ಶಿವಮೊಗ್ಗ

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ ಅಗತ್ಯ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.16
ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೊದಲು  ಪೂರ್ವಭಾವಿ ತರಬೇತಿ ಪಡೆಯುವುದು ಬಹಳ ಮುಖ್ಯ ಎಂದು ಮೈಸೂರು ಎಜುಕೇಷನ್ ಅಕಾಡೆಮಿಯ ಶಿಕ್ಷಕ ರೇಣುಕಾರಾಧ್ಯ ಹೇಳಿದರು.
ಮೈಸೂರು ಎಜುಕೇಷನ್ ಅಕಾಡೆಮಿ ನಗರದ ಸ್ಕೌಟ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಐಎಎಸ್ ಮತ್ತು ಕೆಎಎಸ್ ಪರೀಕ್ಷೆಯನ್ನು ಇತರೆ ಪರೀಕ್ಷೆಗಳಂತೆ ಎದುರಿಸಲು ಸಾಧ್ಯವಿಲ್ಲ. ಇದಕ್ಕೆ ಪೂರ್ವಭಾವಿ ತಯಾರಿ ಪಡೆದು, ಕನಿಷ್ಠ ವರ್ಷವಾದರೂ ಶ್ರಮಿಸುವ ಅಗತ್ಯವಿದೆ ಎಂದರು.
ಇಂಗ್ಲಿಷ್ ಕಡ್ಡಾಯವಲ್ಲ: ಪರೀಕ್ಷೆ ಪಡೆಯಲು ಇಂಗ್ಲಿಷ್ ಕಡ್ಡಾಯ ಎಂಬ ತಪ್ಪು ಕಲ್ಪನೆ ಇದೆ. ಇದು ಪರೀಕ್ಷೆಯ ಒಂದಂಶ ಅಷ್ಟೇ. ಆದರೆ ಇಂತಹ ಪರೀಕ್ಷೆ ಎದರಿಸಲು ಕನಿಷ್ಠ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಬರುವ ಇಂಗ್ಲಿಷ್ ಸಾಕು. ಪರೀಕ್ಷೆಗಳನ್ನು ಪಡೆಯಬಹುದು ಎಂದರು.
ಐಎಎಸ್ ಮಾಡುವಾಗ ಭಾರತದ ಸಂಪೂರ್ಣ ಅರ್ಥಿಕತೆ ಮತ್ತು ಇತಿಹಾಸದ ಪರಿಚಯ ಮಾಡಿಕೊಳ್ಳಬೇಕು. ಐಎಎಸ್ ಮತ್ತು ಕೆಎಎಸ್ ಬರೆಯಲು ಆಸಕ್ತಿ ಇರುವ ಮಕ್ಕಳು ಇಂದಿನಿಂದಲೇ ತರಬೇತಿ ತರಗತಿಗಳಲ್ಲಿ ಪಾಲ್ಗೊಳ್ಳುವುದು ಸೂಕ್ತ ಎಂದ ಅವರು, ಪರೀಕ್ಷಾರ್ಥಿಗಳು ಯಾವ ವಿಚಾರದಲ್ಲಿ, ಹಿಡಿತ ಇರುತ್ತದೆಯೋ ಅದರಲ್ಲಿ ಪರೀಕ್ಷೆ ಬರೆದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ವಿದ್ಯಾಮಾನ: ಇಂತಹ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಮೊದಲು ತಮ್ಮ ಊರಿನ ಸ್ಥಳೀಯ ಇತಿಹಾಸ ತಿಳಿದುಕೊಳ್ಳುವುದು ಅಗತ್ಯ. ಕನಿಷ್ಠ ಒಂದು ವರ್ಷವಾದರೂ ತಮ್ಮ ಆಸೆಗಳನ್ನು ತ್ಯಾಗ ಮಾಡಿ ಐಎಎಸ್ ಪರೀಕ್ಷೆಗೆ ಸಿದ್ಧರಾಗಬೇಕು ಹಾಗೂ ಕನಿಷ್ಠ ದಿನಕ್ಕೆ 6-8 ಗಂಟೆ ಓದುವ ಹವ್ಯಾಸ, ಪತ್ರಿಕೆಗಳು, ದೇಶದ ಒಂದು ವರ್ಷದ ಪ್ರಸ್ತುತ ವಿದ್ಯಮಾನ  ತಿಳಿದುಕೊಳ್ಳಬೇಕು ಎಂದರು.
ಇತಿಹಾಸ, ಭೂಗೋಳ, ಆರ್ಥಿಕತೆ, ವಿಜ್ಞಾನ, ಪ್ರಸ್ತುತ ವಿದ್ಯಮಾನಗಳು ಹಾಗೂ ಬರೆಯುವ ಭಾಷೆಯ ಹಿಡಿತ ಮತ್ತು ಸಾಮಾನ್ಯ ಜ್ಞಾನವನ್ನು ಪರೀಕ್ಷಾರ್ಥಿಗಳು ಹೊಂದರಬೇಕು ಎಂದ ಅವರು, ಈ ಬಾರಿ ಯುಪಿಎಸ್‌ಸಿ ಮಾದರಿಯಲ್ಲಿಯೇ ಕೆಎಎಸ್ ಪರೀಕ್ಷೆ ನಡೆಸಲು ಸರ್ಕಾರ ಚಿಂತಿಸುತ್ತಿದೆ. ಕೆಎಎಸ್ ಪರೀಕ್ಷೆ ಬರೆಯುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಶೇ.50ರಷ್ಟು ಜನ ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವುದಿಲ್ಲ ಎಂದರು.
ನಾಯಕತ್ವ ಬೆಳೆಸಿಕೊಳ್ಳಿ: ಸಂಪನ್ಮೂಲ ವ್ಯಕ್ತಿ ರಾಜೇಶ್ ಅವಲಕ್ಕಿ ಮಾತನಾಡಿ, ಪ್ರಸ್ತುತ ದೇಶದ ಪರಿಸ್ಥಿತಿಗೆ 18-25 ವರ್ಷದ ಯವಕರು ದೇಶದ ನಾಯಕತ್ವ ಪಡೆದುಕೊಳ್ಳಬೇಕು. ಅಂದರೆ ರಾಜಕೀಯದಲ್ಲಿ ದುಡಿಯಬೇಕೆಂದೇನಲ್ಲ.
ಬದಲಿಗೆ ಸ್ಪರ್ಧಾತ್ಮಕ ಪರೀಕ್ಷೆ ಐಎಎಸ್, ಕೆಎಎಸ್ ಮತ್ತು ಐಎಫ್‌ಎಸ್ ಪರೀಕ್ಷೆಗಳನ್ನು ಬರೆಯುವ ಮೂಲಕ ನಾಯಕತ್ವ ಹೊಂದಬೇಕು ಎಂದರು.
ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ಈ ರೀತಿಯ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕಿರುಮಾಹಿತಿ ಪಡೆದುಕೊಂಡು, ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಕೀರ್ತಿ ಹೆಚ್ಚಿಸಬೇಕು ಎಂದರು.
ಆಸಕ್ತ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಜೂನ್ ಕೊನೆಯ ವಾರದಿಂದ ತರಗತಿಗಳು ನಡೆಯಲಿದ್ದು, ಮೊದಲ 40 ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ವಿವರಗಳಿಗಾಗಿ ಅಕಾಡೆಮಿಯ ಜಿಲ್ಲಾ ಸಂಯೋಜಕ ಜಗದೀಶ್ (8050602200)ರನ್ನು ಸಂಪರ್ಕಿಸಿ ಎಂದು ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.