ಇಂದು, ನಾಳೆ ಸಂಗೀತ ಕಾರ್ಯಕ್ರಮ
ಶಿವಮೊಗ್ಗ: ನಾದಸುಧಾ ಏಪ್ರಿಲ್ 1 ಮತ್ತು 2ರಂದು ಸಂಜೆ 6.30ಕ್ಕೆ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಏ.1ರಂದು ಹೊಸಹಳ್ಳಿಯ ಗಿರಿಜಾ ಮತ್ತು ತಂಡದಿಂದ ಹಾಡುಗಾರಿಕೆ, 2ರಂದು ಡಾ. ನಾಗವಲ್ಲೀ ನಾಗರಾಜ್ ಮತ್ತು ರಂಜನಿ, ವಾಸುಕಿ ತಂಡದಿಂದ ಹಾಡುಗಾರಿಕೆ ಏರ್ಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ವಿವರಗಳಿಗಾಗಿ- 223355.
ನೇತ್ರ ತಪಾಸಣೆ ಶಿಬಿರ
ಶಿವಮೊಗ್ಗ: ಸೃಷ್ಟಿ ಮಹಿಳಾ ಸಮಾಜ, ವಾಸನ್ ಐ ಕೇರ್ ಆಶ್ರಯದಲ್ಲಿ ಏಪ್ರಿಲ್ 1 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಗಾಂಧಿ ಬಜಾರ್ನ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ಕಣ್ಣು ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ವಾಸನ್ ಐ ಕೇರ್ ಆಸ್ಪತ್ರೆಯ ಡಾ.ಪ್ರಸನ್ನ ಕುಮಾರ್ ತಪಾಸಣೆ ನಡೆಸುವರು ಎಂದು ಮಹಿಳಾ ಸಮಾಜದ ಅಧ್ಯಕ್ಷೆ ರತ್ನ ಮಂಜುನಾಥಥ್ತಿಳಿಸಿದ್ದಾರೆ.
ಉಚಿತ ಪರೀಕ್ಷಾ ಕಾರ್ಯಾಗಾರ
ಶಿವಮೊಗ್ಗ: ಜ್ಞಾನಗಂಗ ಐಎಎಸ್ ಅಕಾಡೆಮಿ ಏಪ್ರಿಲ್ 2ರಂದು ಮಧ್ಯಾಹ್ನ 2.30ಕ್ಕೆ ಮತ್ತು 3ರಂದು ಸಂಜೆ 5.30ಕ್ಕೆ ಉಚಿತ ಪರೀಕ್ಷಾ ಕಾರ್ಯಾಗಾರ ಹಮ್ಮಿಕೊಂಡಿದೆ. ಡಾ.ಪಿ. ಸುರೇಶ್ ಬಾಬು ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು ಎಂದು ಅಕಾಡೆಮಿಯ ಸಂಚಾಲಕರು ತಿಳಿಸಿದ್ದಾರೆ. ವಿವರಗಳಿಗಾಗಿ- 8123545636.
ವಿದ್ಯುತ್ ವ್ಯತ್ಯಯಕ್ಕೆ ಖಂಡನೆ
ಶಿವಮೊಗ್ಗ: ನಿರಂತರ 7-8 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸುತ್ತಿರುವ ಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪ ಸಂಖ್ಯಾತರ ವಿಭಾಗ ಖಂಡಿಸಿದೆ. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಸಮಿತಿ ಆರೋಪಿಸಿದೆ.
ಬೇಸಿಗೆ ಶಿಬಿರ
ಶಿವಮೊಗ್ಗ: ರಂಗಾಯಣ ಏಪ್ರಿಲ್ 14ರಿಂದ 30ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 5ಗಂಟೆವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಏರ್ಪಡಿಸಿದೆ. ಚಿತ್ರಕಲೆ, ರಂಗ ವ್ಯಾಯಾಮ, ರಂಗಸಂಗೀತ, ಮುಖವಾಡ ತಯಾರಿಕೆ, ಯೋಗ, ದೇಸಿ ಹಾಡು-ಕುಣಿತ, ಆಟ, ನಟನೆ, ನಗು, ಸಾಹಸ, ಅರಿವು, ಸ್ನೇಹ, ಸಮಾನತೆ, ಬದುಕು-ಕಲಿ, ಪ್ರೇರಣೆಗಳು ಬಗ್ಗೆ ಮಾಹಿತಿ ನೀಡಲಾಗುವುದು. 12 ರಿಂದ 14 ವರ್ಷದ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಹುಟ್ಟಿದ ದಿನಾಂಕ, ಭಾವಚಿತ್ರ ತರುವುದು ಕಡ್ಡಾಯವಾಗಿದೆ. ಪ್ರವೇಶ ಶುಲ್ಕ 500, ವಿವರಗಳಿಗಾಗಿ 9844367071.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

