ಹಣ ದುರುಪಯೋಗ: ಶಾಸಕ ಮಧು ಆರೋಪ
ಸೊರಬ: ತಾಲೂಕು ಪ್ರವಾಸದಲ್ಲಿರುವ ಶಾಸಕ ಮಧುಬಂಗಾರಪ್ಪ ಹಿಂದಿನ ಶಾಸಕ ಹೆಚ್. ಹಾಲಪ್ಪ ಕಾರ್ಯವೈಖರಿಯನ್ನು ಪರಿಶೀಲಿಸುತ್ತಿದ್ದು, ಅಪಾರ ಪ್ರಮಾಣದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ.ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ತಾಲೂಕು ಅಭಿವೃದ್ಧಿಗಾಗಿ 700 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿಗೊಳಿಸಿದ್ದಾಗಿ ತಿಳಿಸಿರುವುದು ಕೇವಲ ಮಾತಿನಲ್ಲಿ ಮಾತ್ರ, ಇಷ್ಟೆಲ್ಲ ಅನುದಾನ ತಂದಿದ್ದರೂ ಆಗಿರುವ ಅಭಿವೃದ್ಧಿ ಬೆರಳೆಣಿಕೆ, ಅವುಗಳಲ್ಲಿ ಕಳಪೆ ಕಾಮಗಾರಿಯದ್ದೇ ಸಿಂಹಪಾಲು ಎಂದು ಕಿಡಿಕಾರಿದ್ದಾರೆ.
ತಾಲೂಕು ಅಭಿವೃದ್ಧಿಗಾಗಿ ಸರ್ಕಾರದಿಂದ ಹಣ ತರುವುದು ದೊಡ್ಡ ವಿಷಯವಲ್ಲ ತಂದ ಹಣವನ್ನು ಜನತೆಗೆ ತಲುಪಿಸುವುದು ಪ್ರಮುಖ ವಿಷಯ. ಇಲ್ಲಿ ಗಮನಿಸಬೇಕಾಗಿರುವುದು ಅಂತಹ ವಿಷಯವಾಗಿರುವುದರಿಂದ ತಾಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಲಾಗಿದೆ. ಅವೆಲ್ಲದರಲ್ಲೂ ಹಣ ಲೂಟಿಯಾಗಿದೆ. ಅಭಿವೃದ್ಧಿ ಹೆಸರಲ್ಲಿ ಮುಗ್ಧ ಜನರಿಗೆ ವಂಚನೆ ಆಗಿದೆ ಎಂದರು. ಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗಣಪತಿ, ತಾಪಂ ಅಧ್ಯಕ್ಷ ಸದಾನಂದಗೌಡ, ವಕ್ತಾರ ಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

