ವಿದ್ಯಾರ್ಥಿ ವೇತನ
ಶಿವಮೊಗ್ಗ: ಕೆ.ಆರ್. ಗಾಯಿತ್ರಿ ಮೆಮೋರಿಯಲ್ ಅಸೋಸಿಯೇಷನ್ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನಮ ನೀಡಲು ನಿರ್ಧರಿಸಿದೆ. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತೀರ್ಣರಾಗಿ, ಪದವಿಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ಓದಲು ಇಚ್ಛಿಸುವ 15 ಜನ ವಿದ್ಯಾರ್ಥಿನಿಯರು ಸ್ಕಾಲರ್ ಶಿಪ್ ಪಡೆಯಲು ಅರ್ಹರಾಗಿರುತ್ತಾರೆ. ಎಸ್ಎಸ್ಎಲ್ಸಿಯಲ್ಲಿ ಸಂಸ್ಕೃತ ಓದಿದಂತಹ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಓದುವಂತಹ ವಿದ್ಯಾರ್ಥಿನಿಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಮೇ 31ರೊಳಗೆ ತಮ್ಮ ಹೆಸರನ್ನು ನೋಂದಾಯಿಸಬಹುದು ಎಂದು ಅಸೋಸಿಯೇಷನ್ ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಗಳಿಗಾಗಿ- 9844642586.
ಬೇಸಿಗೆ ಶಿಬಿರ
ಶಿವಮೊಗ್ಗ: ನಳಂದ ಚೆಸ್ ಆಕಾಡೆಮಿ ಮೇ.8ರಿಂದ 13 ಮತ್ತು 20 ರಿಂದ 26ರವರೆಗೆ ವಿನೋಬನಗರ ಪೊಲೀಸ್ ಚೌಕಿ ಮತ್ತು ಗೋಪಾಲಗೌಡ ಬಡಾವಣೆಗಳಲ್ಲಿ ಚೆಸ್ ತರಬೇತಿ ಶಿಬಿರ ಏರ್ಪಡಿಸಿದೆ. ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದರಿಂದ ಬುದ್ಧಿಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಕಾಡೆಮಿಯ ಕಾರ್ಯದರ್ಶಿ ಶ್ರೀಕೃಷ್ಣ ಉಡುಪ ತಿಳಿಸಿದ್ದಾರೆ. ವಿವರಗಳಿಗಾಗಿ- 9945809662.
ಟ್ರೈಕೋಡರ್ಮಾದಿಂದ ಶಿಲೀಂಧ್ರ ತಡೆ
ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 7
ಸಸಿ ನೆಡುವ ಹಂತದಲ್ಲಿ ಟ್ರೈಕೋಡರ್ಮಾ ಉಪಯೋಗಿಸುವುದರಿಂದ ಶಿಲೀಂಧ್ರ ರೋಗ ತಡೆಗಟ್ಟಬಹುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಬಿ.ಜಿ. ಜಗದೀಶ್ ಹೇಳಿದರು.
ನಗರದಲ್ಲಿ ಮಂಗಳವಾರ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಂಶೋಧನಾ ವಲಯ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಅರಣ್ಯ ನರ್ಸರಿಯಲ್ಲಿ ಟ್ರೈಕೋಡರ್ಮಾ ಬಳಕೆ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ಉತ್ತಮ ಪ್ಲಾಂಟೇಷನ್: ನಮ್ಮ ಇಲಾಖೆಗಳಲ್ಲಿ ಗುಣಮಟ್ಟದ ಸಸಿ ಬೆಳೆಯುವುದು ತುಂಬಾ ಮುಖ್ಯ. ಹಾಗೆ ಬೆಳೆದಾಗ ಮಾತ್ರ ಉತ್ತಮ ಪ್ಲಾಂಟೇಷನ್ ಮಾಡಲು ಸಾಧ್ಯ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ರಡ್ಡೇರ, ನಮ್ಮ ಇಲಾಖೆಗಳಲ್ಲಿನ ನರ್ಸರಿಗಳಲ್ಲಿ ಇಲ್ಲಿಯವರೆಗೂ ಟ್ರೈಕೋಡರ್ಮಾವನ್ನು ಅಳವಡಿಸಿಕೊಂಡಿರುವುದಿಲ್ಲ.
ನಾವು ನರ್ಸರಿಯಲ್ಲಿ ಹಲವಾರು ರೋಗಗಳಿಗೆ ಔಷಧಿ ಸಿಂಪಡಿಸಿದ್ದೇವೆ. ಆದರೆ ಅವುಗಳಿಂದ ರೋಗ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದ್ದರಿಂದ ನರ್ಸರಿಯಲ್ಲಿ ಟ್ರೈಕೋಡರ್ಮಾ ಅಳವಡಿಸಿಕೊಂಡು ಶಿಲೀಂಧ್ರ ರೋಗವನ್ನು ಸಂಪೂರ್ಣ ತಡೆಗಟ್ಟಿ ಉತ್ತಮ ಸಸಿ ಪಡೆಯಬೇಕು ಎಂದು ತಿಳಿಸಿದರು.
