ಶಿವಮೊಗ್ಗ

ಕೆಜೆಪಿ ರೋಡ್ ಶೋ

Published On :

ಶಿರಾಳಕೊಪ್ಪ:  ಬಹಿರಂಗ ಪ್ರಚಾರದ ಕೊನೆಯ ದಿನವಾದ ಶುಕ್ರವಾರ ಶಿರಾಳಕೊಪ್ಪ ಪಟ್ಟಣದಲ್ಲಿ ಕೆಜೆಪಿಯಿಂದ ರೋಡ್ ಶೋ ನಡೆಯಿತು.  ಶಿರಾಳಕೊಪ್ಪ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ ನಡೆಯಿತು.
ಯಡಿಯೂರಪ್ಪ ಮಾತನಾಡಿ, ಕೆಜೆಪಿ ಅಧಿಕಾರಕ್ಕೆ ಬಂದನಂತರ ಶಿಕಾರಿಪುರ ತಾಲೂಕನ್ನು ಜಿಲ್ಲೆ ಆಗಿ ಶಿರಾಳಕೊಪ್ಪ ಪಟ್ಟಣವನ್ನು ತಾಲೂಕು  ಕೇಂದ್ರವಾಗಿ ಘೋಷಿಸುತ್ತೇನೆ. ಈಗಾಗಲೇ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಕ್ಕಾಗಿ ಎಲ್ಲ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.   ಮೆರವಣಿಗೆಯಲ್ಲಿ ಸಂಸದ ರಾಘವೇಂದ್ರ, ಮಹಲಿಂಗಪ್ಪ, ಶೇಖರಪ್ಪ,ಅಗಡಿ ಅಶೋಕ, ನಿವೇದಿತಾ ರಾಜು ವಾಹನದಲ್ಲಿದ್ದರು.

ತಾಳಗುಪ್ಪದಲ್ಲಿ ಮಧು ರೋಡ್ ಶೋ

ಕ.ಪ್ರ.ವಾರ್ತೆ,ಜೋಗ್ ಫಾಲ್ಸ್, ಮೇ 3
ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ತಾಳಗುಪ್ಪದಲ್ಲಿ ರೋಡ್ ಶೋ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಗೆಲುವು ಮತದಾರರ ಗೆಲುವಿನಂತೆ. ತೆನೆ ಹೊತ್ತ ಮಹಿಳೆಯನ್ನು ಮತದಾರರು ಆಶೀರ್ವದಿಸಿದರೆ ಅಧಿಕಾರ ಜನರಿಗೆ ದೊರಕಿದಂತೆ. ಇಂದು ಸೇರಿರುವ ಜನತೆಯನ್ನು ಕಂಡು ತಾವೂ ಸೇರಿದಂತೆ ತಮ್ಮ ಕುಟುಂಬದವರು ಮೂಕವಿಸ್ಮಿತರಾಗಿದ್ದೇವೆ.
ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿ ಇದಕ್ಕೆ ಉತ್ತರ ನೀಡುತ್ತೇನೆ. ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ತಾನು ಮಂತ್ರಿಯಾಗಿ ನಿಮ್ಮ ಆರ್ಶೀವಾದ ಪಡೆಯಲು ಇಲ್ಲಿಗೆ ಮತ್ತೆ ಬರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.  ಸಂದರ್ಭದಲ್ಲಿ ಶಕುಂತಲಾ ಬಂಗಾರಪ್ಪ, ಸುಜಾತ ತಿಲಕ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಅನಿತಾ ಮಧು ಬಂಗಾರಪ್ಪ ರೋಡ್ ಶೋನಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.