ಹಾಲು ಉತ್ಪಾದನೆಗೆ ಗಮನ ಹರಿಸಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.1
ಹಾಲು ಉತ್ಪಾದನೆ ಹೆಚ್ಚು ಮಾಡುವತ್ತ ಗಮನ ಹರಿಸುವಂತೆ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಹೇಳಿದರು.
ನಗರದಲ್ಲಿ ಶನಿವಾರ ಶಿವಮೊಗ್ಗ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘವು ಆಯೋಜಿಸಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ನಂದಿನಿ ಮೈಸೂರು ಪಾಕ್ ಹಾಗೂ ನಂದಿನಿ ಮ್ಯಾಂಗೋ ಲಸ್ಸಿ ಬಿಡುಗಡೆ ಮಾಡಿದ ಅವರು, ಗುಜರಾತ್ ನಂತರ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯ ಕರ್ನಾಟಕ. ಪ್ರತಿ ದಿನ 40 ಲಕ್ಷ ಲೀಟರ್ ಹಾಲು ಉತ್ಪದನೆಯಾಗುತ್ತಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆ ಒಳಗೊಂಡ ಶಿವಮೊಗ್ಗ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ 3.14 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದನ್ನು ಹೆಚ್ಚಿಸುವ ದಿಸೆಯಲ್ಲಿ ಪ್ರಯತ್ನ ನಡೆಯಬೇಕು ಎಂದರು.
ಶಿಮುಲ್ ಅಧ್ಯಕ್ಷ ಕೆ.ಎಲ್. ಜಗದೀಶ್ವರ್, ಹಾಲಿನಲ್ಲಿರುವಷ್ಟು ಪೌಷ್ಠಿಕ ಅಂಶಗಳು ಬೇರೆ ಪದಾರ್ಥಗಳಲ್ಲಿ ಸಿಗುವುದಿಲ್ಲ. ಹೆಚ್ಚು ಹಾಲು ಬಳಸಿದಷ್ಟೂ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ಸಹಕಾರ ಕ್ಷೇತ್ರದ ಮೂಲಕ ಮಾರುಕಟ್ಟೆ ನಡೆಸುತ್ತಿರುವ ನಂದಿನಿ ಹಾಲನ್ನೇ ಎಲ್ಲರೂ ಬಳಸುವಂತೆ ಜಾಗೃತಿ ಮೂಡಿಸಿ. ಇದರಿಂದ ರಾಜ್ಯದ ರೈತ ಸಮುದಾಯಕ್ಕೆ ದೊಡ್ಡ ಆಸರೆಯಾಗುತ್ತದೆ ಎಂದರು.
ಶಿಮುಲ್ ನಿರ್ವಾಹಕ ನಿರ್ದೇಶಕ ವಿ.ಎಸ್. ಅಕ್ಕಿ, ನಿರ್ದೇಶಕರಾದ ಎಂ.ಆರ್. ಮಹೇಶ್ವರಪ್ಪ, ಜಗದೀಶಪ್ಪ ಬಣಕಾರ್, ಎಸ್.ಎಂ. ಬಸವರಾಜ್, ಎಂ.ಜಿ. ರಾಮಚಂದ್ರ, ಟಿ. ಶಿವಶಂಕರಪ್ಪ, ಜಯರಾಮ್ ಗೊಂದಿ, ಷಣ್ಮುಖ ಪಾಟೀಲ್, ಸಹಕಾರ ಸಂಘಗಳ ಉಪನಿಬಂಧಕ ಅಶೋಕ್ ವಿ. ಮತ್ತಿತರರು ಇದ್ದರು.
ಡಾ. ಎಂ.ವಿ. ಸಾಗರ್ ಅವರು ಆಹಾರ ಮತ್ತು ಆರೋಗ್ಯ ಕುರಿತು, ಚಟ್ನಹಳ್ಳಿ ಮಹೇಶ್ ಅವರು ಜನಪದದಲ್ಲಿ ಹಾಲು ಕುರಿತು ಉಪನ್ಯಾಸ ನೀಡಿದರು. ಡಾ. ಸಾಸ್ವೆಹಳ್ಳಿ ಸತೀಶ್ ನತ್ತು ತಂಡದಿಂದ ಕಿರುನಾಟಕ ಇದೇ ಸಂದರ್ಭದಲ್ಲಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

