ವಿದ್ಯುತ್ ಚಾಲಿತ ರಕ್ಷಣಾ ಬೇಲಿ, ಸಿಸಿಟಿವಿ ಅಳವಡಿಕೆ
ಜೋಗ್‌ಫಾಲ್ಸ್: ಕರ್ನಾಟಕ ವಿದ್ಯುತ್ ನಿಗಮವು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದು, ಬೇರೆ ಸಂಸ್ಥೆಗಳಿಗೆ ಮಾದರಿಯಾಗಿದೆ. ನಿಗಮದ ಆಸ್ತಿಯನ್ನು ನಮ್ಮೆಲ್ಲರ ಆಸ್ತಿ ಎಂಬ ಭಾವನೆಯೊಂದಿಗೆ ನಿಗಮದ ಪ್ರತಿಯೊಂದು ಆಸ್ತಿಯ ಭದ್ರತೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಿಗಮದ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ ತಿಳಿಸಿದರು.
ಜೋಗದ ಶರಾವತಿ ವಿದ್ಯುದಾಗಾರ ಮತ್ತು ಬ್ರಿಡ್ಜ್‌ಗೈಟ್ ಸಮೀಪ ಬೆಂಗಳೂರಿನ ಐಬೆಕ್ಸ್ ಗ್ಯಾಲಗೇರ್ ಕಂಪನಿ ವತಿಯಿಂದ ಅಳವಡಿಸಿರುವ ವಿದ್ಯುತ್ ಚಾಲಿತ ರಕ್ಷಣಾ ಬೇಲಿ ಮತ್ತು ಸಿಸಿಟಿವಿ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ಶರಾವತಿ ವಿದ್ಯುದಾಗಾರದಲ್ಲಿ ಈಗ 2 ಭಾಗದಲ್ಲಿ ರಕ್ಷಣಾ ಬೇಲಿ ವ್ಯವಸ್ಥೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಲಿಂಗನಮಕ್ಕಿ ಜಲಾಶಯ ಮತ್ತು ವಿದ್ಯುದಾಗಾರ, ಗೇರುಸೊಪ್ಪ ವಿದ್ಯುದಾಗಾರಗಳಿಗೆ ಇದನ್ನು ಅಳವಡಿಸಲು ಚಿಂತಿಸಲಾಗಿದೆ ಎಂದು ಹೇಳಿದರು.
ಉತ್ತಮ ವ್ಯವಸ್ಥೆ: ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ರಾಜಮುಡಿ, ಇಂದಿನ ಆಧುನಿಕ ಯುಗದಲ್ಲಿ ಮಾನವ ಸಂಪನ್ಮೂಲದಿಂದ ಎಷ್ಟೇ ಭದ್ರತೆಯನ್ನು ಬಲಪಡಿಸಿದರೂ ಕಳ್ಳರು, ಭಯೋತ್ಪಾದಕರು ಚಾಣಾಕ್ಷತನದಿಂದ ದೇಶದ ಅತ್ಯಮೂಲ್ಯ ಆಸ್ತಿಯನ್ನು ದೋಚಲು ತಂತ್ರ ರೂಪಿಸುತ್ತಾರೆ. ಇದನ್ನು ತಡೆಯಲು ರೂಪಿಸಿರುವ ಈ ವ್ಯವಸ್ಥೆ ಉತ್ತಮವಾಗಿದೆ ಎಂದು ತಿಳಿಸಿದರು.
ಅಧೀಕ್ಷಕ ಅಭಿಯಂತರ ಕೆ.ಆರ್. ಶಿವಾಜಿ, ಕಾರ್ಯನಿರ್ವಾಹಕ ಅಭಿಯಂತರ ಸಿ. ಗಿರೀಶ್, ಭದ್ರತಾಧಿಕಾರಿ ಚೌಧರಿ ಪೆಂಟಯ್ಯ ಮತ್ತು ಎಲ್ಲಾ ಅಧಿಕಾರಿಗಳು, ಉದ್ಯೋಗಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

