ಈಜಲು ಹೋದ ಯುವಕರಿಬ್ಬರ ಸಾವು
ಶಿವಮೊಗ್ಗ: ಈಜಲು ಹೋದ ಯುವಕರಿಬ್ಬರು ಪ್ರತ್ಯೇಕ ಸ್ಥಳಗಳಲ್ಲಿ ಸಾವನಪ್ಪಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ಲಾರಿ ಚಾಲಕ ಅವಿನಾಶ್ (22) ಹಾಗೂ ಸಹ್ಯಾದ್ರಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಪ್ರದೀಪ್ (21) ಮೃತಪಟ್ಟಿದ್ದಾರೆ. ಹೋಳಿ ಹಬ್ಬದ ಪ್ರಯುಕ್ತ ಯವಕರು ಹೋಳಿ ಆಡಿದ್ದಾರೆ. ಪೇಸ್ ಕಾಲೇಜಿನ ಎದುರಿನಲ್ಲಿರುವ ಕೆರೆಯಲ್ಲಿ ಈಜಲು ಹೋಗಿದ್ದ ಅವಿನಾಶ್ ಹಾಗೂ ಪುರಲೆ ಡ್ಯಾಂನಲ್ಲಿ ಪ್ರದೀಪ್ ಸಾವನಪ್ಪಿದ್ದಾರೆ. ಶವಗಳ ಹುಡುಕಾಟದಲ್ಲಿ ಪೊಲೀಸರ ನಿರತರಾಗಿದ್ದಾರೆ.
ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು: ಕೊಣಾಜೆ ನಡುಪದವು ಪಿ.ಎ.ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿ ಕಾಲೇಜ್ ಹಾಸ್ಟೆಲ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಘಟನೆ ಗುರುವಾರ ನಡೆದಿದೆ. ಶಿವಮೊಗ್ಗದ ಮೂಲದ, ವಿವಾಹಿತೆ ಸ್ವಾತಿ (22) ಮೃತರು.
ಈಕೆ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಹಾಸ್ಟೆಲ್ನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಬರೆದಿಟ್ಟ ಡೆತ್ನೋಟ್ನಲ್ಲಿ, ತನ್ನ ಸಾವಿಗೆ ಯಾರೂ ಕಾರಣರಲ್ಲ. ಗಂಡ ಒಳ್ಳೆಯವರು, ಅತ್ತೆ ಮಾವ ಕೂಡಾ ಒಳ್ಳೆಯವರು, ಯಾರೂ ಕಿರುಕುಳ ಕೊಟ್ಟಿಲ್ಲ. ಆದರೆ ಇತ್ತೀಚೆಗೆ ಕೋರ್ಸ್ನಲ್ಲಿ ಅತಿ ಕಡಿಮೆ ಅಂಕ ಬರುತ್ತಿದ್ದು,
ತೇರ್ಗಡೆಯಾಗುವುದು ಕಷ್ಟ ಎಂದು ಕಂಡುಬಂದಿದ್ದು ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬರೆದಿದ್ದಾಗಿ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

