ಇಂದು ಉದ್ಯೋಗ ಮೇಳ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.21
ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ, ಬೆಂಗಳೂರಿನ ಎಲ್ ಅಂಡ್, ಕಂಪನಿ ಮತ್ತು ಎಸ್ಎಂಎಸ್ಎಸ್ ಸಂಸ್ಥೆ ಸಹಯೋಗದಲ್ಲಿ ಜು.22ರಂದು ಬೆಳಗ್ಗೆ 10.30ಕ್ಕೆ ನಗರದ ಆಲ್ಕೋಳ ಸರ್ಕಲ್ನಲ್ಲಿರುವ ಚೈತನ್ಯ ತರಬೇತಿ ಕೇಂದ್ರದಲ್ಲಿ ನಿರುದ್ಯೋಗಿ ಯುವಜನತೆಗಾಗಿ ಉದ್ಯೋಗ ಮೇಳ ಆಯೋಜಿಸಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಮೇಳಕ್ಕೆ ಚಾಲನೆ ನೀಡುವರು. ಎಸ್ಎಂಎಸ್ಎಸ್ ಸಂಸ್ಥೆಯ ಉಪಾಧ್ಯಕ್ಷ ಅತೀ ವಂ. ಫೆಲಿಕ್ಸೆ ಜಿ. ನೊರೊನ್ಹಾ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಯಾಗಿ ಸಂಸ್ಥೆಯ ನಿರ್ದೇಶಕ ವಂ. ವೀರೇಶ್ ವಿ.ಮೊರಾಸ್, ಎಲ್ ಅಂಡ್, ಕಂಪನಿಯ ಕೌಶಲ್ಯ ತರಬೇತಿ ವ್ಯವಸ್ಥಾಪಕ ನಾಗರಾಜ್ ಹಾಗೂ ಫಸ್ಕ್ರ್ ಟಿಯೆಟ್- ಇಂಡಿಯಾ ಸಂಸ್ಥೆಯ ಉಪನಿರ್ದೇಶಕ ಮಧುಕೇಶ್ವರ್ ಭಟ್ ಪಾಲ್ಗೊಳ್ಳುವರು.
ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ನಿರುದ್ಯೋಗಿ ಯುವ ಜನತೆ ಮೇಳದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಆಯ್ಕೆಯಾಗುವ ಯುವಜನರಿಗೆ ಭತ್ಯೆಯೊಂದಿಗೆ 3 ತಿಂಗಳ ಉಚಿತ ತರಬೇತಿ ನೀಡಲಾಗುವುದು ಹಾಗೂ ತರಬೇತಿ ನಂತರ ಪ್ರಮಾಣ ಪತ್ರ ವಿತರಿಸಲಾಗುವುದು. ಅಲ್ಲದೇ, ತರಬೇತಿ ಪಡೆದು ಉದ್ಯೋಗ ಮಾಡಲಿಚ್ಚಿಸುವ ಯುವಜನರಿಗೆ ಉತ್ತಮ ಸಂಬಳದೊಂದಿಗೆ ಕಂಪನಿಯಲ್ಲಿ ಉದ್ಯೋಗ ಅವಕಾಶ ಹಾಗೂ ಕಂಪನಿಯಿಂದ ಉಚಿತ ವಸತಿ, ಸಮವಸ್ತ್ರ, ಸುರಕ್ಷಿತ ಸಾಧನಗಳು, ಆಸ್ಪತ್ರೆ ಸೌಲಭ್ಯ ಹಾಗೂ ಪ್ರಾವಿಡೆಂಡ್ ಫಂಡ್ ಸೌಲಭ್ಯವಿರುತ್ತದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸಿಲಿಚ್ಚಿಸುವವರು 18ರಿಂದ 35 ವರ್ಷ ವಯೋವುತಿಯವರಾಗಿದ್ದು, 5ರಿಂದ 10ನೇ ತರಗತಿ ಪಾಸ್ ಅಥವಾ ಫೇಲ್ ಆಗಿರಬೇಕು ಎಂದು ಸೊಸೈಟಿ ತಿಳಿಸಿದೆ.
ಮಹಿಳೆಯರಿಗೆ ಅವಕಾಶ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಆಯ್ದ ಬಡ, ನಿರ್ಗತಿಕ ಮಹಿಳೆಯರಿಗೆ ಎಸ್ಎಂಎಸ್ಎಸ್ ಸಂಸ್ಥೆಯು ಉದ್ಯಮಶೀಲತಾ ಶಿಬಿರ ಆಯೋಜಿಸಿದೆ. ತರಬೇತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ವಿವಿಧ ಉದ್ಯಮಶೀಲತಾ ಕೌಶಲ್ಯಗಳನ್ನು ನೀಡಲಾಗುವುದು ಹಾಗೂ ಸ್ವ-ಉದ್ಯೋಗಗಳನ್ನು ಕೈಗೊಳ್ಳುವಂತೆ ಪ್ರೇರಣೆ ಹಾಗೂ ಸಹಕಾರ ನೀಡಲಾಗುವುದು ಎಂದ ಸೊಸೈಟಿಯ ನಿರ್ದೇಶಕ ವೀರೇಶ್ ವಿ. ಮೊರಾಸ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

