ಹಕ್ಕು ದುರುಪಯೋಗ ಮಾಡಿಕೊಳ್ಳದೇ ರಕ್ಷಣೆಗಾಗಿ ಬಳಸಿ
ಶಿವಮೊಗ್ಗ, ಜು. 23 ಮಹಿಳೆಯರು ತಮ್ಮ ಹಕ್ಕು ದುರುಪಯೋಗ ಮಾಡಿಕೊಳ್ಳದೇ ಅದನ್ನು ತಮ್ಮ ರಕ್ಷಣೆಗಾಗಿ ಬಳಸಿಕೊಳ್ಳಬೇಕು ಎಂದು ಎಫ್ಪಿಎ ಇಂಡಿಯಾ ನಿಕಟಪೂರ್ವ ಅಧ್ಯಕ್ಷೆ ವಿಜಯಾ ಶ್ರೀಧರ್ ಹೇಳಿದರು.
ಎಫ್ಪಿಎ ಇಂಡಿಯಾ ಮಂಗಳವಾರ ಗುಂಡಪ್ಪ ಶೆಡ್ನಲ್ಲಿನರುವ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಎಪ್ಪಿಎಐ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು, ಮಹಿಳೆ ಮೊದಲು ತನ್ನ ಹಕ್ಕು ಗೌರವಿಸುವುದನ್ನು ಕಲಿಯಬೇಕು. ಹಕ್ಕು ದುರುಪಯೋಗ ಮಾಡಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಅಸಾಧ್ಯ ಎಂದವರು ಹೇಳಿದರು.
ಶಾಲೆಗೆ ಕಳುಹಿಸಿ:್ಛ ಪ್ರಸ್ತುತ ಮಹಿಳೆಯ ರಕ್ಷಣೆಗಾಗಿ ಸರ್ಕಾರ ಹಲವು ಕಾನೂನು ಜಾರಿಗೆ ತಂದಿದೆ. ಆಕೆಯ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ಆದರೆ ಪೋಷಕರು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಹಕ್ಕು ಹಾಗೂ ಕಾನೂನಿನ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದರು.
ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಯೋಜನೆ ಅಗತ್ಯ. ಕುಟುಂಬ ಯೋಜನೆಯ ಮಹತ್ವವನ್ನು ಅರಿತು ಜನನ ಪ್ರಮಾಣವನ್ನು ನಿಯಂತ್ರಿಸದಿದ್ದಲ್ಲಿ ಜನಸಂಖ್ಯಾ ಸ್ಫೋಟ ಉಂಟಾಗುತ್ತದೆ. ಈ ಬಗ್ಗೆ ಎಫ್ಪಿಎಐ ಸಂಸ್ಥೆ ನಗರದಲ್ಲಿ ಲೈಂಗಿಕ ಸಮಸ್ಯೆ ಹಾಗೂ ಕುಟುಂಬ ಯೋಜನೆ, ಆರೋಗ್ಯ ಕ್ಷೇತ್ರದ ವಿವಿಧ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಎಫ್ಪಿಎಐ ವಿಶ್ವಸಂಸ್ಥೆಯ ಅನುದಾನದಡಿಯಲ್ಲಿ ಪ್ರಾರಂಭವಾಗಿದ್ದು, ವಿಶ್ವದಲ್ಲಿ ಸಂಭವಿಸುತ್ತಿರುವ ಹವಾಮಾನ ವೈಪರಿತ್ಯ, ಅತಿವೃಷ್ಟಿ, ಅನಾವೃಷ್ಟಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿ ದೌರ್ಜನ್ಯ, ಹಿಂಸೆಯನ್ನು ಪ್ರತಿಭಟಿಸುವ ಮನೋಭಾವ ಬೆಳೆಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಪ್ರಮುಖ ಪಾತ್ರ: ಎಫ್ಪಿಎಐ ಎನ್ನುವುದು ಸರ್ಕಾರದ ಅಂಗ ಸಂಸ್ಥೆ. ಇದು ಕುಟುಂಬ ಯೋಜನೆ ಮಾತ್ರವಲ್ಲದೇ ಇದರ ಹೊರತಾಗಿಯೂ, ಶಾಲಾ ಮಕ್ಕಳಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು. ಜನನ ನಿಯಂತ್ರಣ, ತಾಯಿ-ಮಗು ಆರೋಗ್ಯದ ಆರೈಕೆಯಲ್ಲಿ ಕಾಳಜಿ ವಹಿಸಿ ಮಗುವನ್ನು ಸಂರಕ್ಷಣೆ ಮಾಡುವುದರಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಜಿ.ಬಿ. ರುದ್ರಪ್ಪ ಮತ್ತು ಡಾ. ಆರ್.ಡಿ. ಪ್ರಭು ಅವರನ್ನು ಸನ್ಮಾನಿಸಲಾಯಿತು.
ಡಾ. ಎಸ್.ಐ. ಬೀರಾದರ್, ರಮೇಶ್ ಬಾಬು, ಸಮನ್ವಯ ಕಾಶಿ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

