ವ್ಯಕ್ತಿ ತನ್ನ ಶಕ್ತಿ ಅರಿಯಬೇಕು: ಶಿವಮೂರ್ತಿ ಮುರುಘಾ ಶ್ರೀ
ಕ.ಪ್ರ ವಾರ್ತೆ, ಚಿತ್ರದುರ್ಗ, ಮಾ.6 ವ್ಯಕ್ತಿ ಕೇವಲ ವ್ಯಕ್ತಿಯಾಗಿ ಉಳಿಯದೆ ಅವನೊಂದು ಶಕ್ತಿಯಾಗಬೇಕು. ವ್ಯಕ್ತಿಯ ಬದುಕಿನಲ್ಲಿ ಶಕ್ತಿಯ ಅರಿವಿಲ್ಲದೆ ಕೇವಲ ವ್ಯಕ್ತಿಯಾಗಿ ಉಳಿಯುತ್ತಾನೆ ಈ ನಿಟ್ಟಿನಲ್ಲಿ ಆತ ತನ್ನ ಶಕ್ತಿ ಅರಿತುಕೊಳ್ಳಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶ್ರೀ ಹೇಳಿದರು.
ಬಸವಕೇಂದ್ರ, ಮುರುಘಾಮಠ ಹಾಗೂ ಎಸ್.ಜೆ.ಎಂ. ಕಲಾ ಮಹಿಳಾ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಮಕಾಲೀನ ಸಂದರ್ಭ ಹಾಗೂ ಸ್ತ್ರೀಯರ ಸಂವೇದನೆಗಳು ಚಿಂತನ ವಿಷಯ ಕುರಿತು ಮಾತನಾಡಿದ ಶ್ರೀಗಳು, ಕ್ರಿಯಾಶೀಲತೆ, ಚಲನಶೀಲತೆಯನ್ನು ಕಳೆದುಕೊಂಡವರು ಮಾಂಸದ ಮುದ್ದೆಯಾಗುತ್ತಾರೆ ಎಂದರು.
ಕ್ರಿಯಾಶೀಲತೆ ನಿಜ ಜೀವನ: ಕ್ರಿಯಾಶೀಲತೆಯೇ ನಿಜವಾದ ಜೀವನ. ಮನುಷ್ಯ ಸದಾ ಚೈತನ್ಯದ ಚಿಲುಮೆಯಾಗಬೇಕು. ಇದರಿಂದ ಚಲನಶೀಲ ಬದುಕು ಸಾಧ್ಯವಾಗುತ್ತದೆ. ಮನುಷ್ಯ ಹರಿಯುವ ನೀರಿನ ಹಾಗೆ, ಬೀಸುವ ಗಾಳಿಯ ಹಾಗೆ ಚಲನಶೀಲತೆಯಿಂದಿರಬೇಕು. ಹಾಗೆಯೇ ಇದರ ರಹಸ್ಯವನ್ನು ಅರಿಯುತ್ತಾ ಹೋಗಬೇಕು ಎಂದವರು ಈ ಸಂದರ್ಭದಲ್ಲಿ ಹೇಳಿದರು.
ಇಂದು ಸ್ತ್ರೀಯರಿಗೆ ಅದಮ್ಯ ಶಕ್ತಿ ಇದೆ. ಇದನ್ನು ಬಳಸಿಕೊಂಡು ಸಾಧನೆಗೆ, ಸಾಹಸಕ್ಕೆ ಮುಂದಾಗಬೇಕು. ಸಾಧನೆ ಮಾಡಲು ಶರೀರ ಸಾಧನವಾಗಬೇಕು. ಮಾನವೀಯ ಕಾಳಜಿಗಳೊಂದಿಗೆ ಸಾಧನೆ ಮಾಡಬೇಕು. ಸ್ತ್ರೀಯರಲ್ಲಿ ವೇದನೆಗಳ ಜೊತೆ ಸಂವೇದನಗಳಿವೆ. ಸಂವೇದನೆಗಳ ಜೊತೆ ಬದುಕು ನಡೆಸಬೇಕು. ಮನುಷ್ಯ ಹಲವು ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಳ್ಳುತ್ತಾನೆ. ಕಾರಣ ಅವನಲ್ಲಿರುವ ಅಜ್ಞಾನ ಎಂದು ಹೇಳಿದರು.
ಮಹಾಮನೆಗೆ: ಹೆಣ್ಣು ಅಡುಗೆ ಮನೆಯಿಂದ ಅರಿವಿನ ಮನೆಗೆ, ಮಹಾಮನೆಗೆ ಬರಬೇಕೆಂದು 12ನೇ ಶತಮಾನದ ವಚನಕಾರರಲ್ಲಿ ಪ್ರಮುಖರಾದ ಬಸವಣ್ಣನವರು ಹೇಳಿದರು. ಇದಕ್ಕೆ ಉದಾಹರಣೆ ಸತ್ಯಕ್ಕ. 12ನೇ ಶತಮಾನ ಮಹಿಳಾ ಹಕ್ಕುಗಳನ್ನು ನೀಡಿ ಸ್ವಾಭಿಮಾನ ಪೂರ್ವಕ ಸಮಾಜ ಕಟ್ಟಲು ವ್ಯವಸ್ಥೆ ಮಾಡಿತ್ತು. ಪುರುಷನೂ ಕೂಡ ಮಹಿಳೆಗೆ ಉತ್ತಮ ಭವಿಷ್ಯ ಕಟ್ಟಿಕೊಡುವ ಪ್ರಯತ್ನ ಮಾಡಬೇಕು. ನಮ್ಮಲ್ಲಿ ಮಾನವೀಯತೆಯ ಗೆಲವು ಸಾಧಿಸುವಂತೆ ಬದುಕು ನಡೆಸಬೇಕು ಎಂದರಲ್ಲದೆ, ಪ್ರತಿಯೊಬ್ಬರೂ ಮತದ ಮೌಲ್ಯವನ್ನು ಅಥೈಎಸಿಕೊಂಡು ಮತ ನೀಡಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

