ಆದಿತ್ಯ ಎನರ್ಜಿ ಪ್ರಾರಂಭೋತ್ಸವ
ಶಿರಾಳಕೊಪ್ಪ: ರಾಜಕೀಯ ಮತ್ತು ಸಾರ್ವಜನಿಕ ಕೆಲಸಕಾರ್ಯ ಮಾಡುವ ವ್ಯಕ್ತಿ ಅಥವಾ ಕುಟುಂಬ ಆರ್ಥಿಕವಾಗಿ ಸದೃಢವಾಗಿದ್ದಲ್ಲಿ ಹೆಚ್ಚಿನ ಕೆಲಸಕಾರ್ಯ ಮಾಡಲು ಸಾಧ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿರಾಳಕೊಪ್ಪ ಪಟ್ಟಣದ ಆನವಟ್ಟಿ ರಸ್ತೆಯಲ್ಲಿ ಭಾನುವಾರ ಆದಿತ್ಯ ಎನರ್ಜಿ ಪ್ರಾರಂಭೋತ್ಸವದಲ್ಲಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಉದ್ಯಮವಿರಲಿ, ಅದು ಸೇವೆ ಮಾಡುವ ಗುರಿ ಹೊಂದಿರಬೇಕು ಎಂದರು.
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ ಹಲವಾರು ಅಭಿವೃದ್ಧಿ ಕೈಗೊಳ್ಳಲಾಯಿತು. ಅಭಿವೃದ್ಧಿ ಜೊತೆಗೆ ವ್ಯವಹಾರ ಉದ್ಯಮ ಬೆಳೆದು ಆರ್ಥಿಕ ಅಭಿವೃದ್ಧಿಯೂ ಆಯಿತು ಎಂದರು.
ಉತ್ತಮ ಆಡಳಿತ: ಸಾನ್ನಿದ್ಯ ವಹಿಸಿದ್ದ ಬೆಳಗಾಂ ಜಿಲ್ಲೆಯ ಸವದತ್ತಿ ತಾಲೂಕಿನ ಹುಲಿ ಮಠದ ಉಮೇಶ್ವರ ದೇವರು ಮಾತನಾಡಿ, ರಾಜ್ಯದಲ್ಲಿ ಯೋಗಿಗಳು ಹುಟ್ಟಿದ್ದಾರೆ ಎಂದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ, ಹಾಗೆಯೇ ಕರ್ನಾಟಕದಲ್ಲಿ ಉತ್ತಮ ಆಡಳಿತ ಮಾಡಿದ ಮುಖ್ಯಮಂತ್ರಿಗಳು ಸಹ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ ಎಂದರು.
ಶಿರಾಳಕೊಪ್ಪ ವಿರಕ್ತ ಮಠದ ಸಿದ್ದೇಶ್ವರ ದೇವರು ಆಶೀರ್ವದಿಸಿದರು. ವೇದಿಕೆ ಮೇಲೆ ತೊಗರ್ಸಿ ಮಹಂತ ದೇಶೀಕೇಂದ್ರ ಶ್ರೀ, ಹಿರೇಮಾಗಡಿ ಶ್ರೀ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ, ಮಹಲಿಂಗಪ್ಪ, ಲೋಕೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

