ಶಿವಮೊಗ್ಗ

ಕುಶಲಕರ್ಮಿಗಳಿಗೆ ಪ್ಯಾಕೇಜ್: ಅಭಿನಂದನೆ

Published On :

ಸಾಗರ: ಕುಶಲಕರ್ಮಿಗಳ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ 2013-14ನೇ ಸಾಲಿನಲ್ಲಿ ಐದು ವರ್ಷದ ಅವಧಿಗೆ ಪ್ಯಾಕೇಜ್ ಘೋಷಿಸಿರುವ ಕ್ರಮ ಸ್ವಾಗತಾರ್ಹ.
ಇದಕ್ಕೆ ಕಾರಣರಾಗಿರುವ ಸಣ್ಣ ಕೈಗಾರಿಕೆ ಸಚಿವ ಪ್ರಕಾಶ್ ಹುಕ್ಕೇರಿ, ಈ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ವಿಧಾಸನಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಅಖಿಲ ಭಾರತ ಗುಡಿಗಾರರ ಸಮಾಜ ಹಾಗೂ ಕುಶಲಕರ್ಮಿಗಳು ಅಭಿನಂದನೆ ಸಲ್ಲಿಸಿವೆ.
ವಿಶೇಷ ಪ್ಯಾಕೇಜಿನಿಂದ ಕುಶಲಕರ್ಮಿಗಳಿಗೆ ಶ್ರೀಗಂಧದ ಮೇಲೆ ಶೇ.75 ಸಬ್ಸಿಡಿ ಜೊತೆಗೆ ವಿವಿಧ ಉಪಯೋಗಗಳು ಲಭಿಸಲಿದೆ. ಆರಂಭದಿಂದಲೂ ಅತ್ಯಂತ ಸಂಕಷ್ಟದ ಜೀವನ ಸಾಗಿಸುತ್ತಿರುವ ಕುಶಲಕರ್ಮಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಪಾತಾಳಕ್ಕೆ ಇಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜಿಗಾಗಿ 50 ಕೋಟಿ  ಮೀಸಲಿಟ್ಟಿರುವುದು ಮುಳುಗುತ್ತಿರುವವರಿಗೆ ಆಸರೆ ಸಿಕ್ಕಂತಾಗಿದೆ. ಮುಖ್ಯಮಂತ್ರಿಗಳು ಘೋಷಿಸಿದ ವಿಶೇಷ ಪ್ಯಾಕೇಜ್ ತಕ್ಷಣದಿಂದಲೇ ಅನುಷ್ಠಾನಗೊಳಿಸುವ ಮೂಲಕ ಕುಶಲಕರ್ಮಿಗಳಿಗೆ ಪುನಶ್ಚೇತನ ನೀಡಬೇಕು ಎಂದು ಸಮಾಜದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಗುಡಿಗಾರ್, ಸಂಘಟನಾ ಕಾರ್ಯದರ್ಶಿ ಲೋಕೇಶಕುಮಾರ್, ವಲಯ ಉಪಾಧ್ಯಕ್ಷ ಡಿ.ಎಂ. ಗಜಾನನ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.