ಶಿವಮೊಗ್ಗ

ಕಾಲೇಜು ಕಟ್ಟಡ ಕಳಪೆ ಕಾಮಗಾರಿ

Published On :

ಕ.ಪ್ರ.ವಾರ್ತೆ  ಶಿರಾಳಕೊಪ್ಪ   ಜೂ.27 ಕರ್ನಾಟಕ ಹೌಸಿಂಗ್ ಬೋರ್ಡ್ ಆಶ್ರಯದಲ್ಲಿ ರು. 10ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು, 8ತಿಂಗಳ ಹಿಂದಷ್ಟೇ ಉದ್ಘಾಟಿಸಲಾಗಿದ್ದ ಮಹಿಳಾ ಪಾಲಿಟೆಕ್ನಿಕ್ ಹಾಗೂ ಪದವಿ ಕಾಲೇಜು ಇದೀಗ ದುರಸ್ತಿಗೆ ಬಂದಿರುವುದು ಕಟ್ಟಡ ಕಾಮಗಾರಿ ಕಳಪೆಯಾಗಿರುವುದನ್ನು ಬೊಟ್ಟು ಮಾಡಿ ತೋರಿಸಿದಂತಾಗಿದೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಅವರು ತಾಲೂಕಿನ ಅಭಿವೃದ್ಧಿಯಲ್ಲಿ ಪ್ರಮುಖವಾದ ಮಹಿಳೆಯರಿಗೆಂದು ನೂತನ ಪಾಲಿಟೆಕ್ನಿಕ್ ಕಾಲೇಜು ಕಟ್ಟಡವನ್ನು ಸುಮಾರು ರು. 7 ಕೋಟಿ ಗೂ ಹೆಚ್ಚು ವೆಚ್ಚದಲ್ಲಿ, ಹಾಗೆಯೇ ಡಿಗ್ರಿ ಕಾಲೆಜನ್ನು ರು. 3ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಿ, ಶಿರಾಳಕೊಪ್ಪ ಭಾಗದ ಯುವಜನಾಂಗಕ್ಕೆ ಅನಕೂಲವಾಗಲಿ ಎಂದು 2012ರ ಅಕ್ಟೋಬರ್ನಲ್ಲಿ ಉದ್ಘಾಟಿಸಿದ್ದರು.
ಆದರೆ ಅಂದು ಉದ್ಘಾಟನೆಯಾದ ಮಹಿಳಾ ಪಾಲಿಟೆಕ್ನಿಕ್ ಕಟ್ಟಡದ ಶೌಚಾಲಯದ ಬೋಲ್ಟ್ಗಳೆಲ್ಲಾ ಮುರಿದು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋಗವುದೂ ದುಸ್ತರವಾಗಿದ್ದು, ಬಾಗಿಲಲ್ಲಿ ಇನ್ನೊಬ್ಬ ವಿದ್ಯಾರ್ಥಿನಿಯರು ನಿಂತು ಕಾಯಬೇಕಾದ ಪರಿಸ್ಥಿತಿ ಬಂದೊಂದಗಿದೆ.
ಸೋರುವ ಗೋಡೆಗಳು: ಮಳೆ ಬಂತೆಂದರೆ ಕಾಲೇಜಿನ ಗೋಡೆಗಳ ಮೇಲೆ ಸೋರುತ್ತದೆ. ಹಾಗೆಯೇ ಭವ್ಯವಾದ ಕಟ್ಟಡ ಪ್ರವೇಶಿಸಿದರೆ ಒಳಗಡೆ ಛತ್ರಿ ಹಿಡಿದು ಹೋಗಬೇಕಾಗಿದೆ. ನೀರು ಹರಿದು ಕೆಲವು ವಿದ್ಯಾರ್ಥಿನಿಯರು ಜಾರಿಬಿದ್ದದ್ದೂ ಇದೆ.
ಹಾಗೆಯೇ ಪಕ್ಕದ ಡಿಗ್ರಿ ಕಾಲೇಜಿನಲ್ಲಿ ಹತ್ತಾರು ವರ್ಷ ಬಾಳಿಕೆ ಬರಬೇಕಾದ ಬಾಗಿಲು, ಕಿಟಕಿಗಳು ಮುರಿದು ಬಿದ್ದಿವೆ. ಕಿಟಕಿಗಳಿಗೆ ಬೋಲ್ಟ್ ಹಾಕಲು ಬಾರದ ಕಾರಣ ಗಾಳಿಗೆ ಬಡಿದು ಗ್ಲಾಸ್ ಒಡೆದು ಯಾವುದೋ ಹಳೇ ಕಾಲೇಜು ಕಂಡಂತೆ ಭಾಸವಾಗುತ್ತಿದೆ. ಗೋಡೆಗಳು ಸೋರುತ್ತಿವೆ.
ಕಾಲೇಜು ಉದ್ಘಾಟನೆ ಆದಾಗ ವಿದ್ಯಾರ್ಥಿಗಳು ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜನ್ನು ಮೀರಿಸುವಂತೆ ಅಸಕ್ತಿಯಿಂದ ಯಡಿಯೂರಪ್ಪನವರು ಕಟ್ಟಿಸಿದ ಈ ಕಟ್ಟಡಗನ್ನು ನೋಡಿ ಸಂತಸಪಟ್ಟಿದ್ದರು. ಆದರೆ ಇಂದು ವಿದ್ಯಾರ್ಥಿಗಳು ಮುರಿದ ಬಾಗಿಲು, ಕಿಟಕಿಗಳನ್ನು ಇಷ್ಟು ಬೇಗ ನೋಡುತ್ತೇವೆ ಎಂದು ಎಂದೂ ನಿರೀಕ್ಷಿಸಿರಲಿಲ್ಲ ಎಂದು ಹೆಸರು ಹೇಳದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಕಳಪೆ ಕಾರ್ಯ ಮಾಡಿಸಿರುವ ಹೌಸಿಂಗ್ ಬೋರ್ಡ್ ಕಾರ್ಯದ ಬಗ್ಗೆ ವಿದ್ಯಾರ್ಥಿಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರಿಗೆ ರಜಾ ಮುಗಿದ ನಂತರ  ದೂರುನೀಡಿ, ಇಲಾಖೆ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸುವದಾಗಿ ತಿಳಿಸಿದ್ದಾರೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.