ಗ್ರಾಮಾಂತರದಲ್ಲಿ ಜೆಡಿಎಸ್ ಪೈರು: ಶಾಸಕ ಕೆಜಿಕೆಗೆ 4ನೇ ಸ್ಥಾನ
ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಳೆ ತೆಗೆದಿದೆ. ಇಲ್ಲಿ ಶಾರದಾ ಪೂರ್ಯಾನಾಯ್ಕ ಕೆಜೆಪಿ ಅಭ್ಯರ್ಥಿ ಬಸವಣ್ಯಪ್ಪ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಇಲ್ಲಿ ನಗಣ್ಯ.
ಯಡಿಯೂರಪ್ಪ ಪ್ರಭಾವ ಇರುವ ಈ ಕ್ಷೇತ್ರದಲ್ಲಿ ಕೆಜೆಪಿಗೆ ಆರಂಭದಲ್ಲೇ ಹೊಡೆತ ಬಿದ್ದಿತ್ತು.
ಈ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಇಚ್ಚಿಸಿದ್ದ ಜಿಪಂ ಸದಸ್ಯ ಅಶೋಕ ನಾಯ್ಕ ಕ್ಷೇತ್ರ ಸುತ್ತಿ, ತಾಲೀಮು ನಡೆಸಿದ್ದರು.
ಅಂತಿಮ ಕ್ಷಣದಲ್ಲಿ ಕೆಜೆಪಿ ಬಸವಣ್ಯಪ್ಪನವರಿಗೆ ಟಿಕೆಟ್ ಘೋಷಿಸಿತು. ಹೀಗಾಗಿ ಅಶೋಕ್ ನಾಯ್ಕ ಬಿಜೆಪಿಗೆ ವಾಪಾಸು ಬಂದರು. ಇದೂ ಕೆಜೆಪಿಗೆ ದೊಡ್ಡ ಹಿನ್ನೆಡೆ. ಇದೇ ಜೆಡಿಎಸ್ ಗೆಲುವಿಗೂ ಸಹಕಾರಿಯಾಯಿತು.
ಅಷ್ಟೇ ಅಲ್ಲದೇ, ಕ್ಷೇತ್ರ ಸುತ್ತಾಡಿ ಜನರ ಮನಸ್ಸು ಗೆದ್ದ ಶಾರದಾ ಪೂರ್ಯಾನಾಯ್ಕ, ಸಹಾನುಭೂತಿಯನ್ನು ಗಳಿಸಿದ್ದರು. ಜೊತೆಗೆ ಬಿಜೆಪಿ ಶಾಸಕ ಕೆ.ಜಿ. ಕುಮಾರಸ್ವಾಮಿ ವಿರುದ್ಧ ಎದ್ದಿದ್ದ ಅಲೆ ಜೆಡಿಎಸ್‌ಗೆ ಮತವಾಗಿ ಪರಿವರ್ತಿತವಾಯಿತು.
ಕ್ಷೇತ್ರದಲ್ಲಿ ನಡೆಯದ ಅಭಿವೃದ್ಧಿ ಕಾರ್ಯಗಳು, ಜನರ ಸಮಸ್ಯೆ ಆಲಿಸದ ಪರಿಣಾಮ ಬಿಜೆಪಿ ಸ್ಥಾನ ಕಳೆದುಕೊಳ್ಳುವಂತಾಯಿತು.
ಶಾರದ ಪೂರ್ಯಾನಾಯ್ಕ (ಜಿಡಿಎಸ್) 48,639
ಜಿ. ಬಸವಣ್ಣಪ್ಪ (ಕೆಜೆಪಿ) 38,530
ಕರಿಯಣ್ಣ (ಕಾಂಗ್ರೆಸ್) 35,640
ಕೆ.ಜಿ. ಕುಮಾರಸ್ವಾಮಿ (ಬಿಜೆಪಿ) 12,435
ಶಿವರುದ್ರಯ್ಯ ಸ್ವಾಮಿ (ಪಕ್ಷೇತರ) 1,874
ವಿ. ಭಗವಾನ್ ( ಪಕ್ಷೇತರ) 1,499
ಎಲ್. ಚಂದ್ರಾನಾಯ್ಕ (ಜೆಡಿಯು) 1,034
ಎನ್.ಟಿ. ಶಿವಮೂರ್ತಿ (ಪಕ್ಷೇತರ) 1,005
ಎಂ. ಗುರುಮೂರ್ತಿ (ಪಕ್ಷೇತರ) 770
ವಿರೇಶಪ್ಪ (ಬಿಎಸ್‌ಪಿ) 687
ಟಿ. ಶಿವಕುಮಾರ (ಬಿಎಸ್‌ಆರ್ ಕಾಂಗ್ರೆಸ್) 619
ರುದ್ರೇಶ್ (ಪಕ್ಷೇತರ) ......556
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

