ಶಿವಮೊಗ್ಗ

ಶಿವಮೊಗ್ಗದಲ್ಲಿ ಸಿದ್ಧವಾಯ್ತು ಸಿಂಥೆಟಿಕ್ ಟ್ರ್ಯಾಕ್

Published On :


 ಮೋಹನ್ ಕುಮಾರ್
ಕ.ಪ್ರ.ವಾರ್ತೆ  ಶಿವಮೊಗ್ಗ  ಜು.30 ಮಲೆನಾಡಿನ ಅಥ್ಲೀಟ್ಗಳ ಹಲವು ವರ್ಷಗಳ ಕನಸು ನನಸಾಗುವ ಸಮಯ ಬಂದಿದೆ. ನಗರದ ನೆಹರು  ಕ್ರೀಡಾಂಗಣದಲ್ಲಿ ಮೊದಲಿದ್ದ ಸಿಂಡರ್ ಟ್ರ್ಯಾಕ್ ಬದಲಿಗೆ ಅಥ್ಲೀಟ್ಗಳ ಓಟಕ್ಕೆ ಕೆಂಪುಬಣ್ಣದ ಸಿಂಥೆಟಿಕ್ ಟ್ರ್ಯಾಕ್ ಸಿದ್ಧಗೊಂಡಿದೆ.
 ಶಿವಮೊಗ್ಗ ಜಿಲ್ಲೆ ಹತ್ತಾರು ಅಥ್ಲೀಟ್ಗಳನ್ನು ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದೆ. ಆದರೆ, ಜಿಲ್ಲೆಯಲ್ಲಿ ಉತ್ತಮವಾದ ಸಿಂಥೆಟಿಕ್ ಟ್ರ್ಯಾಕ್ ಇಲ್ಲ ಎಂಬ ಕೊರಗು ಆಗಿಂದಾಗಿ ಕೇಳಿಬರುತ್ತಲೇ ಇತ್ತು.
 ಅನೇಕ ಕ್ರೀಡಾಪಟುಗಳು ಈ ಕಾರಣಕ್ಕಾಗಿಯೆ ಮೂಲೆಗುಂಪಾಗಿದ್ದರು. ಇದೀಗ ಅಥ್ಲೆಟಿಕ್ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಜಿಲ್ಲೆಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೆಹರು ಕ್ರೀಡಾಂಗಣದಲ್ಲಿ 400 ಮೀಟರ್ನ 8 ಲೇನ್ನ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಿದೆ.
 ಶಿವಮೊಗ್ಗ ಸೇರಿದಂತೆ ರಾಜ್ಯದ 8 ಕ್ರೀಡಾಂಗಣದಲ್ಲಿ ಈ ರೀತಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಿದ್ದು, ಮತ್ತೆ 5 ಜಿಲ್ಲೆಗಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ನೆಹರೂ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲು ಕೆಲವು ಸಂಘ, ಸಂಸ್ಥೆಗಳು  ವಿರೋಧ ವ್ಯಕ್ತಪಡಿಸಿದ್ದವು.
 ಆದರೆ, ಈ ಎಲ್ಲಾ ಗೊಂದಲದ ನಡುವೆ ಕ್ರೀಡಾ ಇಲಾಖೆ ಮತ್ತು ಜಿಲ್ಲಾಡಳಿತ 2011ರಲ್ಲಿ ಸರ್ಕಾರ ಮಂಜೂರು ಮಾಡಿದ್ದ ಹಣವನ್ನು ಬಳಸಿಕೊಂಡು ಯೋಜನೆ ಕೈಗೆತ್ತಿಕೊಂಡಿತು. ಈ-ಟೆಂಡರ್ ಮೂಲಕ ಟೆಂಡರ್ ಕರೆಯಲಾಗಿತ್ತು.
 ಆದರೆ, ತಾಂತ್ರಿಕ ದೋಷದಿಂದ ಮೊದಲ ಟೆಂಡರ್ನ್ನು ಸ್ಥಗಿತಗೊಂಡಿದ್ದು, ಎರಡನೇ ಬಾರಿ ಲೋಕೋಪಯೋಗಿ ಇಲಾಖೆ ಬೆಂಗಳೂರಿನ ಮೇವರಿಕ್ ಟರ್ಫ್ ಕಾರ್ಪೋರೇಷನ್ ಸಂಸ್ಥೆಗೆ ಟೆಂಡರ್ ನೀಡಿತು. ಕಾಮಗಾರಿ ಕೈಗೆತ್ತಿಕೊಂಡು ಸಂಸ್ಥೆ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಿದೆ.
ಏನಿದು ಸಿಂಥೆಟಿಕ್ ಟ್ರ್ಯಾಕ್: ಕ್ರೀಡಾಂಗಣದಲ್ಲಿ ಮೊದಲು ಮಣ್ಣಿನ ಹಾಗೂ ಹಾರುಬೂದಿಯ ಸಿಂಡರ್ ಟ್ರ್ಯಾಕ್ ಮೇಲೆ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು, ಈ ವೇಳೆ ಕ್ರೀಡಾಪಟುಗಳು ಗಾಯಗೊಳ್ಳುತ್ತಿದ್ದರು. ಇದೀಗ ಇಲಾಖೆ ಕೃತಕವಾಗಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಿದ್ದು,
