ಶಿಕಾರಿಪುರಕ್ಕೆ ರೈಲು ಸಂಪರ್ಕ ಅಗತ್ಯ: ನಾ.ಡಿಸೋಜ
ಕ.ಪ್ರ.ವಾರ್ತೆ, ಶಿಕಾರಿಪುರ, ಜು.22
ರೈಲ್ಪೇ ಸಂಪರ್ಕ ಪಡೆಯಲು ಶಿಕಾರಿಪುರ ಸಂಪೂರ್ಣ ಅರ್ಹವಾಗಿದ್ದು, ಈ ದಿಸೆಯಲ್ಲಿ ತಾಲೂಕಿನ ಜನತೆ ಶಾಂತಿ ಮಾರ್ಗದಲ್ಲಿ ಬೇಡಿಕೆ ಈಡೇರಿಕೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಮನವಿ ಮೂಲಕ ಕಾರ್ಯವನ್ನು ಸಾಧಿಸಿಕೊಳ್ಳಲು ಎಲ್ಲಾ ರೀತಿಯಲ್ಲಿ ಸಹಕರಿಸುವುದಾಗಿ ಖ್ಯಾತ ಸಾಹಿತಿ ನಾ.ಡಿಸೋಜ ತಿಳಿಸಿದರು.
ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿಕಾರಿಪುರ ತಾಲೂಕಿಗೆ ರೈಲ್ಪೇ ಸಂಪರ್ಕದ ಹೋರಾಟ ಸಮಿತಿಗೆ ನೇತೃತ್ವ ವಹಿಸುವಂತೆ ಪರ್ತಕರ್ತರ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು.
ರೈಲು ಸೌಲಭ್ಯ ಅತ್ಯಗತ್ಯ: ತಾಲೂಕಿನ ಸಂಪೂರ್ಣ ಅಭಿವೃದ್ದಿಗೆ ರೈಲು ಸೌಲಭ್ಯ ಅತ್ಯಗತ್ಯವಾಗಿದ್ದು, ಈ ದಿಸೆಯಲ್ಲಿ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ ಹಾಗೂ ಸಾಗರ ಕ್ಷೇತ್ರ ಮಾತ್ರ ಈ ಸೌಲಭ್ಯವನ್ನು ಹೊಂದಿದೆ ಎಂದ ಅವರು ಸಾಗರದಲ್ಲಿ 1938 ರಲ್ಲಿನ ರೈಲು 59 ರಲ್ಲಿ ಅನುಪಯುಕ್ತ, ಜನಸಂಚಾರ ವಿರಳ ಎಂಬ ನೆಪಕ್ಕೆ ಸ್ಥಗಿತಗೊಳ್ಳುವ ಸಂಭವ ಉಂಟಾದಾಗ ಶಾಂತಿಯುತ ಮಾರ್ಗದ ಮೂಲಕ ಸಂಪರ್ಕ ಸ್ಥಗಿತಗೊಳ್ಳದಂತೆ ಪ್ರಯತ್ನವನ್ನು ಕೈಗೊಂಡಿದ್ದಾಗಿ ತಿಳಿಸಿದರು.
ಪರ್ತಕರ್ತರು ವೃತ್ತಿ ಗೌರವಕ್ಕೆ ಧಕ್ಕೆ ಬಾರದ ರೀತಿ ಸುದ್ದಿಯನ್ನು ಬೆನ್ನತ್ತಿ ವರದಿ ಪ್ರಕಟಿಸಬೇಕಾಗಿದೆ ಎಂದ ಅವರು ವರದಿಯಲ್ಲಿ ದೇಶದ ಹಿತದ ಬಗ್ಗೆ ಯೋಚಿಸುವಂತೆ ತಿಳಿಸಿ ಸುದ್ದಿಯ ಭರದಲ್ಲಿ ನೈಜ,ನಿಖರ,ಸ್ಪಷ್ಟತೆ ಇಲ್ಲದ,ದೋಷಪೂರಿತ ವರದಿ ಪ್ರಕಟವಾದಲ್ಲಿ ಪತ್ರಿಕಾರಂಗಕ್ಕೆ ಅವಮಾನವಾಗಲಿದೆ ಎಂದು ಎಚ್ಚರಿಸಿದರು.
ಹಿರಿಯ ಪರ್ತಕರ್ತ ಎಸ್.ಬಿ ಮಠದ್, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು, ಜಿಲ್ಲಾ ಸಂಘದ ಕಾರ್ಯದರ್ಶಿ ವೈ.ಕೆ.ಸೂರ್ಯನಾರಾಯಣ ಮಾತನಾಡಿದರು. ಅಧ್ಯಕ್ಷತೆಯನ್ನು ತಾ.ಅದ್ಯಕ್ಷ ಹುಚ್ರಾಯಪ್ಪ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

