ಗ್ರಾಮೀಣ ಪ್ರದೇಶಕ್ಕೆ ಆರೋಗ್ಯ ಸೇವೆ ಅಗತ್ಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 12
ಆರೋಗ್ಯ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು ಗ್ರಾಮೀಣ ಪ್ರದೇಶಗಳಿಗೂ ತಲುಪುವಂತಾಗಬೇಕು ಎಂದು ಜಿಲ್ಲಾ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಹೇಳಿದರು.
ತಾಳಗುಪ್ಪ ಗ್ರಾಮದ ನಿಸರ್ಗ ಚಿಕಿತ್ಸಾಲಯದಲ್ಲಿ ನರ ಸಂಬಂಧಿ ಕಾಯಲೆಗಳ ಉಚಿತ ತಪಾಸಣಾ ಶಿಬಿರ ಹಾಗೂ ಫಿಸಿಯೋ ಥೆರಪಿಯ ಯಂತ್ರೋಪಕರಣಗಳಿಗೆ ಚಾಲನೆ ನೀಡಿ ಅವರು, ವೈದ್ಯಕೀಯ ನೆರವು ಎಲ್ಲರ ಅಗತ್ಯವಾಗಿದ್ದರೂ ಬಹುತೇಕ ವೈದ್ಯರು ನಗರದಲ್ಲಿ ಮಾತ್ರ ನೆಲೆಸಿ ವೃತ್ತಿ ನಡೆಸಲು ಉತ್ಸುಕರಾಗಿರುತ್ತಾರೆ.
ಇದರಿಂದ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೌಲಭ್ಯ ಕೊರತೆ ಇದ್ದು, ಸಣ್ಣ ಪುಟ್ಟ ಕಾಯಲೆಗಳಿಗೂ ಪೇಟೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಆಹಾರ ನಿಯಂತ್ರಣ ಅಗತ್ಯ: ವೈದ್ಯ ಡಾ. ಕಮಲ್ ಪಟೇಲ್ ಮಾತನಾಡಿ, ಪಾರ್ಶ್ವವಾಯು, ನರಸಂಬಂಧಿ ಕಾಯಿಲೆಗಳಿಗೆ ಔಷಧಿಯ ಜೊತೆಗೆ ಆಹಾರ ನಿಯಂತ್ರಣ, ಸೂಕ್ತ ವ್ಯಾಯಾಮ ಅಗತ್ಯ ಇದ್ದು, ದೀರ್ಘಕಾಲದ ಆರೈಕೆ ಅಗತ್ಯವಾಗಿರುತ್ತದೆ ಎಂದರು.
ಹಳ್ಳಿಯಲ್ಲಿ ಹುಟ್ಟಿ ಬೆಳೆದ ಡಾ. ಪ್ರಶಾಂತ್ ಕುಮಾರ ತಮ್ಮ ಸೇವೆ ಗ್ರಾಮೀಣ ಬಡವರಿಗೆ ತಲುಪಬೇಕೆಂಬ ಆಶಯದಿಂದ ಗ್ರಾಮದಲ್ಲಿ ಚಿಕಿತ್ಸಾಲಯ ಪ್ರಾರಂಭಿಸಿದ್ದಾರೆ.
ಪಾರ್ಶ್ವವಾಯು, ಮುಖ ವಕ್ರತೆ, ಮಾಂಸ ಖಂಡದ ನೋವು,ಮೂಳೆ ಸಂಬಂಧಿತ ನೋವು, ಮಾನಸಿಕ ಅಸ್ವಸ್ಥತೆ ಮೊದಲಾದ ನರಸಂಬಂಧಿ ಕಾಯಲೆಗಳಿಗೆ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಚಿಕಿತ್ಸೆ ನೀಡಬಯಸಿದ್ದಾರೆ ಎಂದರು.
ಡಾ.ಪ್ರಶಾಂತ ಕುಮಾರ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಪಾರ್ಶ್ವವಾಯು ನಿಯಂತ್ರಣವನ್ನು ಅಪೇಕ್ಷಿಸಿ ಗ್ರಾಮದಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಪ್ರತಿ ಭಾನುವಾರ ತಜ್ಞ ವೈದ್ಯರು ರೋಗ ತಪಾಸಣೆ ನೆಡೆಸಿ ಚಿಕಿತ್ಸಾ ಕ್ರಮವನ್ನು ತಿಳಿಸಿಕೊಡುತ್ತಾರೆ.
ಅಗತ್ಯವಿರುವ ಎಲ್ಲರಿಗೂ ಈ ಅವಕಾಶ ದೊರಕಬೇಕೆಂಬುದು ತಮ್ಮ ಅಪೇಕ್ಷೆ ಎಂದರು.
ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ರೋಗಿಗಳನ್ನು ತಪಾಸಿಸಿ, ಚಿಕಿತ್ಸಾ ಕ್ರಮಗಳ ಮಾಹಿತಿ ನೀಡಲಾಯಿತು.
ಈ ವೇಳೆ ಲಕ್ಮೀ, ದೇವಯ್ಯ, ಮಿಹಿರ, ರಶ್ಮಿ, ಜಯ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

