ಶಿವಮೊಗ್ಗ

ಮಹಿಳಾ ಆರ್ಥಿಕ ಸಬಲೀಕರಣ ಅಗತ್ಯ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ ಮಾ.4
ಮಹಿಳಾ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಯ ಉದ್ದೇಶದಿಂದ ಕೆನರಾ ಬ್ಯಾಂಕ್ ಹಮ್ಮಿಕೊಂಡ ಮೂರು ದಿನಗಳ ಕ್ಯಾನ್ ಉತ್ಸವ ಶುಕ್ರವಾರ ಕುವೆಂಪು ರಸ್ತೆಯ ಬ್ಯಾಂಕಿನ ವೃತ್ತ ಕಚೇರಿ ಆವರಣದಲ್ಲಿ ಆರಂಭವಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸಂಥಿಲ್ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ವೃತ್ತ ಕಚೇರಿಯ ಉಪ ಮಹಾಪ್ರಬಂಧಕ ಎಂ.ಎಂ. ಚಿನಿವಾರ್, ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಸತೀಶ್ಚಂದ್ರ ಶೆಟ್ಟಿ, ಹಿರಿಯ ಅಧಿಕಾರಿ ಸುಬ್ಬರಾವ್ ಮತ್ತಿತರರು ಉಪಸ್ಥಿತರಿದ್ದರು.
ಪ್ರದರ್ಶನದಲ್ಲಿನ 12 ಸ್ಟಾಲ್‌ಗಳಲ್ಲಿ ಕೆನರಾ ಬ್ಯಾಂಕಿನಿಂದ ಉದ್ಯಮ ಶೀಲತಾ ತರಬೇತಿ ಪಡೆದ ಮಹಿಳೆಯರು ತಯಾರಿಸಿದ ವಿವಿಧ ವಸ್ತುಗಳಿವೆ. ಪ್ರಮುಖವಾಗಿ ಬಗೆಬಗೆಯ ಬ್ಯಾಗ್‌ಗಳು, ಪರ್ಸ್, ಮೊಬೈಲ್ ಪೌಚ್, ಅಲಂಕಾರಿಕ ವಸ್ತು, ಪ್ಲಾಸ್ಟಿಕ್ ಹೂಗಳು, ಹೊದಿಕೆಗಳು, ಆಟಿಕೆಗಳು ಇತ್ಯಾದಿಗಳಿವೆ. ಇದರೊಂದಿಗೆ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಚಟ್ನಿಪುಡಿ, ರೊಟ್ಟಿಗಳು ಸಹ ಖರೀದಿಗೆ ಲಭ್ಯವಿದೆ.
ನಮ್ಮ ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಆದರ್ಶದ ನೆಲಗಟ್ಟಿನಲ್ಲಿ ಹೆಣ್ಣುಮಕ್ಕಳ ಆರ್ಥಿಕ ಸ್ವಾವಲಂಬನೆಗೆ ಕಳೆದ ನೂರು ವರ್ಷಗಳಿಗೂ ಮಿಕ್ಕಿ ಸೇವೆ ಸಲ್ಲಿಸುತ್ತಾ ಬಂದಿದೆ ಎಂದು ಬ್ಯಾಂಕಿನ ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈಗಾಗಲೇ ಸುಮಾರು 40ಕ್ಕೂ ಹೆಚ್ಚು ಮಹಿಳೆಯರು ಕಳೆದ ಮೂರು ದಿನಗಳಲ್ಲಿ ಬ್ಯಾಂಕಿನಿಂದ ಉಚಿತವಾಗಿ ಸ್ವ- ಉದ್ಯೋಗದ ಬಗ್ಗೆ ತರಬೇತಿ ಪಡೆದಿದ್ದಾರೆ. ತರಬೇತಿ ಪಡೆದು ಅವರೆಲ್ಲಾ ಸೇರಿ ತಯಾರಿಸಿದ ವಸ್ತುಗಳ ಮಾರಾಟ ಮಾರಾಟ ಕ್ಯಾನ್ ಉತ್ಸವದಲ್ಲಿ ನಡೆಯುತ್ತಿದೆ. ಇಲ್ಲಿ ಸೇರಿರುವ ಮಹಿಳಾ ಉದ್ಯಮಿಗಳಿಗೆ ಕೆನರಾ ಬ್ಯಾಂಕ್ ಅಗತ್ಯ ಆರ್ಥಿಕ ನೆರವು ಕೂಡಲು ಸದಾ ಸಿದ್ಧವಿದೆ ಎಂದು ಬ್ಯಾಂಕ್ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.