ಶಿವಮೊಗ್ಗ

ಜ್ಞಾನ ಉಪಯೋಗಕ್ಕೆ ಕಲಾವಂತಿಕೆ ಬೇಕು: ಪ್ರೊ. ಸಿದ್ದರಾಮಯ್ಯ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.30
ವಿಷಯದ ಜ್ಞಾನ ಪಡೆಯುವುದಷ್ಟೇ ಮುಖ್ಯ ಅಲ್ಲ. ಜ್ಞಾನ ಸದುಪಯೋಗವಾಗಬೇಕಾದರೆ ಹೃದಯ ಸಂಸ್ಕಾರ ಕೊಡುವ ಕಲಾವಂತಿಕೆಯೂ ಬೇಕು ಎಂದು ಕವಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ನಗರದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಅವರು ಕನ್ನಡ ಮತ್ತು ಸಂಸ್ಕೃತಿ ಸಂಘ “ÑÚæàVÚsÚß’ ಉದ್ಘಾಟನಾ ಕಾರ್ಯಕ್ರಮದಲ್ಲಿ, ಬರೀ ಶಿಕ್ಷಣ ಪಡೆದರೆ ಮನುಷ್ಯ ವ್ಯಕ್ತಿಕೇಂದ್ರಿತವಾಗಿ ಯೋಚಿಸುತ್ತಾನೆ. ಅವನು ಜೀವಕೇಂದ್ರಿತವಾಗಿ ಬೆಳೆಯಬೇಕು. ಅದಕ್ಕಾಗಿ ಸಣ್ಣತನವನ್ನು ನಿವಾರಿಸುವ, ಬಂಧನಗಳಿಂದ ಮುಕ್ತಗೊಳಿಸುವ ಸಂಸ್ಕೃತಿ, ಸಂಸ್ಕಾರವನ್ನು ಮನುಷ್ಯನಿಗೆ ಕೊಡಬೇಕು. ಸಾಹಿತ್ಯ ಬೋಧನೆ ಹೃದಯ ಸಂಸ್ಕಾರ ಕೊಡುವ ಕಾರ್ಯ ಮಾಡುತ್ತದೆ. ಇಲ್ಲದಿದ್ದರೆ ವ್ಯಕ್ತಿಯು ಸ್ವಾರ್ಥಿಯಾಗುತ್ತಾನೆ. ಸಮಾಜ ಕಂಟಕನಾಗುತ್ತಾನೆ ಎಂದರು.
ಕಾಯಕ ಗೌರವಿಸಿ: ಮುಖ್ಯವಾಗಿ ಕಾಯಕದ ಬಗೆಗಿನ ತಾರತಮ್ಯವನ್ನು ನಾವು ನಿವಾರಿಸಿಕೊಳ್ಳಬೇಕು. ಕಾಯಕದಲ್ಲಿ ಮೇಲುಕೀಳುಗಳು ಇಲ್ಲ. ಯಾರಿಗೆ ತಾವು ಮಾಡುವ ಕಾಯಕದ ಬಗ್ಗೆ ಗೌರವ ಇರುವುದಿಲ್ಲವೋ ಅವರು ತಿರಸ್ಕೃತವಾಗಬೇಕು. ಯಾವ ವ್ಯಕ್ತಿ ನಿಸರ್ಗಧರ್ಮಕ್ಕೆ ಎರವಾಗದೇ ಬದುಕನ್ನು ಕಟ್ಟಿಕೊಳ್ಳುತ್ತಾನೆಯೋ ಅವರನ್ನು ಗೌರವಿಸಬೇಕು ಎಂದು ತಿಳಿಸಿದರು.
ಇನ್ನೊಬ್ಬ ಮುಖ್ಯ ಅತಿಥಿ, ಕವಯಿತ್ರಿ ಸವಿತಾ ನಾಗಭೂಷಣ್, ಮೌಢ್ಯ, ಭ್ರಷ್ಟಾಚಾರ, ಜಾತೀಯತೆಯ ಸವಾಲುಗಳನ್ನು ಎದುರಿಸಬೇಕಾಗಿದೆ. ಆದರೆ ಇವುಗಳ ಬಗ್ಗೆ ಚಕಾರ ಎತ್ತದ ಶಿಕ್ಷಣ ಯಾಕೆ ಬೇಕು ಎಂಬ ಪ್ರಶ್ನೆ ಮೂಡುತ್ತಿದೆ ಎಂದರು. ಧರ್ಮ, ಮತ, ದೇವರು ನಮ್ಮ ಎದೆಯಲ್ಲಿ, ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯದು. ಅದನ್ನು ಹೊಡೆದಾಟಕ್ಕೆ ಬಳಸಿಕೊಳ್ಳಬಾರದು ಎಂದ ಅವರು ತಮ್ಮ ಎರಡು ಕವನಗಳನ್ನು ಈ ಸಂದರ್ಭದಲ್ಲಿ ವಾಚಿಸಿದರು. ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ. ಸಾಲಿಮಠ ಅವರು ಸಂಘವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಡೀನ್ (ಕೃಷಿ) ಡಾ. ಮಂಜುನಾಥ್ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.