ಸಾಲ ಮನ್ನಾ: ಹಣ ಬಿಡುಗಡೆಗೆ ಆಗ್ರಹ
ಶಿರಾಳಕೊಪ್ಪ: ಈ ಹಿಂದಿನ ಸರ್ಕಾರ ರೈತರು ಸಹಕಾರಿ ಸಂಘಗಳಿಂದ ಪಡೆದಂತಹ 25 ಸಾವಿರ ಸಾಲ ಮನ್ನಾ ಮಾಡಿ ಆದೇಶಿಸಿತ್ತು, ಆದರೆ ಶಿಕಾರಿಪುರ ತಾಲ್ಲೂಕಿನ 250 ರೈತರ ಸಾಲದ ಬಾಪ್ತು 25 ಲಕ್ಷ ಮಾತ್ರ ಸಂದಾಯ ಮಾಡಿದ್ದು, ಬಾಕಿ ರೈತರ ಸಾಲದ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ತಾಲ್ಲೂಕ ಜೆಡಿಎಸ್ ಅಧ್ಯಕ್ಷ ನಾಗನಗೌಡ ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಿರಾಳಕೊಪ್ಪದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಶಿಕಾರಿಪುರ ತಾಲ್ಲೂಕಿನಲ್ಲಿ ಒಟ್ಟು 13ಸಾವಿರ ರೈತರ 24 ಕೋಟಿ ರು. ಸಾಲ ಮನ್ನಾಆಗಿದೆ. ಆದರೆ 250 ರೈತರಿಗೆ ಅನಕೂಲ ವಾಗುವಂತೆ ಹಣ ಸಂದಾಯ ಮಾಡಿದೆ. ಉಳಿದ ರೈತರ ಹೆಸರಿನಲ್ಲಿ ಸಾಲದ ಹಣ ಬಾಕಿ ಹಾಗೆಯೇ ಉಳಿದಿದೆ ಆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದಿದ್ದಾರೆ.
ಹೊಸ ಸಾಲ ಇಲ್ಲ: ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದುಸಕಾಲಕ್ಕೆ ಮಳೆ ಆಗುತ್ತಿರುವದರಿಂದ ಬಿತ್ತನೆಕಾರ್ಯ ಪ್ರಾರಂಭವಾಗಿದೆ,ಆದರೆ ಸಾಲಬಾಕಿ ಹಾಗೆಯೇ ಇರುವದರಿಂದ ಸಹಕಾರಿ ಸಂಘಗಳು ರೈತರಿಗೆ ಹೊಸಸಾಲ ವಿತರಿಸಲು ನಿರಾಕರಿಸುತ್ತಿವೆ ಇದರಿಂದ ರೈತರು ಪರದಾಡುವಂತಾಗಿದೆ.
ರೈತರು ಸಹಕಾರಿ ಸಾಲ ದೊರಯದ ಕಾರಣ ಖಾಸಗಿ ಸಾಲ ಪಡೆಯಲು ಪರದಾಡುವಂತಾಗಿರುವದರಿಂದ ಸರ್ಕಾರ ತಕ್ಷಣ ಎಚ್ಚೆತ್ತು,ರೈತರಿಗೆ ಹೊಸಸಾಲ ದೊರೆಯುವಂತೆ ಅನಕೂಲ ಮಾಡಿಕೊಡಲು ರೈತರ ಸಾಲ ಮನ್ನಾ ಮಾಡಿದ ಅಸಲು ಮತ್ತು ಬಡ್ಡಿಯ ಮೊತ್ತವನ್ನು ಮರುಸಂದಾಯ ಮಾಡಿದರೆ ರೈತರು ಪುನಹ ಹೊಸಸಾಲ ಪಡೆಯಲು ನ್ಯಾಬದ್ದವಾಗಿ ಬೇಡಿಕೆ ಸಲ್ಲಿಸ ಬಹುದು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

