಧರೆ ಕುಸಿದು ನೀರು ವ್ಯಾಪಕವಾಗಿ ನುಗ್ಗಿಬಂದ ಪರಿಣಾಮ ಶಾಲಾ ಕಟ್ಟಡಕ್ಕೆ ಕುತ್ತು ತಂದಿದೆ. ತಾಲೂಕಿನ ಕೆಲವಡೆ ಗದ್ದೆ ಜಮೀನು ಮತ್ತು ತೋಟಗಳಿಗೆ ನೀರು ನುಗ್ಗಿ ಹಾನಿಯಾದ ವರದಿಯಾಗಿದೆ.
ಪರಿಶೀಲನೆ: ಕೊಡಚಾದ್ರಿ ಗಿರಿಯ ಧರೆ ಕುಸಿತ ಸೇರಿದಂತೆ ಮಳೆಯಿಂದ ಹಾನಿ ಸಂಭವಿಸಿದ ಪ್ರದೇಶಗಳಿಗೆ ಜಿಪಂ ಎಇಇ ಮಂಜುನಾಥ ದೇಸಾಯಿ, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ಅಮ್ರಪಾಲಿ ಸುರೇಶ್, ಗ್ರಾಪಂ ಸದಸ್ಯರಾದ ಚಂದ್ರಮೌಳಿ, ಮೋಹನಶೆಟ್ಟಿ, ಸ್ಥಳೀಯ ಮುಖಂಡರಾದ ದೊಡ್ಡಮನೆ ಲಕ್ಷ್ಮೀನಾರಾಯಣ, ಕರುಣಾಕರಶೆಟ್ಟಿ, ಪುಟ್ಟಪ್ಪ, ಶ್ರೀಕಾಂತ್ ಮತ್ತಿತರರು ಪರಿಶೀಲಿಸಿದರು.
ಹಾನಿ ಪ್ರದೇಶಗಳ ಪಟ್ಟಿಮಾಡಿದ ಜಿಪಂ ಎಇಇ ಮಂಜುನಾಥ ದೇಸಾಯಿ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದರು.
ಮಳೆ ವಿವರ: ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು ನಗರ ಹೋಬಳಿಯಲ್ಲಿ ಮಳೆ ಹೆಚ್ಚಿದೆ. ಮಾಣಿಯಲ್ಲಿ 167, ಯಡೂರು 103, ಹುಲಿಕಲ್ 165, ಮಾಸ್ತಿಕಟ್ಟೆ 130, ಕರಿಮನೆ 65, ಮತ್ತಿಮನೆ 71, ನಗರ 80, ಹೊಸನಗರದಲ್ಲಿ 48 ಮಿಮೀ ಮಳೆಯಾಗಿದೆ. 594.36 ಮೀ ಗರಿಷ್ಠ ಮಟ್ಟದ ಮಾಣಿ ಜಲಾಶಯ 581.13 ಮೀ ತಲುಪಿದ್ದು 7761 ಕ್ಯುಸೆಕ್ ನೀರಿನ ಒಳಹರಿವು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