ಶಿಲೀಂಧ್ರ ಜೀವಿ: ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ಸಂಯೋಜಕ ಡಾ. ಬಿ.ಸಿ. ಹನುಮಂತಸ್ವಾಮಿ, ಟ್ರೈಕೋಡರ್ಮಾ ಒಂದು ಶಿಲೀಂಧ್ರ ಅಣುಜೀವಿ. ಇದನ್ನು ಹೆಚ್ಚಾಗಿ ದ್ವಿದಳ ಧಾನ್ಯ, ಎಣ್ಣೆಕಾಳು ಬೆಳೆ ಹಾಗೂ ತರಕಾರಿ ಬೆಳೆಗಳಲ್ಲಿ ಬೀಜೋಪಚಾರ ಮುಖಾಂತರ ಬಳಕೆ ಮಾಡುತ್ತೇವೆ. ಇದನ್ನು ಕೊಟ್ಟಿಗೆ ಗೊಬ್ಬರದ ಜೊತೆ ಬೀಜೋಪಚಾರ ಮುಖಾಂತರ ಹಾಗೂ ಡೆಂಚಿಂಗ್ ಮಾಡುವುದರ ಮುಖಾಂತರ ಬಳಕೆ ಮಾಡಬಹುದು. ನರ್ಸರಿ ಹಂತದಲ್ಲಿ ರೋಗ ಬಂದರೆ ತಡೆಗಟ್ಟುವುದು ಕಷ್ಟ. ಅಂತಹ ಸಮಯದಲ್ಲಿ ಟ್ರೈಕೋಡರ್ಮಾ ಬಳಕೆ ಮಾಡುವುದರಿಂದ ರೋಗವನ್ನು ತಡೆಗಟ್ಟಬಹುದೆಂದರು.
ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಕೆ.ಆರ್. ಶ್ರೀನಿವಾಸ ನಿರೂಪಿಸಿದರು. ಡಾ. ನಾಗರಾಜಪ್ಪ ಅಡಿವಪ್ಪರ್ ವಂದಿಸಿದರು.
10ರಂದು ಔಷಧ ವ್ಯಾಪಾರ ಬಂದ್
ಶಿವಮೊಗ್ಗ: ಕೇಂದ್ರ ಸರ್ಕಾರದ ಔಷಧಿ ವ್ಯಾಪಾರಿ ವಿರೋಧಿ ನೀತಿಯನ್ನು ವಿರೋಧಿಸಿ ಮೇ10ರಂದು ರಾಷ್ಟ್ರಾದ್ಯಂತ ಔಷಧ ವ್ಯಾಪಾರ ವಹಿವಾಟು ಬಂದ್ ಮಾಡಲಿದ್ದು, ಜಿಲ್ಲೆಯಲ್ಲಿಯೂ ಕೂಡ ಎಲ್ಲಾ ಔಷಧಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವಂತೆ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ತಿಳಿಸಿದೆ. ಔಷಧಿ ವ್ಯಾಪಾರಿಗಳನ್ನು ಬಲಿಪಶು ಮಾಡುತ್ತಿರುವ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್ನ ಪರಿಚ್ಛೇದ 19ರ ತಿದ್ದುಪಡಿಮಾಡಬೇಕು, ವಿದೇಶಿ ನೇರ ಬಂಡವಾಳವನ್ನು ಹಿಂಪಡೆಯಬೇಕು, ಫಾರ್ಮಸಿಸ್ಟ್ಗಳ ಕೊರತೆಯನ್ನು ನೀಗಿಸಲು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ನ ಪರಿಚ್:ೇದ 65(15)(ಸಿ)ಗೆ ತಿದ್ದುಪಡಿ ಮಾಡಬೇಕು.
ಔಷಧಿ ಮೇಲಿನ ಲಾಭಾಂಶವನ್ನು ಕಡಿಮೆ ಮಾಡುವ ನೀತಿಯನ್ನು ಕೈಬಿಡಬೇಕು ಎಂದು ಸಂಘದ ಕಾರ್ಯದರ್ಶಿ ಜಿ. ಹಾಲಪ್ಪ ಒತ್ತಾಯಿಸಿದ್ದಾರೆ.
ಬಿಜೆಪಿಯಿಂದ ಉಚ್ಚಾಟಿಸಲು ಆಗ್ರಹ
ಶಿಕಾರಿಪುರ: ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸಂಗಮೇಶ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು ಕೂಡಲೇ ಮುಖಂಡರು ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಬಿಜೆಪಿ ನಗರಾಧ್ಯಕ್ಷ ಬೆಂಕಿ ಯೋಗೀಶ್ ಆಗ್ರಹಿಸಿದ್ದಾರೆ. ಪಕ್ಷದ ಅಧಿಕೃತ ಅಬ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು, ಮುಖಂಡರ ಸಹಿತ ಪದಾಧ್ಕಾರಿಗಳು ಶ್ರಮಿಸಿದ್ದು, ಜವಾಬ್ದಾರಿಯುತ ಹುದ್ದೆಯಲ್ಲಿದ್ದ ಸಂಗಮೇಶ್ ಪಕ್ಷದ ರಹಸ್ಯವನ್ನು ಕೆಜೆಪಿ, ಕಾಂಗ್ರೆಸ್ಗೆ ರವಾನಿಸಿ ಪಕ್ಷ ವಿರೋಧಿ ಕೃತ್ಯ ಎಸಗಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಅವರನ್ನು ಕೂಡಲೇ ಉಚ್ಚಾಟಿಸುವಂತೆ ಜಿಲ್ಲಾ ಘಟಕವನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

