ಶ್ರೀ ರಂಗನಾಥ ಬ್ರಹ್ಮ ರಥೋತ್ಸವ
ಸೊರಬ: ಪಟ್ಟಣದ ಪುರವರಧೀಶ್ವರ ಶ್ರೀ ರಂಗನಾಥ ದೇವರ ಬ್ರಹ್ಮ ರಥೋತ್ಸವ ಸಂಭ್ರಮದಿಂದ ಶನಿವಾರ ಜರುಗಿತು.
ವೇ.ವಿ. ನಾರಾಯಣಭಟ್‌ರಿಂದ ಆಗಮೋಕ್ತ ಧಾರ್ಮಿಕ ವಿಧಿ, ವಿಧಾನಗಳು, ಸಾಗರ ಭೀಮನಕೋಣೆ ಲಕ್ಷ್ಮೀನಾರಾಯಣ ಭಟ್ಟರ ತಾಂತ್ರಿಕ ಕೈಂಕರ್ಯ, ಹಳೇಸೊರಬ ಗ್ರಾಮಸ್ಥರ ಚಪ್ಪರ ಸೇವೆ, ಹಿರೆಶಕುನ ಗ್ರಾಮಸ್ಥರ ತೇರು ಕಟ್ಟೋಣ ಕೆಲಸ, ಪುರ ನಾಗರಿಕರು ತೇರು ಎಳೆಯುವ ಕಾಯಕದಲ್ಲಿ ಉತ್ಸಾಹ ಕಂಡುಬಂದಿತು.
ಇಲ್ಲಿನ ಮುಖ್ಯ ರಸ್ತೆ ದುರಸ್ತಿ ಆಗಿರುವುದರಿಂದ ತೇರನ್ನು ಸುಲಲಿತವಾಗಿ ಎಳೆಯುವ ಅವಕಾಶವಿದ್ದರೂ ರಥದ ಚಕ್ರಗಳು ಶಿಥಿಲಗೊಂಡಿರುವುದರಿಂದ ಎಳೆಯಲು ಮುಜರಾಯಿ ಇಲಾಖೆ ಅವಕಾಶ ನೀಡಲಿಲ್ಲ. ತುಸು ದೂರ ಎಳೆದು ತೇರೆಳೆಯುವ ಶಾಸ್ತ್ರ ಮಾಡಲಾಯಿತು.
ರಥ ಎಳೆಯಲು ಅವಕಾಶ ಸಿಗದಿದ್ದಕ್ಕೆ ಕೆಲ ಪುರ ನಿವಾಸಿಗಳು ಆಕ್ಷೇಪಿಸಿದರು. ರಥ ಶಿಥಿಲಗೊಂಡಿವುದು ಗಮನಿಸಲಿಲ್ಲವೆ, ಹಾಗಾದರೆ ಮುಜರಾಯಿ ಇಲಾಖೆ ಕೆಲಸವೇನು, ದೇಗುಲ ಸಮಿತಿ ಇನ್ನೂ ಯಾಕೆ ಆಗಿಲ್ಲ ಮುಂತಾದ ಪ್ರಶ್ನೆಗಳನ್ನು ಇರಿಸಿದ್ದು, ಪ್ರಾಚೀನ ಕಾಲದಿಂದಲೂ ಬಂದಂತ ಪದ್ಧತಿಗೆ ಚ್ಯುತಿ ತರುವ ಮೂಲಕ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬೇಸರಿಸಿದರು.
ತಹಸೀಲ್ದಾರ್ ಎನ್. ತೇಜಸ್ ಕುಮಾರ್ ರಥೋತ್ಸವದ ವೇಳೆ ಗೈರು ಹಾಜರಾಗಿದ್ದರು. ರಥೋತ್ಸವದ ಅಂಗವಾಗಿ ಸತತ 5 ದಿನಗಳಿಂದ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ಗಣಪತಿ ಪೂಜೆ, ಪುಣ್ಯಾ- ನಾಂದಿ, ಮೃತ್ತಿಕಾಹರಣ, ಧ್ವಜಾರೋಹಣ, ಭೇರಿತಾಡನ, ಮಹಾಬಲಿ, ಗರುಡ ಯಂತ್ರೋತ್ಸವ, ಪುಷ್ಪ ಯಂತ್ರೋತ್ಸವ, ಹೂವಿನ ತೇರು ನಡೆಯಿತು.
ಭಾನುವಾರ ಅವಭೃತ, ಸೋಮವಾರ ಸಂಧಾನ ಸೇವೆ, ಪೂರ್ಣಾಹುತಿ, ಅಂಕುರ ಪ್ರಸಾದ ವಿತರಣೆ ನಡೆಯಲಿದೆ. ಅಂದು ಸಂಜೆ ಸವಿತಾ, ಡಾ.ಎಂ. ಕೆಭಟ್ ಸೇವೆ ಶಿವಮೊಗ್ಗ ನಾಟ್ಯಶ್ರೀ ಕಲಾತಂಡದ ವಿದ್ವಾನ್ ದತ್ತಮೂರ್ತಿ ಭಟ್ ಸಾರಥ್ಯದ ಲಂಕಾದಹನ ಯಕ್ಷಗಾನ ಇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

