ಶಿವಮೊಗ್ಗ

ಕಾರ್ಯಕರ್ತರ 'ಕೈ' ಸೇರಿದ ಪಕ್ಷ

Published On :

ಭದ್ರಾವತಿ: ಭದ್ರಾವತಿಯಲ್ಲಿ ಕಾಂಗ್ರೆಸ್ ಪಕ್ಷ ಇಂದು ಕಾರ್ಯಕರ್ತರ ಕೈಸೇರಿದ್ದು ಕಾರ್ಯಕರ್ತರು ಹರ್ಷಿತರಾಗಿದ್ದಾರೆಂದು ಗ್ರಾಮಾಂತರ ನೂತನ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಎಚ್.ಸಿ. ದಾಸೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷವನ್ನು ಸಂಘಟಿಸಲು ಹೈಕಮಾಂಡ್ ಆದೇಶದ ಮೇರೆಗೆ ಕೆಪಿಸಿಸಿ ಭದ್ರಾವತಿ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಮುಖ್ಯವೆಂದು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಕೆ.ಟಿ. ಗಿರಿಯಪ್ಪ ತಿಳಿಸಿದರು. ಪಡಿತರ ಚೀಟಿ ವಿತರಣೆ, ಬಡಜನರಿಗೆ ಮುಂದಿನ ತಿಂಗಳಿನಿಂದ 30 ಕಿಲೋ ಅಕ್ಕಿ ವಿತರಣೆ ಇವುಗಳ ಬಗ್ಗೆ ಹೆಚ್ಚಿನ ಗಮನವೀಯುವುದರೊಂದಿಗೆ ರೈತರ ಸಂಕಷ್ಟಗಳಿಗೂ ಸರ್ಕಾರ ಧನಾತ್ಮಕವಾಗಿ ಸ್ಪಂದಿಸುವುದು ಎಂದು ಅವರು ತಿಳಿಸಿದರು.
ತಾಲೂಕು ಕಚೇರಿ ಎದುರು ಪಕ್ಷದ ಕಚೇರಿ ತೆರೆಯಲಾಗಿದ್ದು ಸಾರ್ವಜನಿಕರು ಕುಂದು-ಕೊರತೆ ಅಥವಾ ದೂರುಗಳಿದ್ದಲ್ಲಿ ಪಕ್ಷದ ಕಚೇರಿಯನ್ನು ಸಂಪರ್ಕಿಸುವಂತೆ ಅವರು ಕೋರಿದರು.
 ಗ್ರಾಮಾಂತರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಮಂಜಪ್ಪಗೌಡ, ಎಂಪಿಎಂ ಪುನಶ್ಚೇತನಗೊಳಿಸುವುದರೊಂದಿಗೆ ಅಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಅರೆಯುವ ಸಾಮರ್ಥ್ಯವನ್ನು ಈಗಿರುವ 2,500 ಟನ್‌ನಿಂದ ಪ್ರದಿದಿನ 5,000 ಟನ್‌ಗೆ ಹೆಚ್ಚಿಸುವುದರೊಂದಿಗೆ ಸಕ್ಕರೆ ಕಾರ್ಖಾನೆಯಲ್ಲಿ ಒಂದು ಎಥೆನಾಲ್ ಉತ್ಪಾದನಾ ಘಟನಕವನ್ನೂ ಸ್ಥಾಪಿಸಬೇಕೆಂಬುದು ಒತ್ತಾಯಿಸಿದರು.
ಲಕ್ಷ್ಮಣ್, ಅಮೀರ್‌ಜಾನ್, ರಾಮೇಗೌಡ, ಮಸ್ತಾನ್, ಜಹೀರ್‌ಜಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.