ಶಿವಮೊಗ್ಗ

ಧರ್ಮದಲ್ಲಿ ವೈಚಾರಿಕತೆ ಗಟ್ಟಿತನವಿದೆ: ರಂಭಾಪುರಿ ಶ್ರೀ

Published On :

ಸೊರಬ: ಧರ್ಮದಲ್ಲಿ ವೈಚಾರಿಕತೆಯ ಗಟ್ಟಿ ತನವಿರುವುದರಿಂದ ಜಾತಿಗಿಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ, ಜಾತಿ ಮತ್ತು ರಾಜಕೀಯಗಳಿಂದಾಗಿ ಧರ್ಮ ನಶಿಸುವಂತಾಗಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ತಾಲೂಕು ಚಿಕ್ಕ ಇಡಗೋಡು ಗ್ರಾಮದ ಜೀರ್ಣೋದ್ಧಾರಗೊಂಡ ಶ್ರೀ ವೀರಭದ್ದೇಶ್ವರ ದೇಗುಲದ ಉದ್ಘಾಟನೆಗೆ ಆಗಮಿಸಿದ ಅವರು ಧರ್ಮ ಜಾಗೃತಿ ಸಭೆ ಉದ್ದೇಶಿಸಿ ಮಾತನಾಡಿದರು.
ಶಾಂತಯುತ ಜೀವನ: ಭೌತಿಕ ಜಗತ್ತಿನಲ್ಲಿ ಜನತೆ ಸಂಪತ್ತು ಮತ್ತು ಅಧಿಕಾರವನ್ನು ಬೆಂಬತ್ತಿರುವ ಹಿನ್ನೆಲೆಯಲ್ಲಿ ಮಾನಸಿಕ ಶಾಂತಿಯನ್ನು ಕಳೆದುಕೊಂಡಿದ್ದಾರೆ. ದೇಹವನ್ನು ದುಡಿತಕ್ಕೆ, ಮನಸ್ಸನ್ನು ದೇವರಿಗೆ, ಬದುಕನ್ನು ಗುರುವಿಗೆ ಮುಡುಪಿಟ್ಟಲ್ಲಿ ಶಾಂತಯುತ ಜೀವನದೊಂದಿಗೆ ಮುಕ್ತಿ ದೊರೆಯುವುದರಲ್ಲಿ ಸಂದೇಹವಿಲ್ಲ ಎಂದರು.
ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯರು ಆಶಿರ್ವಚನ ನೀಡಿ, ಪ್ರಕೃತಿಯ ಮೇಲೆ ನಡೆಯುತ್ತಿರುವ ಮಾನವರ ನಿರಂತರ  ಪ್ರಹಾರದಿಂದಾಗಿ ಇಂದು ಜನ, ಜಾನುವಾರುಗಳು ತತ್ತರಿಸಿವೆ. ಭೀಕರ ಕ್ಷಾಮ ತಲೆದೋರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಧರ್ಮದ ಬಗೆಗಿನ ನಿರ್ಲಕ್ಷ್ಯವೆ ಇದಕ್ಕೆ ಕಾರಣ ಎಂದು ಹೇಳಿದರು.
ದೇಗುಲ ಸಮಿತಿಯವರು, ಗ್ರಾಮಸ್ಥರು, ವಿವಿಧ ಮಠದ ಶ್ರೀಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.