ಶಿವಮೊಗ್ಗ

ಎಲ್‌ಬಿ, ಎಸ್‌ಬಿಎಸ್ ಕಾಲೇಜು ಉತ್ತಮ ಫಲಿತಾಂಶ

Published On :

ಕ.ಪ್ರ.ವಾರ್ತೆ , ಸಾಗರ ,  ಜೂ.18
ಇಲ್ಲಿನ ಎಲ್‌ಬಿ ಹಾಗೂ ಎಸ್‌ಬಿಎಸ್ ಸ್ವಾಯತ್ತ ಕಾಲೇಜು 2012-13ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.
ಕಾಲೇಜಿನ ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ. ಟಿ.ಎಸ್.ರಾಘವೇಂದ್ರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲಾ ವಿಭಾಗದಲ್ಲಿ ಶೇ. 90.59, ವಿಜ್ಞಾನ ವಿಭಾಗದಲ್ಲಿ ಶೇ. 82.93, ವಾಣಿಜ್ಯ ವಿಭಾಗದಲ್ಲಿ ಶೇ.72.31, ಬಿ.ಬಿ.ಎಂ. ವಿಭಾಗದಲ್ಲಿ ಶೇ.86.21 ಹಾಗೂ ಬಿಸಿಎ ವಿಭಾಗದಲ್ಲಿ ಶೇ. 68.75 ಫಲಿತಾಂಶ ದಾಖಲಾಗಿದೆ ಎಂದು ತಿಳಿಸಿದರು.
ಕಲಾವಿಭಾಗದಲ್ಲಿ ಎಸ್. ಪಲ್ಲವಿ ಶೇ. 85.25, ವಿಜ್ಞಾನ ವಿಭಾಗದಲ್ಲಿ ಜೆ. ಸುಜನ ಶೇ. 94.58, ಬಿ.ಸಿ.ಎ. ವಿಭಾಗದಲ್ಲಿ ಸ್ವಾತಿ ಭಟ್ ಶೇ. 88.07, ವಾಣಿಜ್ಯ ವಿಭಾಗದಲ್ಲಿ ವಿನಯ್ ಸಾಗರ್ ಶೇ. 94.29, ಬಿ.ಬಿ.ಎಂ. ವಿಭಾಗದಲ್ಲಿ ದಿವ್ಯ ಪಿ. ಭಟ್ ಶೇ. 95.31 ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದರು.
ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ಡಿಜಿಟಲ್ ವ್ಯಾಲ್ಯುಯೇಷನ್ ಸಿಸ್ಟಂ ಜಾರಿಗೆ ತರುವ ಯೋಜನೆ ರೂಪಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ಜೊತೆಗೆ ಕ್ಯಾಂಪಸ್ ಇಂಟರವ್ಯೂ ಮೂಲಕ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತಿದೆ. ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಹೆಚ್ಚಿನ ಅನುಕೂಲ: ಪ್ರಾಚಾರ್ಯ ಪ್ರೊ. ಬಿ.ಸಿ. ಶಶಿಧರ್, ಸ್ವಾಯತ್ತ ಕಾಲೇಜು ಕುರಿತು ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ಅನೇಕ ಅನುಮಾನಗಳಿವೆ. ಸ್ವಾಯತ್ತ ಎಂದರೆ ಸ್ವೇಚ್ಛಾಚಾರವಲ್ಲ. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಿಕೊಂಡು ಹೋಗುವಲ್ಲಿ ವಿ.ವಿ. ಮಟ್ಟದ ಸಮಿತಿಯಿದ್ದು, ಈ ಸಮಿತಿಯಲ್ಲಿ ವಿಶ್ವವಿದ್ಯಾನಿಲಯದ ಪ್ರತಿನಿಧಿಯೂ ಇರುತ್ತಾರೆ. ಹಾಗೆಯೇ ಪ್ರಶ್ನೆ ಪತ್ರಿಕೆಗಳನ್ನು ಬಾಹ್ಯ ಪರಿಣಿತರು ಸಿದ್ಧಪಡಿಸುವ ವ್ಯವಸ್ಥೆಯೂ ಇದೆ. ಈ ಸಾಲಿನಲ್ಲಿ ಕುವೆಂಪು ವಿವಿ ವ್ಯಾಪ್ತಿಯಲ್ಲಿ ಬರುವ ಯಾವ ಕಾಲೇಜುಗಳಲ್ಲೂ ಪರೀಕ್ಷೆಗಳು ಮುಗಿದಿಲ್ಲ.
ಇದರಿಂದಾಗಿ ವಿವಿಗಳಲ್ಲಿ ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಹೋಗುವವರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.