ಡಿಸಿಯವರೇ, ಸ್ವಚ್ಛತೆ ನಿಮ್ಮ ಕಚೇರಿಯಿಂದ ಪ್ರಾರಂಭಿಸಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.9
ನೈರ್ಮಲ್ಯ, ಸ್ವಚ್ಛ ಪರಿಸರ ಎಂಬಿತ್ಯಾದಿಯಾಗಿ ಪರಿಪರಿಯಾಗಿ ಮಾತನಾಡುವ ಜಿಲ್ಲಾಡಳಿತದ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದನ್ನು ಕಚೇರಿಯ ಸುತ್ತಲಿನ ವಾತಾವರಣವೇ ಸಾರಿ ಹೇಳುತ್ತಿದೆ.
ಆಳೆತ್ತರಕ್ಕೆ ಬೆಳೆದು ನಿಂತ ಗಿಡಗಂಟಿಗಳು, ಸ್ವಚ್ಛತೆಯ ಕೊರತೆಯು ವ್ಯವಸ್ಥೆಯ ಉದಾಸೀನತೆಯನ್ನು ಎತ್ತಿತೋರಿಸುತ್ತಿದೆ. ಈ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವ ಕತ್ತೆ ಹಿಂಡು ಇಲ್ಲಿ ಆಗಿಂದಾಗ್ಗೆ ಅಡ್ಡಾಡುವುದೂ ಸಾಮಾನ್ಯ.
ಜಿಲ್ಲಾಧಿಕಾರಿ ಕಚೇರಿಗೆ ತಾಗಿಕೊಂಡೇ ಪಾರ್ಥೇನಿಯಂ ಹಾಗೂ ಗಿಡಗಂಟಿಗಳು ಬೆಳೆದು ನಿಂತಿವೆ. ಇದನ್ನು ನೋಡಿಕೊಂಡೇ ತಿರುಗುವ ಅಧಿಕಾರಿ ಸಿಬ್ಬಂದಿ ಇದರ ಉಸಾಬರಿಗೆ ಹೋಗಿಲ್ಲ. ಸಂಬಂಧಪಟ್ಟವರ ಗಮನಕ್ಕೆ ತರಲೂ ಮನಸ್ಸು ಮಾಡಿಲ್ಲ.
ಡೆಂಘೀ ಸೋಂಕಿನಲ್ಲಿ ಶಿವಮೊಗ್ಗ ಜಿಲ್ಲೆಯೇ ಅಗ್ರಸ್ಥಾನದಲ್ಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡುತ್ತದೆ, ಜೊತೆಗೆ ಜನತೆ ಜಾಗೃತರಾಗಿರಬೇಕು, ಸ್ವಚ್ಛತೆ ಕಾಪಾಡಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕೆಂದು ಕರೆ ಕೊಡುತ್ತದೆ. ಆದರೆ, ತನ್ನ ಬುಡದಲ್ಲೇ ಇರುವ ಕೊಳಕನ್ನು ಸರಿಪಡಿಸಿಕೊಳ್ಳುವಲ್ಲಿ ಉದಾಸೀನ ತೋರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

