ವಿಪ್ರ ವೈವಾಹಿಕ ಸಮಸ್ಯೆ ಪರಿಹಾರಕ್ಕೆ ವೆಬ್‌ಸೈಟ್
ಕಪ್ರ ವಾರ್ತೆ,ಶಿವಮೊಗ್ಗ, ಮೇ 19
2012ರ ಮೇ 19 ಮತ್ತು 20ರಂದು ಜಿಲ್ಲೆಯ ವಿವಿಧ ವಿಪ್ರ ಸಮಾಜದ ಸಂಘಟನೆಗಳು ಸೇರಿ ಶಿವಮೊಗ್ಗದಲ್ಲಿ ವಿಪ್ರ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದವು, ಇಲ್ಲಿ ವಿಪ್ರ ವೈವಾಹಿಕ ಸಮಸ್ಯೆ ಪರಿಹಾರಕ್ಕೆ ವಿಶೇಷ ಪ್ರಯತ್ನಗಳಾಗಬೇಕೆಂದು ನಿರ್ಣಯಿಸಲಾಗಿತ್ತು. ಅದರಂತೆ ವಿವಿಧ ಕಾರ್ಯಗಳು ನಡೆದಿವೆ.
ಅದರ ಒಂದು ಭಾಗವಾಗಿ ಭಾನುವಾರ ಶಾಂತಲಾ ಸ್ಪೆರೋ ಕ್ಯಾಸ್ಟ್ ಸಭಾಂಗಣದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಪ್ರ ವಿವಾಹ ಶಿವಮೊಗ್ಗ (ಢ್ಝಠ್ಠಛಢ್ಝಢಝಛಝ್ಝಟ್ಟ್ಜಛ.್ಝಟಿ) ಎಂಬ ಅಂತರ್ಜಾಲ ತಾಣ ವಿದ್ಯುಕ್ತವಾಗಿ ಚಾಲನೆಗೊಂಡಿತು.
ವೆಬ್‌ಸೈಟ್ ವಿಶೇಷ: ಶಿವಮೊಗ್ಗದ ಬಿಎಸ್‌ಎನ್‌ಎಲ್ ವಿಪ್ರ ತಂಡವು ಯಾವುದೇ ವಾಣಿಜ್ಯಿಕ ವ್ಯವಹಾರದ ಅಂತರ್ಜಾಲಕ್ಕೆ ಕಡಿಮೆ ಇಲ್ಲದಂತೆ ವೆಬ್‌ಸೈಟವೊಂದನ್ನು ವಿನ್ಯಾಸಗೊಳಿಸಿದೆ.
ವೈವಾಹಿಕ ಆಸಕ್ತ ಬ್ರಾಹ್ಮಣ ಯುವಕ ಯುವತಿಯರು ತಮ್ಮ ವೈಯಕ್ತಿಕ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನೆ: ನೂತನ ಅಂತರ್ಜಾಲ ತಾಣವನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ. ಬಿ. ವೆಂಕಟರಾವ್ ಉದ್ಘಾಟಿಸಿದರು. ಮಹಾಸಭಾ ಅಧ್ಯಕ್ಷ ಡಾ. ಬಿ.ಎನ್.ವಿ. ಸುಬ್ರಹ್ಮಣ್ಯ, ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಗರಸಭೆ ಸದಸ್ಯೆ ಸುರೇಖಾ ಮುರಳೀಧರ್, ಆರ್. ಅಚ್ಯುತರಾವ್, ಕೆ. ದಿವಾಕರ್, ಕೆ.ವಿ. ವಸಂತಕುಮಾರ್, ಮ.ಸ.ನಂಜುಂಡಸ್ವಾಮಿ, ಅನಂತ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

