ಶಿವಮೊಗ್ಗ

29,30ರಂದು ಹಾಸ್ಯ ನಾಟಕ ರಚನಾ ಕಾರ್ಯಾಗಾರ

Published On :

ಶಿವಮೊಗ್ಗ: ಶಿವಮೊಗ್ಗೆಯ ಕಲಾಕಿರಣ ಸಂಸ್ಥೆಯು ಶಿವಮೊಗ್ಗ ರಂಗಾಯಣದ ಸಹಕಾರದೊಂದಿಗೆ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಜೂನ್ 29ಹಾಗೂ 30ರಂದು ಹಾಸ್ಯ ನಾಟಕ ರಚನಾ ಕಾರ್ಯಾಗಾರವನ್ನು ಆಯೋಜಿಸಿದೆ.
ಕನ್ನಡ ರಂಗಭೂಮಿಯಲ್ಲಿ ಹಾಸ್ಯ ನಾಟಕಗಳಿಗಿರುವ ಕೊರತೆಯನ್ನು ಮನಗಂಡು ಏರ್ಪಡಿಸಲಾಗಿರುವ ಈ ಕಾರ್ಯಾಗಾರದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ನಾಟಕಕಾರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾರ್ಗದರ್ಶನ ನೀಡಲಿದ್ದಾರೆ. ಪ್ರತಿ ಜಿಲ್ಲೆಯಿಂದ ಒಬ್ಬರಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ವ್ಯವಸ್ಥೆಯ ದೃಷ್ಟಿಯಿಂದ 20 ಅಭ್ಯರ್ಥಿಗಳಿಗೆ ಪ್ರವೇಶ ಸೀಮಿತಗೊಳಿಸಲಾಗುತ್ತಿದೆ.
ಕಲಾಕಿರಣದ ವತಿಯಿಂದ ಇದೇ ಅಕ್ಟೋಬರ್- ನವೆಂಬರ್ ಮಾಹೆಯಲ್ಲಿ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಇದರ ಹಿನ್ನೆಲೆಯಲ್ಲಿ ಈ ಹಾಸ್ಯ ನಾಟಕ ರಚನಾ ಕಾರ್ಯಾಗಾರನ್ನು ಸಂಘಟಿಸಲಾಗಿದೆ. ಕಾರ್ಯಾಗಾರಕ್ಕೆ ಪ್ರವೇಶ, ಊಟ, ವಸತಿ ಉಚಿತ. ಬಂದುಹೋಗುವ ಸಾಮಾನ್ಯ ಬಸ್ ರೈಲ್ವೆ ವೆಚ್ಚವನ್ನು ಭರಿಸಲಾಗುವುದು.
ಆಸಕ್ತ ಲೇಖಕರು, ನಾಟಕಕಾರರು ಕಲಾಕಿರಣ, ಕೇರಾಫ್ ರಾಯಲ್ ಪ್ರಿಂಟರ್ಸ್, ವಂದನಾ ಟಾಕೀಸ್ ಹತ್ತಿರ, ಕೆ.ಆರ್. ಪುರಂ ರಸ್ತೆ, ಶಿವಮೊಗ್ಗ, ದೂರವಾಣಿ- 99019 53114 (ಎಂ. ಶ್ರೀನಿವಾಸನ್) 98444 56505 (ವೈದ್ಯ) ಇವರನ್ನು ಸಂಪರ್ಕಿಸಿ ಪ್ರವೇಶ ಪತ್ರ ಪಡೆದು ಜೂನ್ 20ರ ಒಳಗಾಗಿ ಸಲ್ಲಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.