ಒಂದೇ ರಾತ್ರಿ ಸುಧಾರಣೆ ಅಸಾಧ್ಯ
ಕ.ಪ್ರ.ವಾರ್ತೆ ಭದ್ರಾವತಿ ಜು. 11
ಸುಧಾರಣೆ ಒಂದು ನಿರಂತರ ಪ್ರಕ್ರಿಯೆ, ಒಂದೇ ರಾತ್ರಿಯಲ್ಲಿ ಯಾವುದೂ ಬದಲಾವಣೆಯಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಹೇಳಿದರು.
ಅವರು ಗುರುವಾರ ಬೆಳಗ್ಗೆ ಪತ್ರಿಕಾ ಭವನದಲ್ಲಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ ನಾಗರಿಕ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇಲಾಖೆಯಲ್ಲಿನ ಭ್ರಷ್ಟಾಚಾರ ಕಡಮೆ ಮಾಡಲು ಬೇಕಾದ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಇಲಾಖೆ ಕೈಗೊಳ್ಳಲಾಗುವ ತನಿಖಾ ಕಾರ್ಯಗಳಿಗೆ ತಗಲುವ ವೆಚ್ಚವನ್ನು ಇಲಾಖೆಯೇ ಭರಿಸುತ್ತದೆ.
ಇದನ್ನು ದೂರುದಾರರು ಭರಿಸುವ ಅಗತ್ಯವಿಲ್ಲ. ರಾತ್ರಿ ಬೀಟ್ನಲ್ಲಿ ನಾಗರಿಕ ಸಮಿತಿ ರಚನೆ ಮಾಡಿ ಅದರ ಸದಸ್ಯರನ್ನು ಉಪಯೋಗಿಸಿಕೊಳ್ಳಲು ಇಲಾಖೆ ಕ್ರಮ ಕೈಗೊಂಡಿದೆ ಎಂದರು.
ನೊಂದವರ ದಿನಾಚರಣೆ: ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಮೂರನೇ ಭಾನುವಾರ ನೊಂದವರ ದಿನಾಚರಣೆ ಆಚರಿಸಲು ಸೂಚನೆ ನೀಡಲಾಗಿದೆ. ಇದರಲ್ಲಿ ದೂರುದಾರರು ತಮ್ಮ ದೂರಿನ ಸ್ಥಿತಿಗತಿ ವಿಚಾರಿಸಿಕೊಳ್ಳಬಹುದಾಗಿದೆ. ಇಲಾಖೆಯಲ್ಲಿ ಜನಸ್ನೇಹಿ ಆರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಎಫ್.ಐ.ಆರ್ ಮಾಹಿತಿಯನ್ನು ದಾಖಲಿಸಲು ಪೊಲೀಸರು ದೂರುದಾರರಿಗೆ ಸೌಲಭ್ಯ ಒದಗಿಸಬೇಕು ಅಥವಾ ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲೇಬೇಕಾಗುತ್ತದೆ. ಹಾಗಾಗಿ ವಿಚಾರಣೆ ನಡೆಸಿ, ನಂತರ ವರದಿಯನ್ನು ದಾಖಲಿಸಲು ಬರುವುದಿಲ್ಲವೆಂದು ನಾಗರಿಕರೊಬ್ಬರ ಅಹವಾಲಿಗೆ ಜಿಲ್ಲಾ ಪೊಲೀಸ್ ವಷ್ಠರು ಹೇಳಿದರು.
ಶಿವಮೊಗ್ಗದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿರುವ ದೂರು ಸ್ವೀಕಾರ ಕೇಂದ್ರವನ್ನು ಸ್ಥಾಪಿಸಲಾಗಿದೆ. ಯಾವುದಾದರೂ ಠಾಣೆಯಲ್ಲಿ ದೂರು ದಾಖಲಿಸಲು ತಿರಸ್ಕರಿಸಿದರೆ ಅಥವಾ ತಾತ್ಸಾರ ತೋರಿದರೆ ಈ ಕೇಂದ್ರದಲ್ಲಿ ದೂರು ದಾಖಲಿಸಬಹುದು ಎಂದು ಅವರು ತಿಳಿಸಿದರು.
ಸಂಚಾರ ನಿಯಂತ್ರಣ ಸಮಸ್ಯೆ: ಸಂಚಾರ ನಿಯಂತ್ರಣ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಟ್ಟಣದ ಸಾಮರ್ಥ್ಯಕ್ಕಿಂತ ವಾಹನ ಸಂಚಾರ ಅಧಿಕವಾದಾಗ ಸಂಚಾರ ನಿಯಂತ್ರಣ ಸಮಸ್ಯೆಯಾಗಿ ತೋರುವುದು. ಇದಕ್ಕೆ ಸ್ಥಳೀಯ ನಗರಸಭೆ ಮತ್ತಿತರ ಸಂಘಸಂಸ್ಥೆಗಳು ಮತ್ತು ಬಸ್ ಮೊದಲಾದ ವಾಹನಗಳ ಸಂಘಗಳ ಮಾಲೀಕರು ಚರ್ಚಿಸಿ ಪರಿಹಾರ ಕಂಡುಹಿಡಿಯಬೇಕು. ಸಂಚಾರ ಠಾಣೆಯ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಸಮಸ್ಯೆಗೆ ಪರಿಹಾರ ದೊರಕದು ಎಂದು ಅವರು ಅಭಿಪ್ರಾಯಪಟ್ಟರು. ಪೊಲೀಸ್ ವಸತಿ ಗೃ ಹಗಳ ನಿರ್ಮಾಣ ಮತ್ತು ಹಳೇನಗರ ಠಾಣೆಯ ನವೀಕರಣದ ಬಗ್ಗೆ ಈಗಾಗಲೇ ಚರ್ಚಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆರಕ್ಷಕ ವೃತ್ತ ನಿರೀಕ್ಷಕ (ನಗರ) ಜೆ.ಜೆ. ತಿರುಮಲೇಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಳೇನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

