ಶಿವಮೊಗ್ಗ

ಕಿಸಾನ್ ಸಂಘದಿಂದ ಬೆಸ್ಕಾಂಗೆ ಮುತ್ತಿಗೆ

Published On :

ನಾಯಕಹಟ್ಟಿ: ಇಲ್ಲಿನ ಬೆಸ್ಕಾಂ ಕಚೇರಿಗೆ ಕಿಸಾನ್ ಸಂಘದ ಜಿಲ್ಲಾ ಹಾಗೂ ಹೋಬಳಿ ಅಧ್ಯಕ್ಷರು ಹಾಗೂ ಸದಸ್ಯರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿದ್ಯುತ್ ಪ್ರಮುಖರಾದ ಜಿ. ತಿಪ್ಪೇಸ್ವಾಮಿ ಟ್ರಾನ್ಸ್ಫಾರ್ಮರ್ ರಿಪೇರಿಯಲ್ಲಿ ಅಗುತ್ತಿರುವ ಅವ್ಯವಹಾರ ಇಡೀ ರೈತ ಸಮುದಾಯ ಅತಿ ಹಿಂದುಳಿಯಲು ಕಾರಣವಾಗಿದೆ. ಪ್ರತಿ ಹೋಬಳಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸೆಕ್ಷನ್ ಆಫೀಸರ್ಗಳು ರೈತರ ವಾಹನದಲ್ಲಿ ನೇರವಾಗಿ ರಿಪೇರಿ ಸೆಂಟರ್ಗಳಲ್ಲಿ ಬಿಡಿಸಿ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ನಾಯಕನಹಟ್ಟಿಯಲ್ಲಿ ಮೂರು ದಿನಗಳ ಹಿಂದೆ ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದ್ದು ಅದನ್ನು ಇನ್ನೂ ದುರಸ್ತಿಗೊಳಿಸಲ್ಲಿ ಎಂದು ಅರೋಪಿಸಿದರು.
ಪ್ರತಿಕ್ರಿಯೆ: ಸಹಾಯಕ ಸೆಕ್ಷನ್ ಆಫೀಸರ್ ಮುರುಳಿಧರಾಚಾರ್ ಮಾತನಾಡಿ, ಬೋಸೇದೇವರಹಟ್ಟಿಯ ವಕೀಲರ ಕಪಿಲೆಯಲ್ಲಿ ಮೂರು ದಿನಗಳ ಹಿಂದೆ ಟ್ರಾನ್ಸ್ಫಾರ್ಮರ್ ದುರಸ್ತಿ ಕಾರ್ಯ ನಡೆದಿತ್ತು. ತಾಂತ್ರಿಕ ಹಾಗೂ ಪ್ರಕೃತಿ ವಿಕೋಪದಿಂದ ಮತ್ತೆ ಸುಟ್ಟು ಹೋಗಿದೆ. ನಾನು ಖುದ್ದಾಗಿ ಹಿರಿಯೂರಿನ ಶಾಖೆಗೆ ಟ್ರಾನ್ಸ್ಫಾರ್ಮರ್ ತೆಗೆದುಕೊಂಡು ಹೋಗಿ ದುರಸ್ತಿ ಪಡಿಸಿ ಇಂದು ಸಂಜೆಯೊಳಗೆ ಸರಿಪಡಿಸುತ್ತೇನೆ. ರೈತರಿಗೆ ವಿದ್ಯುತ್ ಅಭಾವ ನೀಗಿಸಿವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಾಳೆಕಾಯಿ ತಿಪ್ಪೇಸ್ವಾಮಿ, ಶಿವಕುಮಾರ್, ಪಂಚಾಕ್ಷರಿಸ್ವಾಮಿ, ಮಾರಪ್ಪ, ಪ್ರಭಾಕರ, ಪಾಲಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.