ಇಂದು ವಾಲಿಬಾಲ್, ಚೆಸ್, ಕೇರಂ ಅಂತಿಮ ಹಣಾಹಣಿ
ಶಿವಮೊಗ್ಗ: ಭಾರತೀಯ ಜೀವ ವಿಮಾ ನಿಗಮ ನಗರದ ನೆಹರು ಕ್ರೀಡಾಂಗಣದಲ್ಲಿ ಕಳೆದೆರಡು ದಿನಗಳಿಂದ ಆಯೋಜಿಸಿದ್ದ 14ನೇ ಸಾಲಿನ ದಕ್ಷಿಣ ಮಧ್ಯವಲಯ 47ನೇ ವಾಲಿಬಾಲ್, ಚೆಸ್ ಮತ್ತು ಕೇರಂ ಪಂದ್ಯಾವಳಿಯ ಅಂತಿಮ ಹಣಾಹಣಿ ಗುರವಾರ ನಡೆಯಲಿದೆ.
ಬುಧವಾರ ನಡೆದ ಕೇರಂ ಪಂದ್ಯಾವಳಿಯಲ್ಲಿ ಮಹಿಳಾ ವಿಭಾಗದಿಂದ ಹೈದ್ರಾಬಾದ್ನ ಪಿ. ನಿರ್ಮಲ, ಎಸ್. ಅಪೂರ್ವ, ಧಾರವಾಡದ ವಿ.ಕೆ. ಕಾಗಿನೆಲೆ ಮತ್ತು ಬೆಂಗಳೂರಿನ ಎಸ್. ಅನಲದೇವಿ ಹೆಚ್ಚು ಅಂಕ ಪಡೆದು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ಪ್ರವೇಶ: ಪುರುಷರ ವಿಭಾಗದಲ್ಲಿ ಬೆಂಗಳೂರಿನ ಕೆ. ಬಾಲಗುರುವಯ್ಯ, ಹೈದ್ರಾಬಾದ್ನ ಕೆ. ಸಾಯಿಲೊ, ರಾಜಮಂಡ್ರಿಯ ಎಂ.ಬಿ. ಜಗನ್ನಾಥರಾವ್ ಹಾಗೂ ವಾರಂಗಲ್ನ ಬಿ. ವೀರಲಿಂಗಂ ಸೆಮಿಫೈನಲ್ ಪ್ರವೇಶ ಮಾಡಿದ್ದು, ಗುರುವಾರ ಫೈನಲ್ ನಡೆಯಲಿದೆ.
ಇನ್ನು ಚೆಸ್ ವಿಭಾಗದಲ್ಲಿ ನಾಲ್ಕನೇ ಸುತ್ತಿನ ಅಂತಿಮ ಪಂದ್ಯದಲ್ಲಿ ಮಚಲಿಪಟ್ಟಣಂನ ಶ್ರೀನಿವಾಸಲು, ಕಡಪದ ಪಿ. ಪದ್ಮನಾಭ ತಲಾ 3.5 ಅಂಕ ಪಡೆದು ಪ್ರಥಮ ಸ್ಥಾನದಲ್ಲಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಮಚಲಿಪಟ್ಟಣಂನ ರಾಧಿಕದೇವಿ, ಸಿಕಂದರಾಬಾದ್ನ ರೇಣುಕಾಕುಮಾರಿ ಹಾಗೂ ರಾಜಮಂಡ್ರಿಯ ರಾಧಕುಮಾರಿ, ಮೈಸೂರಿನ ನಾಗರತ್ನ ತಲಾ 3.5 ಅಂಕ ಪಡೆದು ಪ್ರಥಮ ಸ್ಥಾನಗಳಿಸಿದ್ದಾರೆ.
ವಾಲಿಬಾಲ್ ವಿಭಾಗ: ಬುಧವಾರ ನಡೆದ ಮೊದಲ ಸೆಮಿ ಫೈನಲ್ನಲ್ಲಿ ಬೆಂಗಳೂರು ಮತ್ತು ವಿಶಾಖಪಟ್ಟ ನಡುವೆ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 25-10, 25-11, 25-13ರ ಅಂತರದ ಸೆಟ್ಗಳಲ್ಲಿ ಜಯಗಳಿಸಿ ಫೈನಲ್ ಪ್ರವೇಶಿಸಿದೆ.
ಮೈಸೂರು ಮತ್ತು ವಾರಂಗಲ್ ತಂಡದ ನಡುವೆ ನಡೆದ ಎರಡನೇ ಸುತ್ತಿನ ಸೆಮಿ ಫೈನಲ್ ಪಂದ್ಯದಲ್ಲಿ ಮೈಸೂರು ತಂಡ 25-20, 25-17, 16-25 ಹಾಗೂ 25-22 ಅಂತರದಲ್ಲಿ ಫೈನಲ್ ಪ್ರವೇಶಿಸಿದ್ದು, ಬೆಂಗಳೂರು ಮತ್ತು ಮೈಸೂರು ನಡುವಿನ ಅಂತಿಮ ಪಂದ್ಯ ಗುರುವಾರ ಬೆಳಗ್ಗೆ 11ಗಂಟೆಗೆ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

