ಶಿವಮೊಗ್ಗ

ಹುರುಳಿಲ್ಲದ ವಿಷಯಕ್ಕೆ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್ ಆರೋಪ

Published On :

ಕ.ಪ್ರ.ವಾರ್ತೆ  ಸಾಗರ  ಜು.18
ಕಳೆದ ನಗರಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿ ಹಾಗೂ ಕೆಜೆಪಿ ಮುಖಂಡರು ಈಗ ಕೇವಲ ಪ್ರಚಾರಕ್ಕಾಗಿ ಹುರುಳಿಲ್ಲದ ವಿಷಯಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯ ತೀ.ನ.ಶ್ರೀನಿವಾಸ್ ಟೀಕಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿರುವಾಗಲೇ ಗಣಪತಿ ದೇವಸ್ಥಾನದ ಮುಖಮಂಟಪದ ಗೋಪುರ ಕುಸಿಯುವ ಹಂತದಲ್ಲಿತ್ತು. ಆಗ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಪುನರ್ ನಿರ್ಮಾಣಕ್ಕೆ ಮುಂದಾಗದವರು ಈಗ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.
ದೇವಸ್ಥಾನದ ದುರಸ್ತಿಗಾಗಿ 2008ರಲ್ಲಿ 20 ಲಕ್ಷ ಹಾಗೂ 2011ರಲ್ಲಿ 50 ಲಕ್ಷ ಮಂಜೂರಾಗಿತ್ತು. ಅಲ್ಲದೆ ದೇವಸ್ಥಾನದ ಖಾತೆಯಲ್ಲಿ ಸುಮಾರು 1.50 ಕೋಟಿ ಹಣ ಇದೆ. ಆದರೂ ದೇವರು, ಧರ್ಮದ ಬಗ್ಗೆ ಭಾಷಣ ಮಾಡುವ ಬಿಜೆಪಿಯವರು ದೇವಸ್ಥಾನದ ಅಭಿವೃದ್ಧಿಗೆ ಮುಂದಾಗಲಿಲ್ಲ.
 ಈಗ ಕಾಗೋಡು ತಿಮ್ಮಪ್ಪನವರು ಆಯ್ಕೆಯಾದ ನಂತರ ದೇವಸ್ಥಾನದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಗೋಪುರ ಪುನರ್ ನಿರ್ಮಾಣಕ್ಕೆ 67 ಲಕ್ಷ, ಚಂದ್ರಶಾಲೆ ನಿರ್ಮಾಣಕ್ಕೆ 50 ಲಕ್ಷ ಹಣ ಬಿಡುಗಡೆಯಾಗಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಬಳಸಗೋಡಿನಲ್ಲಿ ಕಸಾಯಿಖಾನೆಗಾಗಿ 7 ಎಕರೆ ಜಾಗಕ್ಕೆ ಹಿಂದೆ ನಗರಸಭೆಯ ಬಿಜೆಪಿ ಆಡಳಿತವೇ ಸರ್ವಾನುಮತದ ನಿರ್ಣಯ ಕೈಗೊಂಡು ಅನುಮತಿ ನೀಡಿತ್ತು.
   ಈಗ ಅವರೇ ಕಸಾಯಿಖಾನೆಗೆ ಅನುಮತಿ ನೀಡಬಾರದೆಂದು ಪ್ರತಿಭಟನೆ ಮಾಡುತ್ತಿರುವುದು ನಗೆಪಾಟಲಿನ ಸಂಗತಿಯಾಗಿದೆ ಎಂದು ಹೇಳಿದರು.
ಪಕ್ಷದ ಪ್ರಮುಖರಾದ ಎನ್.ಜಿ. ಪೈ, ಕಾಗೋಡು ಅಣ್ಣಪ್ಪ, ನಂದಾ ಗೊಜನೂರು, ಡಿಶ್ ಗುರು, ಜಂಬಾರು ರವಿ, ಶ್ರೀನಾಥ, ಜಿ.ಕೆ. ಭೈರಪ್ಪ, ಗಣಾಧೀಶ, ಉಲ್ಲಾಸ ಶಾನಭಾಗ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.