ಶಿವಮೊಗ್ಗ

ಶಿವಾನುಭವ ಗೋಷ್ಠಿ 27ರಂದು

Published On :

ಶಿವಮೊಗ್ಗ; ಶ್ರೀ ಬೆಕ್ಕಿನ ಕಲ್ಮಠ ಮಾ.27ರಂದು ಸಂಜೆ 6.30ಕ್ಕೆ 398ನೇ ಮಾಸಿಕ ಶಿವಾನುಭವ ಗೋಷ್ಠಿಯನ್ನು ಬೆಕ್ಕಿನ ಕಲ್ಮಠದ ಗುರುಬಸವ ಭವನದಲ್ಲಿ ಏರ್ಪಡಿಸಿದೆ. ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯರ ಸಾನ್ನಿಧ್ಯದಲ್ಲಿ ಗೋಷ್ಠಿ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ನಗರಸಭಾ ಸದಸ್ಯ ಎಚ್.ಸಿ. ಯೋಗೀಶ್, ಖಾಜಾ ಗರೀಬ್ ನವಾಜ್ ಪಾಲ್ಗೊಳ್ಳಲಿದ್ದಾರೆ. ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಶಿವಯೋಗೀಶ್ವರ್ ಉಪನ್ಯಾಸ ಮಾಡಲಿದ್ದಾರೆ. ಶಿಕ್ಷಕ ನಾಗಭೂಷಣ ಹೆಗಡೆ ಸಂಗೀತ ಕಚೇರಿ ನಡೆಸಿಕೊಡುವರು ಎಂದು ಶ್ರೀ ಬೆಕ್ಕಿನಕಲ್ಮಠ ತಿಳಿಸಿದೆ.

ನಾಳೆ ಮ್ಯಾಕ್,ಬೆತ್ ನಾಟಕ ಪ್ರದರ್ಶನ
ಶಿವಮೊಗ್ಗ: 
ಅಭಿನಯ ಶಿವಮೊಗ್ಗ ಮಾ.26 ರಂದು ಕುವೆಂಪು ರಂಗಮಂದಿರದಲ್ಲಿ ಮಧ್ಯಾಹ್ನ 2.30( ವಿದ್ಯಾರ್ಥಿನಿಯರಿಗೆ) ಹಾಗೂ ಸಂಜೆ 4.30ಕ್ಕೆ (ವಿದ್ಯಾರ್ಥಿ ಹಾಗೂ ನಾಗರಿಕರಿಗೆ) ಶೇಕ್ಸ್,ಪಿಯರ್ ರಚನೆಯ ಮ್ಯಾಕ್,ಬೆತ್ ನಾಟಕ ಪ್ರದರ್ಶನ ಏರ್ಪಡಿಸಿದೆ. ಪ್ರೊ.ಎಸ್.ಸಿ. ಗೌರಿಶಂಕರ್ ನಿರ್ದೇಶನ ಮಾಡಲಿದ್ದಾರೆ. 20 ಪ್ರವೇಶ ಶುಲ್ಕ ಎಂದು ಗೌರಿಶಂಕರ್ ತಿಳಿಸಿದ್ದಾರೆ.

ಇಂದು ಅತಿಥಿ
ಶಿವಮೊಗ್ಗ:
ಕರ್ನಾಟಕ ಸಂಘದಲ್ಲಿ ಮಾ.25ರಂದು ಸಂಜೆ 5.30ಕ್ಕೆ ತಿಂಗಳ ಅತಿಥಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಜಾಗತೀಕರಣ ಕುರಿತು ಉಪನ್ಯಾಸ ಮಾಡಲಿದ್ದಾರೆ. ಅಧ್ಯಕ್ಷತೆ ಸಂಘದ ಅಧ್ಯಕ್ಷ ತಿಮ್ಮಯ್ಯ ವಹಿಸಲಿದ್ದಾರೆ ಎಂದು ಸಂಘದ ಕಾರ್ಯಕಾರಿ ಸಮಿತಿ ತಿಳಿಸಿದೆ.

ಇಂದು ಉಪನ್ಯಾಸ
ಶಿವಮೊಗ್ಗ:
ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ (ಸ್ನಾತಕೋತ್ತರ ವಿಭಾಗ) ಸಮಾಜಕಾರ್ಯ ಶಿಬಿರವನ್ನು ತಾಲೂಕಿನ ಹಾಲಲಕ್ಕವಳ್ಳಿ ಗ್ರಾಮದಲ್ಲಿ ಏರ್ಪಡಿಸಿದೆ. ಮಾ.25ರಂದು ಸಂಜೆ 4.30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಶಿಕ್ಷಣ ಮತ್ತು ಗ್ರಾಪಂ ಸೌಲಭ್ಯ ಕುರಿತಂತೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ.
ಜಿಲ್ಲಾ ಸಮನ್ವಯಾಧಿಕಾರಿ ಗಣಪತಿ ಗ್ರಾಮಾಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ, ಸದಾಶಿವಪ್ಪ ಗ್ರಾಪಂ ಸೌಲಭ್ಯಗಳ ಬಗ್ಗೆ ಉಪನ್ಯಾಸ ಮಾಡಲಿದ್ದಾರೆ.
ವನಜಾಕ್ಷಮ್ಮ, ಎಸ್,ಕೆಡಿಆರ್,ಡಿಪಿ ಸೇವಾ ಪ್ರತಿನಿಧಿ ಚಿಕ್ಕಣ,, ವೀರಭದ್ರಪ್ಪ ಉಪಸ್ಥಿತರಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.