ಶಿವಮೊಗ್ಗ

ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಸಾಧ್ಯ: ಕಿಮ್ಮನೆ

Published On :

ಶಿವಮೊಗ್ಗ: ಬರೀ ಪ್ರತಿಭೆ ಇದ್ದರೆ ಸಾಲದು. ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡುವ ಛಲ ಹೊಂದಿರಬೇಕು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಸಂಕೇತಿ ಸಂಗೀತ ಸಭಾ ಹೊಸಹಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಧಾತ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸತತ ಪರಿಶ್ರಮದಿಂದ ಮಾತ್ರ ಪ್ರತಿಭೆ ಬೆಳಗಲು ಸಾಧ್ಯ. ಈ ನಿಟ್ಟಿನಲ್ಲಿ ಕಲಾವಿದರು ಕಾರ್ಯಪ್ರವೃತರಾಗಬೇಕು ಎಂದರು.
ಪ್ರಪಂಚದ ಎಲ್ಲರ ಹೃದಯಗಳನ್ನು ಒಗ್ಗೂಡಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದೆ. ಜಾತಿಯ ಕಟ್ಟಲೆ, ಗಡಿ ಸಮಸ್ಯೆ ಯಾವುದೂ ಇಲ್ಲದೆ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಬತ್ತಡಗಳಿಂದ ಸಂಗೀತ ಮುಕ್ತಿಗೊಳಿಸಿ ಜೀವನದಲ್ಲಿ ಉತ್ಸಾಹವನ್ನು ಮೂಡಿಸುತ್ತದೆ ಎಂದರು.
ಕೆಲ ರಾಜಕಾರಣಿಗಳು ಯಾವುದೇ ಸಾಧನೆ ಮಾಡದಿದ್ದರೂ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಸನ್ಮಾನ ಸ್ವೀಕರಿಸುತ್ತಾರೆ. ಆದರೆ, ಸಂಗೀತ ಕ್ಷೇತ್ರ ಇದಕ್ಕೆ ಭಿನ್ನ. ಸತತ ಪರಿಶ್ರಮದಿಂದ ಪ್ರತಿಭೆ ಹಾಗೂ ಜ್ಞಾನ ಸಂಪಾದಿಸಿ ಸಾಧನೆ ಮಾಡಿದವರು ಮಾತ್ರ ಇಲ್ಲಿ ಸನ್ಮಾನಕ್ಕೆ ಅರ್ಹರಾಗುತ್ತಾರೆ ಎಂದರು.
ನಾನು ಶೇ.35 ಅಂಕ ಪಡೆಯುವ ವಿದ್ಯಾರ್ಥಿ. ಚುನಾವಣೆಯಲ್ಲೂ ಇದನ್ನೇ ನಿರೀಕ್ಷೆ ಮಾಡಿದ್ದೇ. ಆದರೆ, ದೇವರು ಸಚಿವ ಸ್ಥಾನ ನೀಡುವ ಮೂಲಕ ರ್ಯಾಂಕ್ ನೀಡಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.  
ಕಾರ್ಯಕ್ರಮದಲ್ಲಿ ಹೊಸಹಳ್ಳಿ ಗಮಕ ಗ್ರಾಮದ ಅಧ್ಯಕ್ಷ ಎಚ್.ಆರ್. ಕೇಶವಮೂರ್ತಿ, ಶ್ರೀವತ್ಸ, ವೆಂಕಟರಮಣ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.