ಶಿವಮೊಗ್ಗ

ಸೊರಬದಲ್ಲಿ ಕಾಂಗ್ರೆಸ್ ಗೆಲ್ಲಿಸಸಿ: ಕುಮಾರ್‌ಬಂಗಾರಪ್ಪ

Published On :

ಸೊರಬ: ರಾಜ್ಯದಲ್ಲಿ ಬೀಸುತ್ತಿರುವ ಪ್ರಬಲ ಕಾಂಗ್ರೆಸ್ ಅಲೆಯನ್ನು ದಡದಲ್ಲಿ ನಿಲ್ಲಿಸುವ ಸಮರ್ಪಕ ಕೆಲಸವಾಗಬೇಕಿದೆ ಎಂದು ಸೊರಬ ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ಬಂಗಾರಪ್ಪ ತಿಳಿಸಿದರು.
 ಬುಧವಾರ ಪಟ್ಟಣದ ಕಾಂಗ್ರೆಸ್ ತಚೇರಿಯಲ್ಲಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್‌ಗೆ ಆಗಮಿಸಿದ ಹಲವರನ್ನು ಬರಮಾಡಿಕೊಂಡು ಮಾತನಾಡಿ, ಮತದಾರರಲ್ಲಿ ಹೆಚ್ಚಿನ ವಿಶ್ವಾಸ ಭರಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಪ್ರೇರೇಪಿಸಬೇಕು ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
 ಇದೇ ವೇಳೆ ಹಿಂದೆ ಬಿಜೆಪಿಯಲ್ಲಿದ್ದ, ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಪಕ್ಷದ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಹಿಂದೆ ಬಿಜೆಪಿ ಉಳಿದ ಪಕ್ಷಕ್ಕಿಂತಲೂ ಭಿನ್ನ ಎಂದು ಪಕ್ಷದಲ್ಲಿ ಉಳಿದಿದ್ದೆ, ಎಲ್ಲೂ ನಡೆಯದ ಭ್ರಷ್ಟಾಚಾರ, ಆಂತರಿಕ ಕಚ್ಚಾಟ, ಸಾಲುಗಟ್ಟಿ ಜೈಲು ಸೇರುವವರು ಇತ್ಯಾದಿ ಗಮನಿಸಿರುವ ನಾನು ಹೊರಬಂದಿದ್ದೇನೆ ಎಂದರು.
 ಜೆಡಿಎಸ್, ಕೆಜೆಪಿ, ಬಿಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಅನೇಕರು ಪಕ್ಷಕ್ಕೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು. ಶಿವಮೊಗ್ಗದಿಂದ ಎಚ್.ಎಂ. ಚಂದ್ರಶೇಖರ್, ರಮೇಶ್ ಆಗಮಿಸಿ ಮುಖಂಡರೊಂದಿಗೆ ಮಾತನಾಡಿದರು.
ಸೊರಬ ಬ್ಲಾಕ್ ಅಧ್ಯಕ್ಷ ಕೆ. ಮಂಜುನಾಥ್, ಆನವಟ್ಟಿ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಗುತ್ತೇರ, ಜೆ. ಶಿವಾನಂದಪ್ಪ, ಕೆ. ಅಜ್ಜಪ್ಪ, ಕೆ. ಡಾಕಪ್ಪ, ಶಿವಾನಂದಭಟ್, ಚೆನ್ನವೀರಪ್ಪಗೌಡ ಮಲ್ಲಾಪುರ, ಸತೀಶ್ ಹೆಗಡೆ, ರೇವಣಪ್ಪ, ಮಂಚಿ ಹನುಮಂತಪ್ಪ, ಎಂ.ಡಿ. ಉಮೇಶ್, ಲೋಲಾಕ್ಷಮ್ಮ, ಭಾರತಿ ಶೆಣೈ, ಗೀತಾ, ಗಣಪತಿ ಹುಲ್ತಿಕೊಪ್ಪ, ಕೆ. ನಿಂಗಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.