ಶಿವಮೊಗ್ಗ

ಭೀಮನೇರಿಯಲ್ಲಿ ಶೇ.97 ಮತದಾನ

Published On :

ಕ.ಪ್ರ.ವಾರ್ತೆ, ಸಾಗರ, ಮೇ.6 ತಾಲೂಕಿನ ಭೀಮನೇರಿಯ ಮತಗಟ್ಟೆ ಸಂಖ್ಯೆ 35ರಲ್ಲಿ ಅತಿಹೆಚ್ಚು ಅಂದರೆ ಶೇ.97 ಮತದಾನವಾಗಿದೆ. ಇಲ್ಲಿ ಒಟ್ಟು 280 ಮತದಾರರಿದ್ದು, ಈ ಪೈಕಿ 272 ಜನರು ಮತ ಚಲಾಯಿಸಿದ್ದಾರೆ. ಸಾಗರ ಪಟ್ಟಣದ ಎ.ಕೆ.ಕಾಲೋನಿ ಮತಗಟ್ಟೆ ಸಂಖ್ಯೆ 71ರಲ್ಲಿ ಅತಿ ಕಡಿಮೆ ಅಂದರೆ ಶೇ.39ರಷ್ಟು ಮತದಾನವಾಗಿದೆ. ಇಲ್ಲಿ 534 ಮತದಾರರ ಪೈಕಿ ಕೇವಲ 211ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.
 ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ತಾಲೂಕಿನ ಹಿನ್ನೀರಿನ ಪ್ರದೇಶವಾದ ಸುಂಕದಮನೆಯಲ್ಲಿ ಮತಗಟ್ಟೆ ತೆರೆದಿತ್ತು. ಇಷ್ಟು ವರ್ಷಗಳ ಕಾಲ ಈ ಗ್ರಾಮಕ್ಕೆ ಚುನಾವಣಾ ಸಿಬ್ಬಂದಿ, ಪರಿಕರಗಳನ್ನು ಕೊಂಡೊಯ್ಯುವುದು ಕಷ್ಟ ಎನ್ನುವ ನೆಲೆಯಲ್ಲಿ ಇಲ್ಲಿ ಮತದಾನ ಕೇಂದ್ರ ಸ್ಥಾಪಿಸಿರಲಿಲ್ಲ. ಈ ಬಾರಿ ಮತದಾನ ಕೇಂದ್ರ ಸ್ಥಾಪಿಸಿ ಚುನಾವಣಾ ಸಿಬ್ಬಂದಿಗೆ ವಿಶೇಷ ಲಾಂಚ್ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಶೇ.80 ಮತದಾನವಾಗಿದೆ. ಒಟ್ಟು 184 ಮತದಾರರ ಪೈಕಿ 149 ಮತದಾರರು ಚಲಾಯಿಸಿದ್ದಾರೆ.  ಕ್ಷೇತ್ರದಲ್ಲಿ ಒಟ್ಟು 1,79,685ಮತದಾರರಿದ್ದು ಈ ಬಾರಿ 1,36,274 ಮಂದಿ ಮತ ಚಲಾಯಿಸಿದ್ದು ಒಟ್ಟು ಶೇ.75.84ರಷ್ಟು ಮತದಾನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.