ಶಿವಮೊಗ್ಗ

ಪರಿಸರ ರಕ್ಷಣೆ ಪ್ರಥಮಾದ್ಯತೆಯಾಗಲಿ

Published On :

ಕ.ಪ್ರ.ವಾರ್ತೆ  ಸೊರಬ  ಜೂ.8
ಧರ್ಮೋ ರಕ್ಷತಿ ರಕ್ಷಿತಃ ದಷ್ಟೆ ಪ್ರಮುಖವಾಗಿದ್ದು ಪರಿಸರದ ರಕ್ಷಣೆ, ಇಂದು ನಮ್ಮ ಪರಿಸರವನ್ನು ಉಳಿಸಿಕೊಂಡರೆ ಮಾತ್ರ ನಾವು ಗಳಿಸಿದ್ದು, ಹೊಂದಿದ್ದು ಸಮರ್ಪಕವಾಗಿ ಬಳಸಿ, ಉಳಿಸಿ ಅನುಭವಿಸಲು ಸಾಧ್ಯ ಎಂದು ಇಲ್ಲಿನ ಜೆಎಂಎಪ್ಸಿ ಹಿರಿಯ ವ್ಯವಹಾರ ನ್ಯಾಯಾಧೀಶೆ ಶೋಭಾವತಿ ತಿಳಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಇಲಾಖೆ ಎಸಿಎಫ್ ಚಂದ್ರಶೇಖರ್ ಮಾತನಾಡಿ, ಪರಿಸರದ ನಾಶದಿಂದ ಓಜೋನ್ ಪರದೆ ಕ್ಷೀಣಿಸಿರುವ ಕುರಿತು ಆತಂಕ ವ್ಯಕ್ತಪಡಿಸಿದರು.
ಬಿಇಒ ಹಾಲಾನಾಯ್ಕ್ ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮಕ್ಕಳಿಂದ ಶೇ.100 ಫಲಿತಾಂಶ ತರುವುದಾಗಿ ಪ್ರಮಾಣ ಮಾಡಿಸಿದರು. ಶಾಲೆಗಳಿಗೆ ಸಮರ್ಪಕ ಕಾಂಪೌಂಡ್ ಇಲ್ಲದಿರುವುದರಿಂದ ವನ ರಕ್ಷಣೆ, ಬೆಳೆಸಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕಿರಿಯ ವಿಭಾಗದ ನ್ಯಾಯಾಧೀಶೆ ಜಿ. ಅನಿತಾ, ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಡಿ. ಮಾಂಗ್ಲಿ ಮೊದಲಾದವರು ಮಾತನಾಡಿದರು.
ವಕೀಲ ಸಂಘದ ಅಧ್ಯಕ್ಷ ಸಿ.ಎಸ್. ರುದ್ರಪ್ಪ, ಹಳೇ ಸೊರಬ ಸ.ಪ್ರೌ.ಶಾಲೆ ಮುಖ್ಯ ಶಿಕ್ಷಕ ಕೆ. ಮಹೇಶ್ವರಪ್ಪ, ವಕೀಲ ಸುಧಾಕರ ಪಿ. ನಾಯ್ಕ್, ವನಪಾಲಕ ಚೆನ್ನಳ್ಳಿ, ಶಿಕ್ಷಕರಾದ ಸುರೇಶ್, ಸುಜಾತ, ಶೇಷಪ್ಪ, ಲಕ್ಷ್ಮೀ, ಕಲಾವತಿ, ಪ್ರೇಮಾ, ಪ್ರಭು, ಸತ್ಯನಾರಾಯಣ, ಜಯಶ್ರೀ, ರವೀಂದ್ರ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.