ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಜು.21
ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ದಾರರನ್ನು ಒಕ್ಕಲೆಬ್ಬಿಸಲು ಆಸ್ಪದ ನೀಡುವದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ತಾಲೂಕಿನ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿ, ರೈತರಿಗೆ ಗಿಡ ವಿತರಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರ ಪರ ಸರ್ಕಾರ ಯಾವದೇ ತೀರ್ಮಾನ ಕೈಗೊಂಡರೂ ತಾವು ಸಹಕಾರ ಕೊಡುವದಾಗಿ ತಿಳಿಸಿದರು.
ಹಿಂದೆ ರಾಜ್ಯ ಸರ್ಕಾರ 1978ರ ಪೂರ್ವದಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷ ಬಗರ್ ಹುಕುಂ ಸಾಗುವಳಿ ದಾರರಿದ್ದಾರೆ ಎಂದು ತಿಳಿಸಿತ್ತು. ಹಾಗೆಯೇ ಭಾರತ ಸರ್ಕಾರ ಅನುಸೂಚಿತ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕನ್ನು ಮಾನ್ಯಮಾಡುವ ಅಧಿ ನಿಯಮ 2006 ಮತ್ತು 2008 ಅನುಷ್ಠಾನ ಗೊಳಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿರುವದರಿಂದ ರಾಜ್ಯ ಸರ್ಕಾರ ಬಗರ್ ಹುಕುಂ ಸಕ್ರಮೀಕರಣ ಗೊಳಿಸಬಹುದಲ್ಲವೇ ಎಂದರು.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು. ಕೇಂದ್ರ ಸರ್ಕಾರದ ಆದೇಶದಂತೆ ಹಾಗೂ ತೀರ್ಥಹಳ್ಳಿ ತಾಲೂಕು ಮಲಂದೂರು ಗ್ರಾಮದಲ್ಲಿ ಬಗರ್ ಹುಕುಂ ಸಾಗುವಳಿ ದಾರರಿಗೆ ಹಕ್ಕು ಪತ್ರ ಕೊಟ್ಟಂತೆ ಎಲ್ಲ ಸಾಗುವಳಿ ದಾರರಿಗೂ ಹಕ್ಕುಪತ್ರ ಕೊಡುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು.
ಈಗ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವದರಿಂದ ಮತ್ತು ಹಿಂದೆ ಬಗರ್ ಹುಕುಂ ಸಾಗುವಳಿದಾರರ ನೇತ್ರತ್ವ ವಹಿಸಿದ್ದ ಕಾಗೋಡ ತಿಮ್ಮಪ್ಪ ಸಮಿತಿ ಅಧ್ಯಕ್ಷರೂ ಹಾಗೂ ವಿಧಾನ ಸಭೆಯಲ್ಲಿ ನಾಯಕರಾಗಿರುವದರಿಂದ ಉತ್ತಮ ತೀರ್ಮಾನ ತೆಗೆದುಕೊಳ್ಳಲು ಅವಕಾಶ ಒದಿಗಿಬಂದಿದೆ ಎಂದು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿರುವದಾಗಿ ಭೂಹಕ್ಕು ದಾರರ ವೇದಿಕೆ ಅಧ್ಯಕ್ಷ ಡಿ. ಶಂಕರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಶಿವಮೊಗ್ಗ-ತಡಸ ಹೆದ್ದಾರಿ ಯೋಜನೆ ಪರವಾನಿಗೆ ರದ್ದಾಗಿರುವ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ರಾಜ್ಯ ಸರ್ಕಾರ ಗುತ್ತಿಗೆ ದಾರರಿಗೆ ಕೊಡದೆ ಸರ್ಕಾರವೇ ಆ ಯೋಜನೆಯನ್ನು ಕೈಗೆತ್ತಿಕೊಂಡು ಅನುಮೋದನೆ ಕೊಡುತ್ತದೆ ರಸ್ತೆ ಕಾರ್ಯ ನಡೆಯುತ್ತದೆ ಆ ಬಗ್ಗೆ ಅನುಮಾನ ಬೇಡ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

