ಮದುವೆಯಾಗಿ 'ಕೈ' ಕೊಟ್ಟ ಸಾಗರ ನಗರ ಕಾಂಗ್ರೆಸ್ ಅಧ್ಯಕ್ಷ
ಸಾಗರ: ಮದುವೆಯಾಗಿ 'ಕೈ' ಕೊಟ್ಟ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಎಂ. ಬಣಕಾರ್ ವಿರುದ್ಧ ಮಹಿಳೆಯೊಬ್ಬಳು ನ್ಯಾಯಕ್ಕಾಗಿ ಅವರ ಮನೆ ಮುಂದೆ ಧರಣಿ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶನಿವಾರ ನಡೆದಿದೆ.
ಪ್ರವೀಣ ಬಣಕಾರ್ ಗುಂಡ್ಲುಪೇಟೆಯ ಎನ್ಜಿಒವೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಜತೆ ಮೊಬೈಲ್ ಮೂಲಕ ಸಂಪರ್ಕ ಸ್ನೇಹ ಮಾಡಿದ್ದರು. ಸ್ನೇಹ ಪ್ರೇಮಕ್ಕೆ ತಿರುಗಿ ಇಬ್ಬರ ನಡುವೆ ದೈಹಿಕ ಸಂಪರ್ಕವೂ ಏರ್ಪಟ್ಟಿತ್ತು. ಇದರ ಫಲವಾಗಿ ಲಕ್ಷ್ಮಿ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ಹೀಗಾಗಿ ಮದುವೆಯಾಗು ಎಂದು ಲಕ್ಷ್ಮಿ ಒತ್ತಾಯಿಸಿದಾಗ ಪ್ರವೀಣ್ ಇಲ್ಲದ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಮದುವೆಯಾಗಲು ನಿರಾಕರಿಸಿದಾಗ ಲಕ್ಷ್ಮೀ 2011ರ ನವೆಂಬರ್ನಲ್ಲಿ ಪ್ರವೀಣ್ ವಿರುದ್ಧ ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಪ್ರವೀಣನನ್ನು ಬಂಧಿಸಿ ಚಾಮರಾಜನಗರ ಜೈಲಿಗೆ ಕಳಿಸಿದ್ದರು. ಸುಮಾರು ಒಂದೂವರೆ ತಿಂಗಳು ಜೈಲುವಾಸ ಅನುಭವಿಸಿದ ನಂತರ ಪ್ರವೀಣ್ ಪೋಷಕರು ಲಕ್ಷ್ಮಿಯೊಂದಿಗೆ ಮದುವೆ ಮಾಡಿಸುವುದಾಗಿ ಹೇಳಿ ಇಬ್ಬರ ನಡುವೆ ರಾಜಿ ಮಾಡಿಸಿದ್ದರು. 2012, ಜ.18ರಂದು ಇಬ್ಬರೂ ಪೋಷಕರ ಸಮ್ಮಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಲಕ್ಷ್ಮಿ ಗಂಡು ಮಗುವಿಗೂ ಜನ್ಮ ನೀಡಿದ್ದಾಳೆ. ಸಾಗರದ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದಾಗ ಲಕ್ಷ್ಮಿ ಮೇಲೆ ಪ್ರವೀಣ್ ದೈಹಿಕ ಹಲ್ಲೆ ನಡೆಸಿದ್ದಾನೆ. ಇದರಿಂದ ನೊಂದ ಮಹಿಳೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೆರವಿನೊಂದಿಗೆ ಪ್ರವೀಣ್ ಮನೆ ಧರಣಿ ನಡೆಸಲು ಮುಂದಾಗಿದ್ದು, ಇದರ ಸುಳಿವು ಅರಿತ ಪ್ರವೀಣ್ ಮತ್ತು ಮನೆಯವರು ನಾಪತ್ತೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

