ಶಿವಮೊಗ್ಗ

4ರಂದು ಈಸೂರಿನ ಶೂರರು ರಂಗರೂಪಕ

Published On :

ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ  ಮಾ.30
ದೇಶದ ಸ್ವಾತಂತ್ರ ಹೋರಾಟದಲ್ಲಿ ತಾಲೂಕಿನ ಈಸೂರು ಗ್ರಾಮಸ್ಥರ ಪಾತ್ರ ಮಹತ್ವದ್ದಾಗಿದ್ದು, ಗ್ರಾಮದ 5 ಹುತಾತ್ಮರು ಗಲ್ಲಿಗೇರಿ 70 ವರ್ಷ ಗತಿಸಿದ ಐತಿಹಾಸಿಕ ಹೋರಾಟದ ಸವಿನೆನಪಿಗಾಗಿ ಗ್ರಾಮದಲ್ಲಿ ಏ.4 ರ ರಾತ್ರಿ ಈಸೂರಿನ ಶೂರರು ಎಂಬ ದ್ವನಿ ಬೆಳಕಿನ ದೃಶ್ಯ ಕಾವ್ಯ ರಂಗರೂಪಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ನಿರ್ದೇಶಕ ಎಸ್.ಜೆ. ಶಂಕರಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ದೇಶವೇ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ಧ ಸೆಟೆದು ನಿಂತಿದ್ದು, ಸ್ವಾತಂತ್ರ ನಮ್ಮ ಜನ್ಮ ಸಿದ್ಧ ಹಕ್ಕು, ಏಸೂರು ಕೊಟ್ಟರೂ ಈಸೂರು ಕೊಡೆವು ಎಂದು ಸ್ವಯಂ ಘೋಷಿಸಿಕೊಂಡು ನಡೆದ ದೊಡ್ಡ ಚಳುವಳಿಯನ್ನು ಹತ್ತಿಕ್ಕಲು ಬ್ರಿಟೀಷರು ನಡೆಸಿದ ಗುಂಡಿನೇಟಿಗೆ ಅಮಲ್ದಾರ್ ಹಾಗೂ ಸಬ್ಇನ್ಸ್ಪೆಕ್ಟರ್ ಮೃತಪಟ್ಟಿದ್ದು ಘಟನೆಯಲ್ಲಿ ಗ್ರಾಮಸ್ಥರ ಪಾತ್ರವಿದೆ ಎಂದು 5 ಮಂದಿಯನ್ನು ಗಲ್ಲಿಗೇರಿಸಲಾಯಿತು ಎಂದ ಅವರು, ಈ ದುರಂತದ ನೈಜ ಘಟನೆಯನ್ನು ಪರಿಣಾಮಕಾರಿಯಾಗಿ ನೂರಕ್ಕೂ ಅಧಿಕ ಸ್ಥಳೀಯ ಹಾಗೂ ಹೊರಭಾಗದ ಕಲಾವಿದರ ಮೂಲಕ ಇಂದಿನ ಪೀಳಿಗೆಗೆ ಇದೀಗ ಮತ್ತೊಮ್ಮೆ ನೆನಪಿಸಲಾಗುವುದು ಎಂದರು.
ಗ್ರಾಪಂ ಈಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ, ನವೋದಯ ಕಲಾಸಂಘ, ಎಪಿಎಂ ಲಲಿತಾ ಕಲಾ ಸಂಘ, ಶಾಂತಲಾ ವೇದಿಕೆ, ಅಪೇಕ್ಷ ನೃತ್ಯ ಕಲಾವಿದರ ಸಂಯುಕ್ತಾಶ್ರಯದಲ್ಲಿ ಏ.4 ರ ರಾತ್ರಿ 8 ಕ್ಕೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆರಂಭವಾಗಲಿರುವ ನಾಟಕದಲ್ಲಿ ವಕೀಲರು, ವೈದ್ಯರು, ಎಂಜಿನಿಯರ್ಸ್ ಮತ್ತಿತರರು ಪಾತ್ರದಾರಿಗಳಾಗಿ ಭಾಗವಹಿಸಲಿದ್ದು, ತಾಲೂಕಿನ ಎಲ್ಲಾ ಜನತೆ ವೀಕ್ಷಿಸುವಂತೆ ಅವರು ಮನವಿ ಮಾಡಿದರು.
ನಿರ್ದೇಶಕ ಲಕ್ಷ್ಮಿನಾರಾಯಣಪ್ಪ, ಬಾರಂದೂರು ಪ್ರಕಾಶ್, ಈಸೂರು ಬಸವರಾಜ್, ಹುಚ್ರಾಯಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.