ನಿವೃತ್ತಿ ಹೊಂದಿದ ಸೈನಿಕ ಜಿ. ಬಸವರಾಜ್, ವೆಂಕಟೇಶ್ ಅವರ ಮನದಾಳದ ಮಾತು
ಶಿವಮೊಗ್ಗ: ಕಾರ್ಗಿಲ್ ಯುದ್ಧದಲ್ಲಿ ಹೋರಾಡ್ಟಿ ವೀರ ಯೋಧ, ನಾಯಕ್ ಹುದ್ದೆ ಅಲಂಕರಿಸಿದ ಜಿ. ಬಸವರಾಜ್ ಮತ್ತು ವೆಂಕಟೇಶ್ ಅವರ ಯುದ್ಧದ ರೋಚಕ ಕ್ಷಣಗಳನ್ನು “OÚ«ÚsÚ®Úúڒ¥æàM¦Væ ಹಂಚಿಕೊಂಡಿದ್ದು ಹೀಗೆ...
ಕಾರ್ಗಿಲ್ ಯುದ್ಧದಲ್ಲಿ ನಿಮ್ಮ ಅನುಭವ?
ಕಾರ್ಗಿಲ್ ಯುದ್ಧ ಒಂದು ರೀತಿಯ ರೋಚಕ ಕ್ಷಣ. ಅಲ್ಲಿ ಹೋರಾಡಿದ ಎಲ್ಲ ಸೈನಿಕನದ್ದು ಸಾಹಸಮಯ ಕ್ಷಣ. ಸಾವು- ನೋವುಗಳಿಗೆ ಬೆಲೆಯೇ ಇಲ್ಲ. ದೇಶ ರಕ್ಷಣೆ ಒಂದೇ ನಮ್ಮ ಗುರಿಯಾಗಿತ್ತು. ಅಲ್ಲಿ ಎದುರಾಳಿಯ ಸೈನ್ಯ ಮದ್ದು, ಗುಂಡುಗಳ ಆರ್ಭಟ ನಡೆಸುತ್ತಿದ್ದರೂ ನಮಗೆ ಸಾಯುವ ಭಯವೇ ಇರಲಿಲ್ಲ. ಗಡಿ ರಕ್ಷಿಸುವುದೇ ನಮ್ಮ ಗುರಿಯಾಗಿತ್ತು.
ಸೈನ್ಯಕ್ಕೆ ಸೇರಿದ ಉದ್ದೇಶ?
ನಾನು ಸೈನ್ಯಕ್ಕೆ ಸೇರುವಾಗ 17 ವರ್ಷ. ಆಗ ನನಗೆ ದೇಶ ರಕ್ಷಿಸುವ ಆಸೆ ಇತ್ತು. ಜತೆಗೆ ನಿರುದ್ಯೋಗದ ಸಮಸ್ಯೆ ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ಬೇರೆ ದೇಶಗಳು ನಮ್ಮ ದೇಶದ ಮೇಲೆ ದಾಳಿ ಮಾಡುವಾಗ ಸುಮ್ಮನೆ ಕುಳಿತುಕೊಳ್ಳುವುದು ದೇಶಾಭಿಮಾನ ಇರುವ ಪ್ರಜೆಯ ಕರ್ತವ್ಯ ಅಲ್ಲ. ಈ ಎಲ್ಲ ಕಾರಣಗಳಿಂದ ಸೇನೆಗೆ ಸೇರಿಕೊಂಡೆ.
ಪ್ರಸ್ತುತ ಯುವಕರು ಸೈನ್ಯಕ್ಕೆ ಸೇರಲು ಹಿಂದೇಟು ಹಾಕಲು ಕಾರಣ?
