ಕುವೆಂಪು ವಿವಿ 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟ
ಶಿವಮೊಗ್ಗ: ಮೇ-ಜೂನ್ 2013ರಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯದ ಬಿಕಾಂ ಮತ್ತು ಬಿಬಿಎಂ ಆರನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು, ಎಸ್ಎಂಎಸ್ ಮೂಲಕವೂ ನೀಡಲಾಗುತ್ತಿದೆ. ಎಸ್ಎಂಎಸ್ ಮೂಲಕ ಫಲಿತಾಂಶವನ್ನು ಪಡೆಯಲು ಮೊಬೈಲ್ ಮೂಲಕ ಔಕಎಡಠಛ್ಛಜಓ್ಖಖಡಠಛ್ಛಜ ಖಜ್ಜ್ಝಡಡಿಜ್ಠಃ್ಟಡಠಛ್ಛಜಖಜಟಜಡಡಿಜ್ಠ ನಮೂದಿಸಿ 56070 ನಂಬರ್ಗೆ ಕಳುಹಿಸಿ ಫಲಿತಾಂಶವನ್ನು ಪಡೆಯಬಹುದಾಗಿದೆ. (ಉದಾಹರಣೆಗೆ ಸ್ನಾತಕ ಪದವಿ ಆರನೇ ಸೆಮಿಸ್ಟರ್ನ ಫಲಿತಾಂಶಕ್ಕಾಗಿ ಔಕಎ ಓ್ಖಖ ಈ1000001 6) ಫಲಿತಾಂಶವನ್ನು ವೆಬ್ಸೈಟ್ ವಿಳಾಸ ಢಿಢಿಢಿ.್ಞ್ಡಢಜಟಠ್ಡ.ಛ್ಛ.್ಝಟಿ ಮತ್ತು ್ಞ್ಡಡ.ಟ್ಟ್ಜ್ಝಡಣಡ.್ಟ್ಠ್ಜ ಗಳಲ್ಲಿ ಪಡೆಯಬಹುದಾಗಿದೆ.
ಪರಿಹಾರಕ್ಕೆ ಹೆಸರು ನೋಂದಾಯಿಸಿ
ಶಿವಮೊಗ್ಗ: ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಲ ಸೌಲಭ್ಯಕ್ಕಾಗಿ ಬ್ಯಾಂಕುಗಳಿಗೆ ಸಾಲದ ಅರ್ಜಿಯನ್ನು ಸಲ್ಲಿಸಿದ್ದು, ಸಾಲ ಮಂಜೂರಾತಿಯಲ್ಲಿ ಅಡಚಣೆ ಉಂಟಾದಲ್ಲಿ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಶೀಘ್ರದಲ್ಲಿ ಸಭೆ ಕರೆದು ಚರ್ಚಿಸಲು ಉದ್ದೇಶಿಸಿದೆ. ಅರ್ಹ ಉದ್ದಿಮೆದಾರರು ತಮ್ಮ ವಿವರಗಳೊಂದಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ರಾಜೇಂದ್ರನಗರ, 100ಅಡಿ ರಸ್ತೆ, ಶಿವಮೊಗ್ಗ ಇವರಲ್ಲಿ ಜುಲೈ 17ರೊಳಗಾಗಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ವಿವರಗಳಿಗಾಗಿ- 08182- 222802.
ಆದಾಯಮಿತಿ ಹೆಚ್ಚಳ
ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆ 2013-14ನೇ ಶೈಕ್ಷಣಿಕ ಸಾಲಿನಿಂದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರು ಮಾಡಲು ನಿಗದಿಪಡಿಸಲಾಗಿದ್ದ ಪೋಷಕರ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು 2 ಲಕ್ಷದಿಂದ 2.50 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ವಿವಿಧೋದ್ದೇಶ ಸಂಘ ಆರಂಭ
ಶಿವಮೊಗ್ಗ: ಇಲ್ಲಿನ ಬಾಪೂಜಿ ನಗರದಲ್ಲಿರುವ ಬೆಸ್ತರ್ ಹಾಸ್ಟೆಲ್ನಲ್ಲಿ ಮಾತಾ ಅಮೃತಾನಂದಮಯಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಜು. 10ರಿಂದ ಆರಂಭಗೊಂಡಿದೆ. ಸಂಘವು ಪ್ರಸ್ತುತ ಯುವತಿಯರಿಗೆ, ಮಹಿಳೆಯರಿಗೆ ಹೊಲಿಗೆ ತರಬೇತಿ, ಬೇಸಿಕ್ ಟೈಲರಿಂಗ್, ಚೂಡಿದಾರ್ ಮೇಕಿಂಗ್, ಕಾಟನ್ ಬ್ಯಾಗ್ ತಯಾರಿಕೆ ತರಗತಿ ಪ್ರಾರಂಭಿಸಲಿದೆ ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ. ಮೊ- 8904801045.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

