ಶಿವಮೊಗ್ಗ

ಸಹೋದರರ ಕೊಲೆ: 2 ಆರೋಪಿಗಳ ಬಂಧನ

Published On :

ಶಿವಮೊಗ್ಗ: ಜಮೀನು ವಿವಾದದ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಸಮೀಪದ ಭದ್ರಾಪುರ ಗ್ರಾಮದಲ್ಲಿ ಸೋಮವಾರ ನಡೆದಿದ್ದ ಮೂವರು ಸಹೋದರರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆಹೊನ್ನೂರು ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಐವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.  
ಹನುಮಂತ ಮತ್ತು ಗೋಪಿ ಬಂಧಿತ ಆರೋಪಿಗಳಾಗಿದ್ದು, ಶೇಖರಪ್ಪ, ಪರಮೇಶ್, ಹರೀಶ್ ಪರಾರಿಯಾಗಿದ್ದಾರೆ. ಇವರು ತಮ್ಮ ತೋಟದ ಪಕ್ಕದ ಗದ್ದೆಯವರಾದ ಪ್ರಕಾಶ್ ಮತ್ತು ಸಹೋದರರನ್ನು ಸೋಮವಾರ ಮಧ್ಯಾಹ್ನ ಹತ್ಯೆ ಮಾಡಿ ಪರಾರಿಯಾಗಿದ್ದರು. ಶೇಖರಪ್ಪ ಅವರಿಗೆ ಸೇರಿದ ತೋಟದ ಪಕ್ಕದಲ್ಲಿ ಪ್ರಕಾಶ್ ಅವರಿಗೆ ಸೇರಿದ ಗದ್ದೆ ಇದ್ದು, ಗದ್ದೆಗೆ ಹೋಗಲು ಪ್ರಕಾಶ್ ದಾರಿ ಕೇಳಿದ್ದರು. ಆದರೆ, ಬಂಧಿತ ಆರೋಪಿಗಳು ಇದಕ್ಕೆ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಶೇಖರಪ್ಪ ಅವರು ತಮ್ಮ ಗುಂಪಿನೊಂದಿಗೆ ಪ್ರಕಾಶ್ ಮತ್ತು ಸಹೋದರರನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು.
ಈ ಸಂಬಂಧವಾಗಿ ತಕ್ಷಣ ಕಾರ್ಯಪ್ರವೃತರಾದ ಜಿಲ್ಲಾ ಪೊಲೀಸರು ಎರಡು ತಂಡಗಳನ್ನು ರಚಿಸಿಕೊಂಡು ಘಟನೆ ನಡೆದ 24 ಗಂಟೆಯೊಳಗೆ ಇಬ್ಬರನ್ನು ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದಲ್ಲಿ ಮಂಗಳವಾರ ನಸುಕಿನಲ್ಲಿ ಬಂಧಿಸಿದ್ದಾರೆ.
ಕೊಲೆ ಮಾಡಿದ್ದವರು ತಮ್ಮ ಸಂಬಂಧಿಕರ ಊರುಗಳಿಗೆ ತೆರಳು ನಗರದ ಹೊಳೆ ಬಸ್‌ನಿಲ್ದಾಣದ ಬಳಿ ಬಂದಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪರಾರಿಯಾದ ಮೂವರು ಆರೋಪಿಗಳನ್ನು ಹಿಡಿಯಲು ವ್ಯಾಪಕ ಬಲೆ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.