ಇಂದಿನ ಯುವಕರು ಡಾಕ್ಟರ್, ಎಂಜಿನಿಯರ್ ಆಗಬೇಕೆಂಬ ಹಂಬಲದಿಂದ ದೇಶ ಸೇವೆಗೆ ಸಿದ್ಧವಾಗುತ್ತಿಲ್ಲ. ಆದರೆ, ನಿಜವಾದ ದೇಶ ಸೇವೆ ಮಾಡುವುದು ಯುದ್ಧದ ಭೂಮಿಯಲ್ಲಿ. ಅಲ್ಲದೇ, ಸೈನ್ಯಕ್ಕೆ ಸೇರುವಾಗ ನಾವು ಆ ರೀತಿ ಇರಬಹುದು, ಈ ರೀತಿ ಇರಬಹುದು ಎಂದು ಯುವಕರು ಕನಸು ಕಟ್ಟಿಕೊಂಡಿರುತ್ತಾರೆ. ಅಲ್ಲಿ ಹೋದ ನಂತರವೇ ನೈಜ ಸೈನಿಕನ ಕೆಲಸ ಎನೆಂಬುದು ತಿಳಿಯುವುದು. ಸೈನ್ಯದಿಂದ ನಿವೃತ್ತಿ ಹೊಂದಿದ ನಂತರ ನಮಗೊಂದು ಒಳ್ಳೆಯ ಸರ್ಕಾರಿ ಕೆಲಸ ಕೊಡಲೂ ತಾರತಮ್ಯ ಮಾಡುತ್ತಾರೆ. ಸೈನ್ಯದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿದವರು, ಇಲ್ಲಿ ಬಂದು ಮನೆ, ಕಟ್ಟಡ ಕಾಯುವ ಕೆಲಸ ಮಾಡಬೇಕು. ಹಾಗಾಗೀ ಯುವಕರು ಸೈನ್ಯಕ್ಕೆ ಸೇರಲು ಹಿಂದೇಟು ಹಾಕುತ್ತಿದ್ದಾರೆ.
ಸೈನಿಕರ ಬಗ್ಗೆ ರಾಜಕೀಯ ಮುಖಂಡರ ಮನಸ್ಥಿತಿ
ಉತ್ತಮವಾಗಿದೆ. ಆದರೆ, ನಿವೃತ್ತಿ ಹೊಂದಿದ ನಂತರ ನಮ್ಮ ಅರ್ಹತೆಗೆ ತಕ್ಕಂತೆ ಕೆಲಸ ಕೊಡಬೇಕು. ಒಬ್ಬ ಸೈನಿಕನಿಗೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನೂ ಸರ್ಕಾರ ನೀಡಬೇಕು.
ಇದಷ್ಟೇ ಒಬ್ಬ ಸೈನಿಕ ರಾಜಕೀಯ ಮುಖಂಡರು ಅಥವಾ ಸರ್ಕಾರದಿಂದ ಅಪೇಕ್ಷಿಸುವುದು.
ವೆಂಕಟೇಶ್ ಹೇಳಿದ್ದೇನು?
ಕಾರ್ಗಿಲ್ ಯುದ್ಧದಲ್ಲಿ ನಿಮ್ಮ ಅನುಭವ
ಪಾಕಿಸ್ತಾನದವರು ಎಲ್ಒಸಿ ಕ್ರಾಸ್ ಮಾಡಿ, ಟೈಗರ್ ಹಿಲ್ಸ್ ಅನ್ನು ವಶಪಡಿಸಿಕೊಂಡಿದ್ದರು. ಅದನ್ನು ರಕ್ಷಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿತ್ತು. ಆ ದಿನವನ್ನು ನೆನಸಿಕೊಂಡರೆ ಇಂದಿಗೂ ಮೈ ರೋಮಾಂಚನಗೊಳ್ಳುತ್ತದೆ. ಇದರೊಂದಿಗೆ ಭಾರತದ ಶಕ್ತಿ ಏನೆಂಬುದು ಬೇರೆ ದೇಶಗಳಿಗೆ ತಿಳಿಸಲು ಅವಕಾಶ ಸಿಕ್ಕಿತ್ತು.
ಸೈನ್ಯಕ್ಕೆ ಸೇರಿದ ಉದ್ದೇಶ?
ಮೊದನಿಂದಲೂ ದೇಶ ಸೇವೆ ಮಾಡಬೇಕೆಂಬ ಹಂಬಲವಿತ್ತು. ಹಾಗಾಗಿ ಸೈನ್ಯಕ್ಕೆ ಸೇರಿದೆ. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಳ್ಳುವ ಮೂಲಕ ನನ್ನಾಸೆ ಈಡೇರಿತು.
ಪ್ರಸ್ತುತ ಯುವಕರು ಸೈನ್ಯಕ್ಕೆ ಸೇರಲು ಹಿಂದೇಟು ಹಾಕಲು ಕಾರಣ?
ಸೈನ್ಯದ ಬಗ್ಗೆ ಯವಕರಿಗೆ ಅನುಭವ, ಮಾಹಿತಿಗಳು ಸಿಗುತ್ತಿಲ್ಲ.
ಸೈನಿಕರ ಬಗ್ಗೆ ರಾಜಕೀಯ ಮುಖಂಡರ ಮನಸ್ಥಿತಿ
ಉತ್ತಮವಾಗಿದೆ. ಆದರೆ, ಸೈನಿಕರಿಗೆ ನಿವೃತ್ತಿ ಹೊಂದಿದಾಗ ಅಗತ್ಯ ಸೌಲಭ್ಯ ನೀಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

