ಶಿವಮೊಗ್ಗ

ಬೆಂಕಿಯನ್ನೇ ಬೆಳಕೆಂಬ ಭಾವನೆ

Published On :

ಕ.ಪ್ರ.ವಾರ್ತೆ , ಶಿವಮೊಗ್ಗ ,  ಜು.20
ಬೆಂಕಿಯನ್ನೇ ಬೆಳಕು ಎಂದು ಭಾವಿಸುವ ಕಾಲವಿದು. ಬೆಳಕಿನ ರೂಪದಲ್ಲಿ ಬೆಂಕಿ ನಮ್ಮನ್ನು ಸುಡುತ್ತಿದೆ ಎಂದು ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಹೇಳಿದರು.
ನಗರದಲ್ಲಿ ಕರ್ನಾಟಕ ಸಂಘ ಶನಿವಾರ ಸಂಜೆ ಆಯೋಜಿಸಿದ್ದ 2012ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ವಿವಿಧ ವಿಭಾಗದ ಲೇಖಕರಿಗೆ ಬಹುಮಾನ ವಿತರಿಸಿದ ನಂತರ ಮಾತನಾಡಿದ ಅವರು, ಜ್ಞಾನದ ಹಿಂದೆ ಹೋಗುವುದನ್ನು ಬಿಟ್ಟಿದ್ದೇವೆ. ಜಗತ್ತು ಇವತ್ತು ಲಾಭದ ಹಿಂದೆ ಬೆನ್ನುಹತ್ತಿದೆ. ಇದು ಇವತ್ತಿನ ಯುಗದ ಸೈಕಾಲಜಿ ಎಂದರು.
ನಿಜವಾದ ಜ್ಞಾನ ಹಿಂದೆ ಸರಿದಿದೆ. ಆ ಜಾಗದಲ್ಲಿ ಲಾಭ ಬಂದು ಕೂತಿದೆ ಎಂದರು. ಇವತ್ತು ನಾವು ಎರಡು ರೀತಿಯ ಭಾರತವನ್ನು ನೋಡುತ್ತಿದ್ದೇವೆ. 27 ಅಂತಸ್ತುಗಳ ಮನೆಯ ಪ್ರತಿ
ಮಹಡಿಯಲ್ಲಿಯೂ ಈಜುಕೊಳ ಹೊಂದಿರುವ ಅಂಬಾನಿ, ಅಂತವರನ್ನು ಬೆಂಬಲಿಸುವ ರಾಜಕಾರಣಿಗಳ ಒಂದು ಲೋಕವಿದೆ. ಟೀವಿಯಲ್ಲಿಯೂ ಶ್ರೀಮಂತ ಭಾರತದ ಕನಸುಗಳು ಹೆಚ್ಚು ಟಿಆರ್‌ಪಿ ತಂದುಕೊಡುತ್ತಿವೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಎಚ್.ಎಸ್. ನಾಗಭೂಷಣ್ ಸ್ವಾಗತಿಸಿರು. ಸರ್ಜಾಶಂಕರ ಹರಳೀಮಠ ಪುಸ್ತಕ ಬಹುಮಾನ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ಹೇ ರಾಮ್ ನಾಟಕ ಕೃತಿಗಾಗಿ ಕೆ.ವಿ. ಸುಬ್ಬಣ್ಣ ಪುಸ್ತಕ ಬಹುಮಾನ ಪಡೆದಿರುವ ಅನಂತ ಚಿನಿವಾರ ಅವರು ಗೈರುಹಾಜರಾಗಿದ್ದರು.
ಬಹುಮಾನ ಪಡೆದವರು: - ಡಾ. ಎಚ್.ಎಸ್. ಅನುಪಮ (ಉರಿಯ ಪದವು ಕವನ ಸಂಕಲನಕ್ಕೆ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಬಹುಮಾನ)
- ಭಾರ್ಗವಿ ನಾರಾಯಣ್ ನಾನು ಭಾರ್ಗವಿ ಆತ್ಮಕತೆಗೆ ಶ್ರೀಮತಿ ಎಂ.ಕೆ. ಇಂದಿರಾ ಬಹುಮಾನ)
- ಬಿ.ಎಂ. ಬಶೀರ್ (ಅಂಗೈಯಲ್ಲಿ ಆಕಾಶ ಕೃತಿಗೆ ಮುಸ್ಲಿಂ ಲೇಖಕರಿಗಾಗಿ ನೀಡುವ ಪಿ. ಲಂಕೇಶ್ ಬಹುಮಾನ)
- ಗಿರಿಜಾ ಶಾಸ್ತ್ರಿ (ಪುಸ್ತಕ ಮತ್ತು ನವಿಲುಗರಿ ಕೃತಿಗೆ ಡಾ. ಜಿ.ಎಸ್. ಶಿವರುದ್ರಪ್ಪ ಬಹುಮಾನ)
- ಶಿರೀಷ ಜೋಷಿ (ನಾದಲೋಕದ ರಸನಿಮಿಷಗಳು ಕೃತಿಗೆ ಡಾ. ಹಾ.ಮಾ. ನಾಯಕ್ ಬಹುಮಾನ)
- ಬಸವಣ್ಣೆಪ್ಪ ಕಂಬಾರ (ಆಟಿಕೆ ಕಥಾ ಸಂಕಲನಕ್ಕೆ ಡಾ.ಯು.ಆರ್. ಅನಂತಮೂರ್ತಿ ಬಹುಮಾನ)
- ವಿ.ಎಸ್. ಕಳಸೇಶ್ವರ (ಕೈಲಾಸ ಮಾನಸ ಯಾತ್ರಾಕಥನ ಕೃತಿಗೆ ಪ್ರವಾಸ ಸಾಹಿತ್ಯಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನ)
- ಪ್ರೊ.ಡಿ.ಆರ್. ಬಳೂರಗಿ (ಪರಮಾಣು ನ್ಯೂಕ್ಲಿಯಸ್ ಕೃತಿಗೆ ಶ್ರೀ ಹಸೂಡಿ ವೆಂಕಟಶಾಸ್ತ್ರಿ ಬಹುಮಾನ)
- ರಾಜಶೇಖರ ಕುಕ್ಕುಂದಾ (ಪುಟಾಣಿ ವಾಸಿಗಳು ಮಕ್ಕಳ ಕವನ ಸಂಕಲನಕ್ಕೆ ಡಾ. ನಾ. ಡಿಸೋಜ ಬಹುಮಾನ)
- ಡಾ. ಸಿ.ಆರ್. ಚಂದ್ರಶೇಖರ್ ವೃದ್ಧರ ಮನಸು ಹೀಗೇಕೆ ವೈದ್ಯಸಾಹಿತ್ಯ ಕೃತಿಗೆ ಡಾ. ಎಚ್.ಡಿ. ಚಂದ್ರಪ್ಪಗೌಡ ಬಹುಮಾನ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.