ಒತ್ತಡ ನಿಭಾಯಿಸಲು ವಿಫಲರಾದರೆ ತೊಂದರೆ ಸಹಜ: ಡಾ. ಹರೀಶ
ಭದ್ರಾವತಿ: ಒತ್ತಡ ನಿಭಾಯಿಸಲು ವಿಫಲರಾದಾಗ ತೊಂದರೆ ಸಹಜ ಎಂದು ಮನೋವೈದ್ಯ ಡಾ. ಹರೀಶ ದೇಲಂತಬೆಟ್ಟು ತಿಳಿಸಿದರು.
ಅವರು ಸರ್ ಎಂ.ವಿ. ಫ್ರೆಂಡ್ಸ್ ಅಸೋಸಿಯೇಶನ್ ಭಾನುವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಒತ್ತಡವೇ ಇಲ್ಲದ ಜೀವನ ನಿರ್ವಹಣೆಯೂ ಅಸಾಧ್ಯ ಎಂದರು. ಒತ್ತಡ ನಿಭಾಯಿಸಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವುದೇ ಸ್ವಸ್ಥ ಸಮಾಜದ ಲಕ್ಷಣ ಎಂದು ತಿಳಿಸಿದರು.
ಕರ್ತವ್ಯ ಪ್ರಜ್ಞೆ: ಶರೀರ ಮತ್ತು ಮನಸ್ಸು ಎರಡೂ ಒಂದು ಬಗೆಯ ಒತ್ತಡಕ್ಕೊಳಗಾದರೂ ಕರ್ತವ್ಯಪ್ರಜ್ಞೆ ಮರೆಯಬಾರದು. ಈ ರೀತಿ ತೊಡಗಿಸಿಕೊಂಡಾಗ ಖಿನ್ನತೆಯಿಂದುಂಟಾಗುವ ಅಪಾಯಗಳನ್ನು ನಿರಾಯಾಸವಾಗಿ ತಡೆಗಟ್ಟಬಹುದು ಎಂದರು.
ನಮ್ಮ ದೇಹವನ್ನು ನಾವು ನಿಯಂತ್ರಿಸಿಕೊಳ್ಳದಿದ್ದರೆ ಮನಸ್ಸನ್ನು ನಿಯಂತ್ರಿಸಲಾಗದು ಎಂದು ತಿಳಿಸಿದ ಅವರು ಹಿರಿಯ ನಾಗರಿಕರ ಸಮಸ್ಯೆಗಳನ್ನು ವಿಶ್ಲೇಷಿಸುತ್ತಾ ವಯಸ್ಸಾದಂತೆ ನಿರ್ಣಯಕ್ಕೆ ಬರಲಾರದ ದ್ವಂದ್ವ ಹೆಚ್ಚಾಗುತ್ತದೆ ಎಂದರು. ಸಮಸ್ಯೆ ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.
ವ್ಯಾಯಾಮ, ಯೋಗ ಮತ್ತು ಧ್ಯಾನದಿಂದ ಆರೋಗ್ಯಕರ ದಿನಚರಿಗಳಿಂದ ಮತ್ತು ನಿತ್ಯಕರ್ಮಗಳಿಂದ ನಿತ್ಯಧರ್ಮ ಕಾಪಾಡಿಕೊಂಡು ಆತ್ಮಸಾಕ್ಷಿಯಿಂದ ಪರಿಶುದ್ಧ ಜೀವನ ನಡೆಸಬೇಕು ಎಂದು ಡಾ. ಹರೀಶ್ ಹೇಳಿದರು.
ರಮ್ಯ ಪ್ರಾರ್ಥಿಸಿದರು. ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ.ಎಸ್. ಹಾಲಪ್ಪ ಸ್ವಾಗತಿಸಿದರು. ಡಿ.ಕೆ. ರಾಜು ಮತ್ತು ಪ್ರೇಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