ನೆಲಕ್ಕೆ ನಯವಾದ ಸಿಂಥೆಟಿಕ್ ರಬ್ಬರ್ರೈಸಿಡ್ ಮೆಟಿರಿಯಲ್ ಬಳಸಿ ಟ್ರ್ಯಾಕ್ ನಿರ್ಮಿಸಲಾಗಿದೆ. ಇದಕ್ಕೆ ಜರ್ಮನಿ ಮತ್ತು ಚೀನಾ ತಂತ್ರಜ್ಞಾನ ಬಳಸಲಾಗಿದ್ದು, ಅಲ್ಲಿನ ತಂತ್ರಜ್ಞರ ತಂಡ ಬಂದು ಕೆಲಸ ಮಾಡಿದೆ.
 ಇದಕ್ಕೆ ಎರಡು ರೀತಿಯ ಪೈಂಟ್ನ ಕಂಪೋನೆಂಟ್ ದ್ರಾವಣ ಹಾಕಲಾಗಿದೆ. ಅದರ ಮೇಲೆ ಪುಟ್ಟ ರಬ್ಬರ್ ಹರಳುಗಳನ್ನು ಸುರಿಯಲಾಗಿದೆ.
ಈ ಟ್ರ್ಯಾಕ್ ಮೇಲೆ ಬರಿಗಾಲಿನಲ್ಲಿ ಓಡಲು ಸಾಧ್ಯವಿಲ್ಲ. ಬೂಟ್ ಹಾಕಿಯೇ ಓಡಬೇಕು. ವಿಶೇಷವೆಂದರೆ ಮಳೆಗಾಲದಲ್ಲಿಯೂ ಯಾವುದೇ ಸಮಸ್ಯೆ ಇಲ್ಲದೆ, ಮಳೆ ನಿಂತ ಕೆಲ ಹೊತ್ತಿನಲ್ಲಿಯೇ ನೀರು ಇಂಗುವುದರಿಂದ ಕ್ರೀಡಾಚಟುವಟಿಕೆಗಳನ್ನು ನಡೆಸಬಹುದು.
ರಾಜ್ಯದಲ್ಲೇ ಪ್ರಥಮ: ಈ ಸಿಂಥೆಟಿಕ್ ಟ್ರ್ಯಾಕ್ನ್ನು ಸುಮಾರು 4.40 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಟ್ರ್ಯಾಕ್ನ ಎರಡು ವಿಭಾಗದಲ್ಲಿ ಡಿ ಏರಿಯಾ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ.
 ಇದು ರಾಜ್ಯದಲ್ಲಿಯೇ ಪ್ರಥಮ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು, ಈ ಏರಿಯಾದಲ್ಲಿ ಶಾಟ್ಪೂಟ್, ಹೈಜಂಪ್, ಜಾವಲಿಂಗ್ ಸೇರಿದಂತೆ ಮತ್ತಿತರ ಕ್ರೀಡೆಗಳನ್ನು ಇಲ್ಲಿ ನಡೆಸಲಾಗುವುದು.
 ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಕೇವಲ ರನ್ನಿಂಗ್ಗೆ ಮಾತ್ರ ಅವಕಾಶವಿದೆ.
ರಾಷ್ಟ್ರೀಯ ಹಬ್ಬಗಳಿಗೆ ನೋ ಎಂಟ್ರಿ: ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಿದ ಸಂಸ್ಥೆ ರಾಷ್ಟ್ರೀಯ ಹಬ್ಬಗಳನ್ನು ಇಲ್ಲಿ ಮಾಡಲು ಸಾಧ್ಯವಿಲ್ಲ. ಈ ವೇಳೆ ಮಾರ್ಷಲ್ ಮಾಡಲು ಬಳಸುವ ಶೂಗಳು ಒರಟಾಗಿರುವುದರಿಂದ ಟ್ರ್ಯಾಕ್ ಹಾಳಾಗುತ್ತದೆ.
 ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಾರಿಯಿಂದ ರಾಷ್ಟ್ರೀಯ ಹಬ್ಬಗಳನ್ನು(ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ)ನಗರದ ಡಿಎಆರ್ ಆವರಣದಲ್ಲಿ ನಡೆಸಲು ನಿರ್ಧರಿಸಿದೆ.
ಆ. 3ರಂದು ಉದ್ಘಾಟನೆ: ಈ ಸಿಂಥೆಟಿಕ್ ಟ್ರ್ಯಾಕ್ ಆ.3ರಂದು ಲೋಕಾರ್ಪಣೆಯಾಗಲಿದ್ದು, ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ, ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಉಪಸ್ಥಿತಿಯಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕೆ ಸಚಿವ ಕೆ. ಅಭಯ್ ಚಂದ್ರ ಉದ್ಘಾಟಿಸುವರು.


ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಇದನ್ನು ಎಲ್ಲಾ ಅಥ್ಲೆಟಿಕ್ ಕ್ರೀಡಾಪಟುಗಳು ಬಳಸಿಕೊಳ್ಳಬೇಕು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಇನ್ನು ಮುಂದೆ ಇಲ್ಲಿಯೇ ನಡೆಸಬಹುದು.
  -ಎಂ. ಚಂದ್ರಶೇಖರ್,    
            ಯುವಜನ ಸಬಲೀಕರಣ       ಕ್ರೀಡಾ ಇಲಾಖೆ
   ಸಹಾಯಕ  ನಿರ್ದೇಶಕ
 


ಏನಿದು ಸಿಂಥೆಟಿಕ್ ಟ್ರ್ಯಾಕ್...?


ನೆಲಕ್ಕೆ ನಯವಾದ ಸಿಂಥೆಟಿಕ್ ರಬ್ಬರ್ರೈಸಿಡ್ ಮೆಟಿರಿಯಲ್ ಬಳಸಿ ಟ್ರ್ಯಾಕ್ ನಿರ್ಮಿಸಲಾಗಿದೆ
ಇದಕ್ಕೆ ಎರಡು ರೀತಿಯ ಪೈಂಟ್ನ ಕಂಪೋನೆಂಟ್ ದ್ರಾವಣ ಹಾಕಲಾಗಿದೆ
ಅದರ ಮೇಲೆ ಪುಟ್ಟ ರಬ್ಬರ್ ಹರಳುಗಳನ್ನು ಸುರಿಯಲಾಗಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.