ಬಿಎಸ್‌ವೈಗೆ ಬಿಜೆಪಿ ಟಾಂಗ್
ಶಿವಮೊಗ್ಗ: ಬಿಜೆಪಿ-ಕೆಜೆಪಿ ವಿಲೀನದ ಚರ್ಚೆ ನಡೆದಿರುವಾಗಲೇ ಬಿಜೆಪಿ ವಕ್ತಾರರು ಬಾಂಬ್ ಒಂದನ್ನು ಸಿಡಿಸಿದ್ದು, ಯಡಿಯೂರಪ್ಪನವರ ಹೆಸರು ಪ್ರಸ್ತಾಪಿಸದೇ ತೀಕ್ಷ್ಣವಾಗಿ ಟಾಂಗ್ ನೀಡಿದ್ದಾರೆ
ನೀವು ಬಂದರೆ ನಿಮ್ಮ ಜೊತೆಗೆ, ನೀವು ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವೇ ಎದುರಾದರೆ ಧೈರ್ಯದಿಂದ ನಿಮ್ಮನ್ನು ಎದುರಿಸುತ್ತೇವೆ...
ಹೀಗೆಂದು ಬಿಜೆಪಿ ವಕ್ತಾರ ಆಯನೂರು ಮಂಜುನಾಥ್ ಪರೋಕ್ಷವಾಗಿ ಬಿ.ಎಸ್.ಯಡಿಯೂರಪ್ಪನವರನ್ನು ತಿವಿದಿದ್ದಾರೆ.
ಇಲ್ಲಿನ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರ ಆಯ್ಕೆ ನಂತರ ಅಭಿನಂದನಾ ಭಾಷಣ ಮಾಡಿದ ಅವರು ಈ ಹೇಳಿಕೆಯನ್ನು ಪ್ರಸ್ತಾಪಿಸಿದರು.
ಹೋರಾಟಗಾರರ ಪಕ್ಷ: ರಾಜಕೀಯದಲ್ಲಿ ಉಬ್ಬರ ಇಳಿತ ನೋಡಬೇಕಾಗುತ್ತದೆ. ಮತ್ತೆ ಮತ್ತೆ ಗುರಿ ಮುಟ್ಟುವ ಕೆಲಸ ಕಾರ್ಯಕರ್ತರದ್ದಾಗಬೇಕು. ನಮ್ಮದು ಹೋರಾಟಗಾರರ ಪಕ್ಷ, ಹೋರಾಟಕ್ಕಿಳಿದು ಪಕ್ಷ ಬಲಪಡಿಸೋಣ ಎಂದು ಅವರು ಹೇಳಿದರು.
ಇದೇ ವೇದಿಕೆಯಲ್ಲಿ ಸಂಜೆ ನಡೆದ ಶಿವಮೊಗ್ಗ ಗ್ರಾಮಾಂತರ ಘಟಕದ ಅಧ್ಯಕ್ಷರ ಆಯ್ಕೆ ನಂತರ ಮಾತನಾಡಿದ ಆಯನೂರು ಮಂಜುನಾಥ್ ಪುನಃ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು.
ಕಮಲವನ್ನು ಬಿಸಾಕಿ ಹೋದವರು ತಮ್ಮ ನೆತ್ತಿ ಮೇಲೆ ಕಮಲ ಇಟ್ಟುಕೊಂಡು ಬಂದರೆ ಮಾತ್ರ ಪಕ್ಷದೊಳಗೆ ಒಳ್ಳೆ ಬೆಳವಣಿಗೆ ಕಾಣಲು ಸಾದ್ಯ ಎಂದರು.
ಇಲ್ಲಿಗೆ ಬರಲೇಬೇಕು: ಬಿಜೆಪಿ ಮುಗಿಸಲು ಹೊರಟರವೆಲ್ಲಾ ಬಿಜೆಪಿ ಮಡಿಲಿಗೆ ಬರಲೇ ಬೇಕು. ಬಿಜೆಪಿ ಎಂಬ ತಾಯಿ ಮಡಿಲ ರಕ್ಷಣೆ ಬಯಸಲೇಬೇಕು ಎಂದು ಹೇಳಿದು ಅವರು, ಯಾರು ಬಂದರೂ, ಬಾರದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಖಂಡಿತವಾಗಿ ಗೆಲ್ಲುತ್ತದೆ ಎಂದು ತಿಳಿಸಿದರು.
ಪಕ್ಷದ ಕಾಯಕರ್ತರು ಶ್ರಮವನ್ನೆಲ್ಲಾ ಧಾರೆ ಎರೆದು ಗೆಲ್ಲಿಸಿದವರೇ ಅದನ್ನೆಲ್ಲಾ ಮರೆತು ಬೇರೆ ಪಕ್ಷಕ್ಕೆ ಹೋಗುತ್ತಾರೆ. ಪಕ್ಷಕ್ಕೆ ಯಾರು ಬರುತ್ತಾರೋ, ಯಾರು ಬರುವುದಿಲ್ಲ ಎಂಬುದು ಮುಖ್ಯವಲ್ಲ. ನಿಜವಾದ ಕಾರ್ಯಕರ್ತರು ಯಾವುದೇ ಗೊಂದಲ ಇಟ್ಟುಕೊಳ್ಳದೇ ಮುಂದಿನ ಚುನಾವಣೆಗೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಮೋದಿ ಹವಾ: ಒಮ್ಮೆ ನರೇಂದ್ರ ಮೋದಿ ಗೆದ್ದರೆ ಎಲ್ಲರೂ ತರಗೆಲೆ ಆಗುತ್ತಾರೆ, ಆಗ ಮೋದಿ ಹವಾ ಏನು ಎಂದು ಗೊತ್ತಾಗುತ್ತದೆ. ಜೊತೆಗೆ ಬಿಜೆಪಿ ಎಂದರೆ ಏನು ಎಂಬುದು ರಾಷ್ಟ್ರಮಟ್ಟದಲ್ಲಿ ಹೆಸರಾಗುತ್ತದೆ. ಕಾಂಗ್ರೆಸ್‌ನವರೇ ಮೋದಿಯವರ ವರ್ಚಸ್ಸನ್ನು ಕಂಡು ಬೆರಗಾಗಿದ್ದಾರೆ. ಮೋದಿಯವರ ಹವಾ ದೇಶದಲ್ಲಿರುವ ಯುವಕರನ್ನು ಪ್ರೇರೇಪಿಸಿದೆ ಮತ್ತು ದೇಶದಲ್ಲಿ ನಡೆಯುವ ಬಾಂಬ್ ಸ್ಪೋಟ ಮತ್ತಿತರ ವಿದ್ರೋಹಿ ಚಟುವಟಿಕೆ ತಡೆಯಲು ಬ್ರಹ್ಮಚಾರಿ ವ್ಯಕ್ತಿ ಬೇಕು. ಆ ಹೆಸರೇ ಮೋದಿ. ಅವರ ಹೆಸರು ಕೇಳಿದರೇ ವಿದ್ಯುತ್ ಸಂಚಾರ ಉಂಟಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

