ಶಿವಮೊಗ್ಗ

ತಮ್ಮತನದಿಂದ ಹೊಸತನ್ನು ಸೃಷ್ಟಿಸಿದರೆ ಸೃಜನಶೀಲತೆ: ಡಾ. ವೆಂಕಟೇಶ್

Published On :

ಕ.ಪ್ರ.ವಾರ್ತೆ \ ಸಾಗರ \  ಮಾ.19
ದೈನಂದಿನ ಬದುಕಿನ ವಾಸ್ತವಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸಿರುವ ಕವಿ ಕೆ.ಎಸ್. ನರಸಿಂಹಸ್ವಾಮಿ ತಮ್ಮ ದಾಂಪತ್ಯ ಗೀತೆಗಳಲ್ಲಿ ಹಳತರಲ್ಲಿ ಹೊಸತನ್ನು ಮನಮೋಹಕವಾಗಿ ಬಿಂಬಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಜನಪದ ವಿ.ವಿ. ಸಲಹಾ ಮತ್ತು ವಿತರಣ ಕೇಂದ್ರದ ಉಪನಿರ್ದೇಶಕ ಡಾ. ಎಂ.ಎನ್. ವೆಂಕಟೇಶ್ ಹೇಳಿದರು.
ಇಲ್ಲಿನ ಲಾಲ್ ಬಹದ್ದೂರ್ ಕಾಲೇಜಿನ ಕನ್ನಡ ವಿಭಾಗ ಪ್ರಕಟಿಸಿದ  ಕೆ.ಎಸ್.ನ. ದರ್ಶನ ಪುಸ್ತಕ ಬಿಡುಗಡೆ ಮಾಡಿ, ಸಾಮಾನ್ಯರಿಂದ ಹಿಡಿದು ವಿಜ್ಞಾನಿಯವರೆಗೂ ಇರುವ ಸಮಯ ಒಂದೆ. ಅಷ್ಟರಲ್ಲಿಯೇ ನಮ್ಮತನದಿಂದ ಏನಾದರೂ ಹೊಸತನ್ನು ಸೃಷ್ಟಿಸಿದರೆ ಅದೇ ಸೃಜನಶೀಲತೆ ಎಂದು ಅವರು ಅಭಿಪ್ರಾಯಪಟ್ಟರು.
ಉತ್ತಮ ಹವ್ಯಾಸವಿರಲಿ: ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸಹ ಕಾರ್ಯದರ್ಶಿ ರವೀಂದ್ರ ಸಭಾಹಿತ, ವಿದ್ಯಾರ್ಥಿಗಳು ಕವಿಗಳ ಉತ್ತಮ ಬರಹಗಳನ್ನು, ಕವಿತೆಗಳನ್ನು ಅಧ್ಯಯನ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳುವುದಕ್ಕೆ ಇದು ಸಕಾಲ. ಜೀವನದಲ್ಲಿ ಉದಾತ್ತವಾದದ್ದನ್ನು ಸಾಧಿಸಲು, ನೆಮ್ಮದಿಯ ನೆಲೆ ಪಡೆಯಲು ಸಾಹಿತ್ಯ, ಸಂಗೀತಗಳ ಸಾಹಚರ್ಯ ಅಪೇಕ್ಷಣೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಸಿ. ಶಶಿಧರ್, ಕೌಟುಂಬಿಕ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಕಾಲಿಕ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಗತ್ಯವಾಗಿ ಕೆ.ಎಸ್.ನ. ಕವಿತೆಗಳನ್ನು ಓದಿ ಪ್ರಭಾವಿತರಾಗಬೇಕು ಎಂದು ಹೇಳಿದರು. ಮಂಜುನಾಥ ಸ್ವಾಗತಿಸಿದರು. ತಿರುಮಲ ಮಾವಿನಕುಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.