ಸೇಫರ್ ಜೋನ್ ಸ್ಥಾಪನೆಗೆ ಅನಗತ್ಯ ಗೊಂದಲ ಬೇಡ
ಹೊಸನಗರ: ಸುಪ್ರೀಂಕೋರ್ಟ್ ಆದೇಶದನನ್ವಯ ತಾಲೂಕಿನಲ್ಲಿ ಸೇಫರ್ ಜೋನ್ ಸ್ಥಾಪಿಸಲು ಅವಕಾಶವಿದ್ದು, ಸೂಕ್ತ ಸ್ಥಳಕ್ಕಾಗಿ ಗೊಂದಲ ಉಂಟಾಗಿದ್ದು ಗೊಂದಲ ನಿವಾರಿಸುವಂತೆ ಕ್ರಷರ್ ಮಾಲೀಕರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಷರ್ ಮಾಲೀಕರು, ಮಸಗಲ್ಲಿ ಪ್ರದೇಶದ ಸ.ನಂ 16ರಲ್ಲಿ ಸೇಫರ್ ಜೋನ್ ಸ್ಥಾಪನೆಗೆ ಸ್ಥಳ ಸಮೀಕ್ಷೆ ನಡೆಸಿ ಮಂಜೂರು ಮಾಡಲಾಗಿದೆ. ಒಟ್ಟು 8 ಕ್ರಷರ್ ಘಟಕಗಳಿಗೆ ಪೂರಕವಾಗಿ ಸ್ಥಳವನ್ನು ಗುರುತಿಸಲಾಗಿದೆ. ಆದರೆ ಅನಗತ್ಯ ಗೊಂದಲದಿಂದಾಗಿ ಸೇಫರ್ ಜೋನ್ ನಿರ್ಮಾಣಕ್ಕೆ ತಡೆಯುಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೂನ್ 30 ಕೊನೆಯ ದಿನ: ಜಿಲ್ಲಾಡಳಿತ ಮಂಜೂರು ಮಾಡಿದ ಮಸಗಲ್ಲಿ ಪ್ರದೇಶದಲ್ಲಿ ಸೇಫರ್ ಜೋನ್ ಗುರುತಿಸಿ ಕ್ರಷರ್ ಸ್ಥಾಪಿಸಲು 6 ತಿಂಗಳ ಕಾಲಾವಕಾಶವಿತ್ತು. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳ ಅನಗತ್ಯ ಗೊಂದಲದಿಂದಾಗಿ ಅಡ್ಡಿಯುಂಟಾಗಿದೆ. ಇದೇ ತಿಂಗಳ 30 ಕೊನೆಯದಿನವಾಗಿದ್ದು ನಂತರ ಕ್ರಷರ್ ಸ್ಥಗಿತಗೊಳ್ಳುವುದು ಅನಿವಾರ್ಯ ಹಾಗಾಗಿ ಕೂಡಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈಗಾಗಲೆ ಸುಪ್ರೀಂಕೋರ್ಟ್ ಆದೇಶದನ್ವಯ ಕ್ರಷರ್ ಜೋನ್ಗೆ ಜಾಗ ಗುರುತಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಒಂದು ಸಮಿತಿ ಇದ್ದು ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಭೂವಿಜ್ಞಾನ ಇಲಾಖೆ ಅಧಿಕಾರಿ ಕಾರ್ಯದರ್ಶಿಯಾಗಿರುತ್ತಾರೆ. ಕ್ರಷರ್ ಜೋನ್ ಸ್ಥಾಪನೆಗೆ ಸಿ. ಫಾರಂ ನೀಡಿದ್ದಾರೆ. ಹೀಗಿದ್ದರು ಕೆಲವರು ಅನಗತ್ಯ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕ್ರಷರ್ ನಂಬಿಕೊಂಡು ನೂರಾರು ಕೂಲಿಕಾರ್ಮಿಕರು ಬದುಕುತ್ತಿದ್ದಾರೆ. ಸೇಫರ್ ಜೋನ್ ವಿಳಂಬದಿಂದಾಗಿ ಕೂಲಿಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಖುದ್ದು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಲಬೇಕು. ತುರ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಚ್.ಬಿ. ಕಲ್ಯಾಣಪ್ಪಗೌಡ, ಸಾಗರ ಪ್ರಶಾಂತ್, ದಿವಾಕರಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

